Connect with us

Bengaluru City

ಹೆಚ್‍ಡಿಕೆ ಮನೆಯಲ್ಲಿ ಮದ್ವೆ ಸಂಭ್ರಮ- ನಿಖಿಲ್ ಲಗ್ನಪತ್ರಿಕೆಗೆ ಪೂಜೆ

Published

on

ಬೆಂಗಳೂರು: ಮೈಸೂರಿನಲ್ಲಿ ಬಿಗ್ ಬಾಸ್ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮದುವೆ ನಡೆದರೆ ಇತ್ತ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮನೆಯಲ್ಲಿ ಪುತ್ರನ ಮದುವೆಯ ಸಂಭ್ರಮ ಕಳೆಗಟ್ಟಿದೆ.

ಹೌದು. ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆಯ ಲಗ್ನ ಪತ್ರಿಕೆಗೆ ಪೂಜಾ ಕಾರ್ಯ ನೆರವೇರಿಸಲಾಯಿತು. ಈ ಮೂಲಕ ಇಂದಿನಿಂದ ಅಧಿಕೃತವಾಗಿ ಲಗ್ನ ಪತ್ರಿಕೆ ಹಂಚಿಕೆ ಮಾಡೋ ಕೆಲಸ ಪ್ರಾರಂಭ ಮಾಡಲಾಗುತ್ತಿದೆ.

ಹೆಚ್‍ಡಿಡಿ ಪತ್ನಿ ಚೆನ್ನಮ್ಮ ಹಾಗೂ ಹೆಚ್‍ಡಿಕೆ ದಂಪತಿ ಮನೆ ದೇವರ ಮುಂದೆ ಲಗ್ನಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದರು. ಈ ಪೂಜಾ ಕಾರ್ಯದಲ್ಲಿ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ಬಳಿಕ ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿಖಿಲ್ ಹಾಗೂ ರೇವತಿ ಮದುವೆ ಲಗ್ನ ಪತ್ರಿಕೆಗಳಿಗೆ ನಮ್ಮ ತಾಯಿಯವರು ಪೂಜೆ ನೆರವೇರಿಸಿದ್ದಾರೆ. ಅಭಿಮಾನಿಗಳು ಹಾಗೂ ಅವರ ಕಾರ್ಯಕರ್ತರು ಅವರವರ ಇಷ್ಟದಂತೆ ಲಗ್ನ ಪತ್ರಿಕೆಯನ್ನ ಮಾಡಿಸಿದ್ದಾರೆ. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಮದುವೆಗೆ ಆಹ್ವಾನ ಮಾಡುತ್ತೇನೆ. ಪ್ರಧಾನಿ ಮೋದಿಯವರಿಗೆ ಕೂಡ ಮದುವೆಗೆ ಆಹ್ವಾನ ಮಾಡುತ್ತೇನೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *