ಬೆಂಗಳೂರು: ಬಂಧಿತ ಸ್ಯಾಂಟ್ರೋ ರವಿ (Santro Ravi) ಯನ್ನ ರಹಸ್ಯವಾಗಿ ಕರೆದೊಯ್ದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD KUmaraswamy) ಕೆಂಡಾಮಂಡಲರಾಗಿದ್ದಾರೆ.
ಕೆಐಎಎಲ್ (KIAL) ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಪ್ರಧಾನಿಗಳು, ಮುಖ್ಯಮಂತ್ರಿಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನ ಯಾಕೆ ಕರೆದೊಯ್ದರು..?, ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ..?. ಇದನ್ನ ನೋಡ್ತಾ ಇದ್ರೆ ಈಗಲೂ ಪೊಲೀಸರು ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ಗೃಹ ಮಂತ್ರಿಗಳು ಆಹಮದಾಬಾದ್ (Ahemedabad) ಗೆ ಹೋಗ್ತಾರೆ ಅದೇ ಜಾಗದಲ್ಲಿ ಸ್ಯಾಂಟ್ರೋ ರವಿ ಬಂಧನವಾಗ್ತಾರೆ. ಅಲ್ಲಿ ಬಿಜೆಪಿ ಸರ್ಕಾರ (BJP Government) ಇದೆ, ಹೀಗಾಗಿ ಮೊದಲೇ ರವಿಯನ್ನ ಬಂಧನ ಮಾಡಿದ್ದಾರೆ. ಅವನಿಂದ ಇರುವ ದಾಖಲೆಗಳನ್ನ ತೆಗೆದುಕೊಂಡು ಈಗ ಬಂಧನದ ನಾಟಕ ಮಾಡ್ತಾ ಇದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಗುಜರಾತ್ ಪ್ರವಾಸ ಮುಗಿಸಿ ಆರಗ ವಾಪಸ್ ಆಗ್ತಿದ್ದಂತೆ ಸ್ಯಾಂಟ್ರೋ ರವಿ ಅರೆಸ್ಟ್- ರಾಜ್ಯ ರಾಜಕೀಯದಲ್ಲಿ ಸಂಚಲನ
Advertisement
Advertisement
ಇರುವ ಸಾಕ್ಷಿಗಳನ್ನ ಈಗಾಗಲೇ ನಾಶ ಮಾಡಿರುತ್ತಾರೆ. ಪಿಎಸ್‍ಐ ಡ್ರಗ್ಸ್ ಕೇಸ್ (PSI Drugs Case) ಗಳಂತೆ ಈ ಕೇಸನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕ್ತಾರೆ ಎಂದು ಹೆಚ್‍ಡಿಕೆ ಆರೋಪಿಸಿದ್ದಾರೆ. ಸ್ಯಾಂಟ್ರೊ ರವಿ ಬಂಧಿಸಿ ಕರೆತಂದಿದ್ದಾರೆ. ನಮ್ಮ ಗೃಹ ಸಚಿವರು ಗುಜರಾತ್ ಭಾಗದಲ್ಲಿದ್ದಾರೆ. ಸ್ಯಾಂಟ್ರೊ ರವಿ ಕೂಡ ಅಲ್ಲೇ ಇದ್ದಾನೆ. ಇಲ್ಲಿಂದ ಅವರು ಅಲ್ಲಿ ಯಾವಾಗ ಹೋದ್ರು..?, ಗೃಹ ಸಚಿವರು ಗುಜರಾತ್ ಗೆ ಯಾವಾಗ ಹೋದ್ರು ಅನ್ನೋದೆ ಯಕ್ಷಪ್ರಶ್ನೆಯಾಗಿದೆ ಎಂದರು.
ಗುಜರಾತ್ ನಲ್ಲಿಯೂ ಬಿಜೆಪಿ ಸರ್ಕಾರ ಇದೆ. ಅವರನ್ನ ಬಂಧಿಸಿ ಕರೆತರ್ತಿರೋದು ಈ ಕೇಸ್ ಮುಚ್ಚಿಹಾಕಲು. ಗುಜರಾತ್ (Gujarat) ನಲ್ಲಿ ಎರಡ್ಮೂರು ದಿನದ ಹಿಂದೆಯೇ ಬಂಧಿಸಿದ್ದಾರೆ. ಏನೇನೆಲ್ಲ ಸಾಕ್ಷ್ಯ ಇಟ್ಟುಕೊಂಡಿದ್ದ ಅದನ್ನೆಲ್ಲ ಕಿತ್ತುಕೊಂಡಿದ್ದಾರೆ. ಈಗ ಕರೆದುಕೊಂಡು ಬಂದಿದ್ದಾರೆ. ಏರ್ ಪೋರ್ಟ್ ನಲ್ಲಿ ವಿಐಪಿ ಗೇಟ್ ನಲ್ಲಿ ಆತನನ್ನ ಕರೆದುಕೊಂಡು ಹೋಗ್ತಾರೆ. ಅಂದ್ರೆ ಆತನಿಗೆ ರಾಜಾತಿಥ್ಯ ಎಷ್ಟಿದೆ ಅಂತಾಯ್ತು. ಪ್ರಧಾನಿ, ಮುಖ್ಯಮಂತ್ರಿಗಳಿಗೆ ಇರುವ ವಿಐಪಿ ಗೇಟ್ ನಲ್ಲಿ ಅವ್ರನ್ನ ಯಾಕೆ ಬಿಡ್ತಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಇವನದ್ದೇ ನೇರ ಪಾತ್ರ ಇದೆ ಎಂದು ಗರಂ ಆಗಿದ್ದಾರೆ.
