-ಜಮೀರ್‌ರನ್ನು ನಾಯಿಗೆ ಹೋಲಿಕೆ
ಮೈಸೂರು: ನಾನು ಸ್ವತಃ ದುಡಿಮೆ ಮಾಡಿ ಬದುಕು ಕಟ್ಟಿಕೊಂಡಿದ್ದಾನೆ. ಇವರಿಗೆಲ್ಲಾ ನನ್ನ ಬ್ಯಾಕ್ ಗ್ರೌಂಡ್ ಏನೂ ಗೊತ್ತಿದೆ. ಇವರೆಲ್ಲಾ ಅವತ್ತು ಎಲ್ಲಿದ್ದರು. ಆನೆ ಹೋಗುತ್ತಿದ್ದಾಗ ನಾಯಿ ಬೊಗಳಿದರೆ ಏನಾಗುತ್ತೆ? ನಾಯಿಗಳಿಗೆ ಉತ್ತರ ಕೊಡಲು ಸಾಧ್ಯನಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಶಾಸಕ ಜಮೀರ್ ಅಹ್ಮದ್‍ಗೆ ತಿರುಗೇಟು ನೀಡಿದ್ದಾರೆ.
Advertisement
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆನೆ ಹೋಗುತ್ತಿದ್ದರೆ ನಾಯಿ ಬೊಗಳಿದರೆ ಏನಾಗುತ್ತದೆ? ಏನು ಆಗಲ್ಲ. ಆನೆ ದಾರಿ ಆನೆಗೆ. ಜಮೀರ್ ಟೀಕೆಗೆ ಉತ್ತರ ಕೊಡಲು ಅನ್ ಫಿಟ್ ಎಂದು ಜಮೀರ್‌ರನ್ನು ನಾಯಿಗೆ ಹೋಲಿಸಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ
Advertisement
Advertisement
ಓದುವಾಗ ಕಸದ ಟೆಂಡರ್ ಪಡೆದು ದುಡಿಮೆ ಮಾಡುತ್ತಿದ್ದೆ. ಚಿತ್ರದ ಹಂಚಿಕೆದಾರನಾಗಿ ದುಡಿಮೆ ಮಾಡಿದ್ದೇನೆ. ಬಡ್ಡಿಗೆ ದುಡ್ಡು ಪಡೆದು ಚಿತ್ರ ಪಡೆದು ಸಿನಿಮಾ ಹಂಚಿಕೆ ಮಾಡುತ್ತಿದ್ದೆ. ದೇವೇಗೌಡರ ಹೆಸರಿನಿಂದ ನೂರು ಪಟ್ಟು ಹಣ ಸಂಪಾದಿಸಬಹುದಿತ್ತು. ನಾನು ಆ ಕೆಲಸ ಮಾಡಲಿಲ್ಲ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್
Advertisement
ವಿಧಾನಸೌಧದಲ್ಲಿ ಯಾವ ಕೆಲಸ ಆಗುತ್ತಿಲ್ಲ. ಎಲ್ಲರೂ ಉಪ ಚುನಾವಣೆಯಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆ ಮರೆತು ಎಲ್ಲಾ ಮಂತ್ರಿಗಳನ್ನು ಚುನಾವಣೆಗೆ ನಿಯೋಜಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಜೆಡಿಎಸ್‍ನಲ್ಲಿ ದೊಡ್ಡ ನಾಯಕರಿಲ್ಲ. ನಮ್ಮಲ್ಲಿ ಕಾರ್ಯಕರ್ತರೆ ನಾಯಕರು. ನಾಳೆ ಪುನಃ ಹಾನಗಲ್, ಸಿಂಧಗಿಗೆ ಹೋಗುತ್ತೇನೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ ಪ್ರತಿಫಲವಾಗಿ ಜೆಡಿಎಸ್ ನೆಲಕಚ್ಚಿತು. ನಮ್ಮ ಪಕ್ಷಕ್ಕೆ ದೊಡ್ಡ ಅನಾಹುತಗಳೇ ಆದವು ಎಂದರು.
