ಬೆಂಗಳೂರು: ಲೋಕಸಭಾ ಚುನಾವಣೆಯ (Loksabha Election 2024) ಹೊತ್ತಲ್ಲಿಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಆರಂಭವಾಗಿದೆ.
Advertisement
ಇಬ್ಬರು ನಾಯಕರ ಮಧ್ಯೆ ಟಾಕ್ ವಾರ್ ಮುಂದುವರಿದ್ದು, ದೋಸ್ತಿ ನಾಯಕರು ಬುಧವಾರ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿದ್ದಕ್ಕೆ ಡಿಕೆಶಿ ಕೊಟ್ಟ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ. ಭಂಡ್ ಬಿದ್ದಿರುವವರ ಬಗ್ಗೆ ಏನು ಹೇಳುವುದು?, ಇದಕ್ಕೆಲ್ಲ ಯಾಕ್ ತಲೆ ಕೆಡಿಸಿಕೊಳ್ಳಬೇಕು ಎನ್ನುವ ಮೂಲಕ ಮಾಜಿ ಸಿಎಂ ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ- ಮೈತ್ರಿ ನಾಯಕರು ನಿರ್ಮಲಾನಂದ ಶ್ರೀಗಳ ಭೇಟಿಗೆ ಡಿಕೆಶಿ ಆಕ್ಷೇಪ
Advertisement
Advertisement
ಡಿಕೆಶಿ ಹೇಳಿದ್ದೇನು..?: ನಿನ್ನೆ ಬಿಜೆಪಿ ಹಾಗೂ ಜೆಡಿಎಸ್ (BJP- JDS) ನಾಯಕರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ದೋಸ್ತಿ ನಾಯಕರು ಶ್ರೀಗಳನ್ನು ಭೇಟಿಯಾಗುತ್ತಿದ್ದಂತೆಯೇ ಕೈ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ, ಕಾಂಗ್ರೆಸ್ ಹೊಸತೊಡಕು ವಿರೋಧಿ: ಜೆಡಿಎಸ್ ಕಿಡಿ
Advertisement
ಒಕ್ಕಲಿಗರು ದಡ್ಡರಲ್ಲ, ಒಕ್ಕಲಿಗ ಸ್ಬಾಮೀಜಿಯೂ ದಡ್ಡರಲ್ಲ ಎನ್ನುವ ಮೂಲಕ ನಿರ್ಮಲಾನಂದ ಶ್ರೀಗಳ (Nirmalananda Swamiji) ವಿರುದ್ಧವೇ ಡಿಕೆಶಿ (DK Shivakumar) ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಒಕ್ಕಲಿಗ ಮುಖ್ಯಮಂತ್ರಿಯನ್ನು ಯಾಕೆ ಕೆಳಗಿಳಿಸಿದ್ರು ಅಂತ ಶ್ರೀಗಳನ್ನು ಕೇಳಬೇಕಿತ್ತು ಎಂದಿದ್ದರು. ಡಿಕೆಶಿ ಈ ಹೇಳಿಕೆಗೆ ಹೆಚ್‌ಡಿಕೆ ಇಂದು ತಿರುಗೇಟು ಕೊಟ್ಟರು.