ಯಾವ ಅಧಿಕಾರಿಗಳು ಇವನ ಬಗ್ಗೆ ತನಿಖೆ ಮಾಡ್ತಾರೆ. ಮೈಸೂರಿನಲ್ಲಿ ಮಹಿಳೆ ಕೊಟ್ಟಿರುವ ಕೇಸ್ ಮೇಲೆ ಇವರು ಬಂಧಿಸಿ ಕರೆತಂದಿರೋದು. ಬೇರೆ ವಿಷಯ ಇದೆಯಲ್ಲ ಇದನ್ನ ಯಾವ ರೀತಿ ತನಿಖೆ ಮಾಡ್ತಾರೆ. ಬಿಜೆಪಿ ಪಕ್ಷ ಈ ದೇಶದಲ್ಲಿ ಏನೇ ಬೇಕಿದ್ರು ಮಾಡ್ತಾರೆ. ಸ್ಯಾಂಟ್ರೊ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ. ರಾಜ್ಯ ಬಿಟ್ಟು ಹೋಗೋವರೆಗೆ ಏನು ಮಾಡ್ತಿದ್ರು?. ಪೊಲೀಸ್ ಇಲಾಖೆ ಬದುಕಿದ್ಯಾ? ಯಾವಾಗಲೋ ಸಾಯಿಸಿದ್ದಾರೆ. ಟಾಪ್ ಅಧಿಕಾರಿ ವರ್ಗಾವಣೆ ಮಾಡೋ ಅಧಿಕಾರವನ್ನೇ ಅವನಿಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆರ್.ಅಶೋಕ್ (R Ashok), ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ರಮ ತೆಗೆದುಕೊಂಡಿಲ್ಲ ಅನ್ನೋ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಕಾಲದಲ್ಲಿ ವಿಚಾರ ಬಂದಿದ್ದರೆ ಯಾವಾಗಲೋ ತನಿಖೆ ಮಾಡ್ತಿದ್ದೆ. ನನ್ನ ಕಾಲದಲ್ಲಿ ವಿಧಾನಸೌಧ (VidhanSoudha), ಕುಮಾರಕೃಪಾದಲ್ಲಿ ಇರಲು ಬಿಟ್ಟಿದ್ನಾ?. ಕೇಳಿ ಅಶೋಕ್ ಅವರನ್ನು, ನಮಗೇನು ಇವರ ಆಟ ಗೊತ್ತಿಲ್ವಾ?. ಯಾರ್ಯಾರು ಎಲ್ಲೆಲ್ಲಿ ಟಚ್ ಅಲ್ಲಿದ್ದಾರೆ ಅಂತಾ ಗೊತ್ತಿಲ್ವಾ. ಇವರು ಗೃಹ ಸಚಿವರಿದ್ರಲ್ಲಾ, ಇವರೇನು ಮಾಡ್ತಿದ್ರು. ಸದಾನಂದಗೌಡ (Sadananda Gowda) ಸಿಎಂ ಆಗಿದ್ದಾಗ ಗೃಹ ಸಚಿವರಾಗಿದ್ರಲ್ವಾ..?, ನಮ್ಮ ಸರ್ಕಾರ ಹೋದ ಮೇಲೆ ಇವನ ಆಟ ಶುರುವಾಗಿದೆ. ನಂತರ ಇವನೇ ಕಿಂಗ್ ಆಗಿದ್ದಾನೆ. 2005 ರಲ್ಲೂ ಹೆಂಡತಿ ಸಾಯಿಸಿ ತಪ್ಪಿಸಿಕೊಂಡಿದ್ದ ರಂದು ತಿಳಿಸಿದರು.
ವಿಐಪಿ ಗೇಟ್ ನಲ್ಲಿ ಕರೆದುಕೊಂಡು ಹೋಗಿದ್ದು ಮಹಾನ್ ತಪ್ಪು. ಡ್ರಗ್ಸ್ ಕೇಸ್, ಪಿಎಸ್‍ಐ ಕೇಸ್ ಮುಚ್ಚಿಹಾಕಿದ್ರು. ಇದನ್ನೂ ಇದೇ ರೀತಿ ಮುಚ್ಚಿಹಾಕ್ತಾರೆ ಅಷ್ಟೇ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k