20 ಬೈ ಎಲೆಕ್ಷನ್ ನಡೆದಿವೆ. ಎಲ್ಲದರಲ್ಲೂ ಪಕ್ಷ ಸೋತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಜೊತೆ ನಾನು ಸರ್ಕಾರ ಮಾಡಿದ್ದು, ನಮ್ಮ ಭದ್ರಕೋಟೆಯಂತಾ ಕ್ಷೇತ್ರಗಳಲ್ಲಿ ಜೆಡಿಎಸ್ ಸೋತಿದೆ. ನಾನು ಈಗ ತಳ ಮಟ್ಟದಿಂದ ಪಕ್ಷ ಕಟ್ಟಬೇಕಿದೆ. ನೂರಕ್ಕೆ ನೂರು ಶೌಚಾಲಯ ಕಟ್ಟಿದ್ದೇವೆ ಅಂತಾ ನಮ್ಮ ಸರ್ಕಾರ ದಲ್ಲಿ ಸಚಿವರಾಗಿದ್ದ ಕೃಷ್ಣಬೈರೇಗೌಡ ನನ್ನ ಬಳಿಯೆ ಹೇಳಿದ್ದರು. ಆದರೆ, ಸಿಂಧಗಿ, ಹಾನಗಲ್ ನಲ್ಲಿ ಇನ್ನು ಬಯಲು ಶೌಚಾಲಯ ಇದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR
ನಾನು ರೈತರ ಸಾಲ ಮನ್ನಾ ಮಾಡಿದ್ದಕ್ಕೆ ಕಾಂಗ್ರೆಸ್‍ನ ಬೆಂಬಲ ಇರಲಿಲ್ಲ. ಕಾಂಗ್ರೆಸ್ ನಾಯಕರು ಹೇಳಿದ್ದು ತಮ್ಮ ಕಾರ್ಯಕ್ರಮ ನಿಲ್ಲಿಸಬಾರದು ಅಂತಾ ಹೇಳಿದ್ದರು ಅಷ್ಟೇ. ಕಳೆದ 12 ವರ್ಷಗಳಲ್ಲಿ ನನಗೆ ಆಗಿರೋ ಅವಮಾನಗಳು ನನಗೆ ಗೊತ್ತಿದೆ. ಇದನ್ನೆಲ್ಲಾ ಮೆಟ್ಟಿ ನಿಂತು ಪಕ್ಷ ಕಟ್ಟುತ್ತಿದ್ದೇನೆ. ಸ್ವತಂತ್ರವಾಗಿ ಅಧಿಕಾರ ಪಡೆಯಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಆದ ಅವಮಾನಗಳಿಗೆ ಉತ್ತರ ಮುಂದಿನ ಚುನಾವಣೆಯ ಫಲಿತಾಂಶ. ಆಗ ನನ್ನಿಂದ ದೂರವಾದವರೂ ಮತ್ತೆ ಬರಬಹುದು ಎಂದು ಭವಿಷ್ಯ ನುಡಿದರು.
ಜೆಡಿಎಸ್ ಅಂದರೆ ಜೆಡಿಕುಟುಂಬ ಅಂತಾ ಸಿದ್ದರಾಮಯ್ಯ ಟೀಕಿಸಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಪಕ್ಷ ಕಟ್ಟಲಿಲ್ಲ. ನಾವು ವೇದಿಕೆ ರೆಡಿ ಮಾಡುತ್ತಿದ್ದೆವು. ಇವರು ಬಂದು ಭಾಷಣ ಮಾಡುತ್ತಿದ್ದರು. ಬ್ಯಾನರ್‍ನಲ್ಲಿ ಫೋಟೋ ಇಲ್ಲ ಅಂತಾ ಒಂದು ಕಾರ್ಯಕ್ರಮಕ್ಕೆ ಬರಲಿಲ್ಲ. ದೇವೇಗೌಡರು ಪಕ್ಕದಲ್ಲಿ ಸಿದ್ದರಾಮಯ್ಯ ಕೂತು ಕಾಲು ಮೇಲೆ ಹಾಕಿಕೊಂಡು ಕಾಲಲ್ಲಿ ದೇವೇಗೌಡರಿಗೆ ಒದ್ದು ಕೊಂಡು ಕುಳಿತು ಕೊಳ್ಳುತ್ತಿದ್ದರು. ಇದನ್ನು ನಾವು ವೇದಿಕೆ ಕೆಳಗೆ ಕುಳಿತು ನೋಡುತ್ತಿದ್ದೇವೆ. ನೀವು ಯಾಕೆ ನಿಮ್ಮ ಮಗನನ್ನು ವರುಣಾಗೆ ತಂದು ಎಲೆಕ್ಷನ್‍ಗೆ ನಿಲ್ಲಿಸಿದ್ದಿರಿ? ಇದು ಫ್ಯಾಮಿಲಿ ಪಾಲಿಟಿಕ್ಸ್ ಅಲ್ವಾ? ವರುಣಾದಲ್ಲಿ ನಿಮ್ಮ ಪಕ್ಷಕ್ಕೆ ದುಡಿದ ಮುಖಂಡರು ಇರಲಿಲ್ವಾ? ಎಲೆಕ್ಷನ್‍ಗೆ ನಿಲ್ಲಿಸೋಕೆ ಎಂದು ಪ್ರಶ್ನಿಸಿದ್ದಾರೆ.