ಬೆಂಗಳೂರು: ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಭೇಟಿಯಾಗಲಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳಲು ಡಿಕೆಶಿಯವರು ಕುಮಾರಸ್ವಾಮಿ ಹೆಗಲಿಗೆ ಹೆಗಲು ಕೊಟ್ಟಿದ್ದರು. ಹೀಗಾಗಿ ಹೆಚ್‍ಡಿಕೆ ಇಂದು ಡಿಕೆಶಿಯನ್ನ ತಿಹಾರ್ ಜೈಲಿನಲ್ಲಿ ಭೇಟಿ ಆಗಲಿದ್ದಾರೆ. ಜೈಲಿಗೆ ಹೋದ ಬಳಿಕ ಇಬ್ಬರ ಮೊದಲ ಭೇಟಿ ಇದಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನಡೆಯುವ ಸಾಧ್ಯತೆ ಇದ್ದು, ಮಾಜಿ ಸಚಿವರಾದ ಸಾರಾ ಮಹೇಶ್ ಮತ್ತು ಸಿ ಎಸ್ ಪುಟ್ಟರಾಜು ಮಾಜಿ ಸಿಎಂಗೆ ಸಾಥ್ ಕೊಡಲಿದ್ದಾರೆ. ಇದನ್ನೂ ಓದಿ: ಡಿಕೆಶಿ ಭೇಟಿಯಾಗಲಿದ್ದಾರೆ ಸೋನಿಯಾ ಗಾಂಧಿ
Advertisement
Advertisement
ಇಡಿ ಕೊಟ್ಟಿರುವ ಸಮನ್ಸ್ ರದ್ದು ಕೋರಿ ಡಿಕೆಶಿ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟಿನಲ್ಲಿ ನಡೆಯಲಿದೆ. ಕಳೆದ ಸಲ ವಿಚಾರಣೆ ನಡೆದಿದ್ದಾಗ ಕೊಟ್ಟಿದ್ದ ಸಮನ್ಸ್‍ನ್ನು ವಾಪಸ್ ಪಡೆದು ಒಂದು ವಾರದೊಳಗೆ ಹೊಸದಾಗಿ ಸಮನ್ಸ್ ಕೊಡೋದಾಗಿ ಇಡಿ ಹೇಳಿತ್ತು.
Advertisement
ತಮಗೆ 85 ವರ್ಷ ವಯಸ್ಸಾಗಿದ್ದು, ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಅಧಿಕಾರ ಇಲ್ಲ ಅನ್ನೋದು ಡಿಕೆಶಿ ತಾಯಿ ವಾದವಾಗಿತ್ತು. ಇತ್ತ ದೆಹಲಿ ಬದಲು ಬೆಂಗಳೂರಲ್ಲೇ ವಿಚಾರಣೆಗೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಡಿಕೆಶಿ ಪತ್ನಿ ಹೇಳಿದ್ದರು.