ರಾಮನಗರ: ಕಾರ್ಯಕ್ರಮದ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommi) ಯವರು ರಾತ್ರಿ 9.30ಕ್ಕೆ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಗರಂ ಆಗಿದ್ದಾರೆ.
ಕೆಂಪೇಗೌಡ ಪ್ರತಿಮೆ (Kempegowda Statue) ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ (HD Devegowda) ನಿರ್ಲಕ್ಷ್ಯ ಮಾಡಿದ ವಿಚಾರಕ್ಕೆ ಬಿಡದಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರಿಗೆ ಕುಟುಂಬ ಬಿಟ್ರೆ ಬೇರೆ ಏನಿಲ್ಲ ಅಂದಿದ್ದಾರೆ. ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತೆಲ್ಲಾ ಮೋದಿ ಭಾಷಣ ಮಾಡಿದ್ದಾರೆ. ನಾಗರೀಕತೆ ಅನ್ನೋದು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮದ ಹಿಂದಿನ ದಿನ 9:30ಕ್ಕೆ ಸಿಎಂ ದೂರವಾಣಿ ಕರೆ ಮಾಡಿದ್ದಾರೆ. ರಾತ್ರಿ 12:45ರಲ್ಲಿ ಯಾರದ್ದೋ ಕೈಯಲ್ಲಿ ಲೆಟರ್ ಕೊಟ್ಟಿದ್ದಾರೆ. ಆ ಲೆಟೆರ್ ನಲ್ಲಿ ಮಾನ್ಯರೇ ಅಂತ ಇದೆ, ಕೆಳಗಡೆ ಮಾತ್ರ ದೇವೇಗೌಡರ ಹೆಸರು ಹಾಕಿದ್ದಾರೆ. ಕರ್ನಾಟಕದ ಅಸ್ಮಿತೆ ಅಂತ ಕನ್ನಡಿಗರನ್ನ ಗುಲಾಮರನ್ನಾಗಿ ಮಾಡಲು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಪತ್ರ ಬರೆದಿದ್ದು ಯಾವಾಗ? ದೇವೇಗೌಡರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? – ಬಿಜೆಪಿಗೆ ಜೆಡಿಎಸ್ ಪ್ರಶ್ನೆ
ಇದಷ್ಟೇ ಅಲ್ಲ, ಕನ್ನಡದ ಅಸ್ಮಿತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಈ ಮಣ್ಣಿಗೆ ಸೇವೆ ಸಲ್ಲಿಸಿದ ಸಾಧಕರಾದಿಯಾಗಿ ನಮ್ಮ ರಾಜ್ಯದ ಕಟ್ಟ ಕಡೆಯಲ್ಲಿರುವವರನ್ನೂ ಮರೆಯದೇ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ.
ಕುಟುಂಬವನ್ನೇ ಪಕ್ಷವನ್ನಾಗಿಸಿಕೊಂಡ ಜೆಡಿಎಸ್‌ಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು. (2/2)
— BJP Karnataka (@BJP4Karnataka) November 11, 2022
ಪ್ರತಿನಿತ್ಯ ಹಿಂದಿ ಹೇರಿಕೆ ಮಾಡಲು ಬಿಜೆಪಿ (BJP) ಹುನ್ನಾರ ಮಾಡ್ತಿದ್ದಾರೆ. ಅಂತದ್ರಲ್ಲಿ ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ.? ಇವತ್ತು ರಾಜ್ಯ ನಾಯಕರು ಗುಲಾಮರ ರೀತಿಯಲ್ಲಿ ಮೋದಿ ಮುಂದೆ ಕೈಕಟ್ಟಿ ನಿಂತುಕೊಳ್ಳುತ್ತಾರೆ. ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.
ಎಲ್ಲವನ್ನೂ ಸರ್ವಮಾಶ ಮಾಡ್ತಿದ್ದಾರೆ. ನಮ್ಮ ಕುಟುಂಬ ಅಂದ್ರೆ ದೇವೇಗೌಡ್ರು ಜನ್ಮ ನೀಡಿರೋ ಆರು ಜನ ಮಾತ್ರ ಅಲ್ಲ. ರಾಜ್ಯದ ಪ್ರತಿ ಕುಟುಂಬವೂ ನಮ್ಮ ಕುಟುಂಬವೇ. ನನ್ನ ಬಳಿ ಸಂಕಷ್ಟ ಹೇಳಿಕೊಂಡು ಬರುವ ಜನರ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಆದರೆ ನಿಮ್ಮ ನಡವಳಿಕೆ ಏನು.? ಅಭಿವೃದ್ಧಿ ಹೆಸರಲ್ಲಿ ರಾಜ್ಯದಲ್ಲಿ ಲೂಟಿ ಮಾಡ್ಕೊಂಡು ಕೂತಿದ್ದೀರಿ. ನಿನ್ನೆ ದಿನ ರಾಜಕಾರಣಕ್ಕೋಸ್ಕರ ಕಾರ್ಯಕ್ರಮ ಮಾಡಿದ್ದೀರಿ. ಇದರಿಂದ ನನಗೇನು ಆತಂಕ ಇಲ್ಲ ಎಂದರು.
ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಜನ ಕೆಂಪೇಗೌಡರ ಪ್ರತಿಮೆ ಮಾಡಿದ್ದಾರೆ. ನೀವು ಸರ್ಕಾರದ ಹಣ ಖರ್ಚು ಮಾಡಿ ಪ್ರತಿಮೆ ಮಾಡಿದ್ದೀರಿ. ಹಾಗಾಗಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸೋದು ನಿಮ್ಮ ಧರ್ಮ. ಅದೇನು ನಿಮ್ಮ ಪಕ್ಷದ ಕಾರ್ಯಕ್ರಮ ಅಲ್ಲ, ಆಗಿದಿದ್ರೆ ನಮ್ಮದೇನು ತಕರಾರಿಲ್ಲ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ.