ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪೆನ್‍ಡರೈವ್ ಪ್ರಕರಣ ಸಂಬಂಧ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಅವರು, ದೊಡ್ಡ ತಿಮಿಂಗಿಲ ಹಿಡಿದ್ರೆ ಎಲ್ಲಾ ಸತ್ಯ ಹೊರಬರುತ್ತೆ. ನನ್ನ ವಿರುದ್ಧ ಮಾತನಾಡೋಕೆ ಶಾಸಕರಿಗೆ ದೊಡ್ಡ ತಿಮಿಂಗಲವೇ ಹೇಳಿರೋದು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುತ್ತಿದ್ದ ಇಬ್ಬರು ಶಂಕಿತರ ಅರೆಸ್ಟ್
ದೊಡ್ಡ ತಿಮಿಂಗಿಲದ ಆಡಿಯೋ ಬಿಟ್ರೂ ಅಂತ ದೇವರಾಜೇಗೌಡ (Devaraje Gowda) ಅರೆಸ್ಟ್ ಮಾಡಿಸಿದ್ದಾರೆ. ಯಾವ ದಾಖಲೆ ಬಿಡುಗಡೆ ಮಾಡೋಕೆ ದೇವರಾಜೇಗೌಡ ಹೊರಟಿದ್ರು..?, ದೇವರಾಜೇಗೌಡ ಬಂಧಿಸಿ ಯಾವ ದಾಖಲೆಯನ್ನ ಈ ಸರ್ಕಾರ ವಶಪಡಿಸಿಕೊಳ್ಳೋಕೆ ಹೊರಟಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ರಾಷ್ಟ್ರೀಯ ಮಹಿಳಾ ಆಯೋದ ದೂರಿನದ್ದು ದೊಡ್ಡ ಕೇಸ್. ಯಾರು ಆಕೆಗೆ ಧಮ್ಕಿ ಹಾಕೋದು. ಹೆಣ್ಣು ಮಕ್ಕಳಿಗೆ ಯಾರು ಹೆದರಿಸಿದ್ದಾರೆ ಎಲ್ಲವೂ ಬರುತ್ತೆ. ನ್ಯಾಷನಲ್ ವುಮೆನ್ ಕಮೀಷನ್ ಕೊಟ್ಟ ದೂರು ಯಾಕೆ ತನಿಖೆ ಆಗಿಲ್ಲ ಎಮದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.