ರಾಷ್ಟ್ರಧ್ವಜಕ್ಕೆ ಗೌರವ ಕೊಡೋದನ್ನ ಇವ್ರಿಂದ ನಾನು ಕಲಿಯಬೇಕಾ – ಸಿದ್ದುಗೆ ಹೆಚ್‍ಡಿಕೆ ಟಾಂಗ್

Public TV
2 Min Read
HDK

ರಾಮನಗರ: ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ ಎಂದು ಪ್ರಶ್ನಿಸುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಇವರಿಂದ ನಾನು ಕಲಿಯಬೇಕಾ? ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನು ಸಾಯಿಸಿದ್ದರು. ಬಿಜೆಪಿಯವರ ಕೈಯಲ್ಲಿ ಉಗಿಸಿಕೊಳ್ಳುತ್ತಿದ್ದರು. ಆಗ ರಾಷ್ಟ್ರಧ್ವಜ ಕಾಣಲಿಲ್ವ. ರಾಜ್ಯದ ಜನರ ಬಗ್ಗೆ ನಾವು ಎಲ್ಲಿ ಚರ್ಚೆ ಮಾಡುವುದು? ರೈತರ ಸಮಸ್ಯೆಗಳ ಬಗ್ಗೆ ಎಲ್ಲಿ ಚರ್ಚೆ ಮಾಡುವುದು? ರಾಷ್ಟ್ರಧ್ವಜದ ಬಗ್ಗೆ ಇವರೊಬ್ಬರೇ ಗೌರವವಿಟ್ಟಿಲ್ಲ. ಅದಕ್ಕೆ ಹೇಳಿದ್ದೇನೆ ಬೀದಿಲಿ ಹೋರಾಟ ಮಾಡಿ, ಸದನ ಮುಂದೂಡಿ. ಇಲ್ಲ ಅಮಾನತ್ತು ಮಾಡಿ. ಪ್ರತಿನಿತ್ಯ ಒಂದೂವರೆ ಕೋಟಿ ರಾಜ್ಯದ ಜನರ ಹಣ ಸದನಕ್ಕಾಗಿ ಖರ್ಚಾಗುತ್ತಿದೆ. ಆದರೆ ಅದನ್ನು ಇವರು ವ್ಯರ್ಥ ಮಾಡುತ್ತಿದ್ದಾರೆ. ಇದು ನೀವು ದೇಶ ಕಟ್ಟೋರಾ. ಅದನ್ನು ನಾನು ಕಾಂಗ್ರೆಸ್ ನಾಯಕರಿಗೆ ಕೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಎಸ್‍ಪಿ ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಭಯೋತ್ಪಾದನೆ ಹರಡಿಸುತ್ತೆ: ಅಮಿತ್ ಶಾ

SIDDARAMAIHA

ಮೇಕೆದಾಟು 2ನೇ ಹಂತದ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಪಾದಯಾತ್ರೆಯಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಇದರಿಂದ ಮೇಕೆದಾಟು ಆಗುತ್ತದೆ. ಇವರೊಂದಿಗೆ ಲೀಗಲ್ ಆಗಿ ನಾವು ಗೆಲ್ಲಬೇಕಿದೆ. ರಾಜ್ಯದಲ್ಲಿ ಎಷ್ಟು ಡ್ಯಾಂಗಳ ಕೆಲಸ ನಿಂತಿವೆ. ರಾಜ್ಯದ ನೀರಾವರಿ ಯೋಜನೆ ಬಳಕೆಗೆ 2 ರಿಂದ 5 ಲಕ್ಷ ಕೋಟಿ ಹಣ ಬೇಕು. ನಿಮ್ಮ ಹೋರಾಟದಿಂದ ಆಗುವುದಾದರೆ ನಾನು ನಿಮ್ಮ ಜೊತೆ ಬರುತ್ತೇನೆ. ನನ್ನ ಕರ್ಮಭೂಮಿಯಲ್ಲಿ ಇವರು ಏನು ಮಾಡಲು ಆಗಲ್ಲ. ಈ ಜನರು ಇರುವವರೆಗೆ ನನ್ನನ್ನ ಅಲ್ಲಾಡಿಸಲು ಆಗಲ್ಲ, ನನ್ನನ್ನ ಓಡಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಹತ್ತು ಪಾದಯಾತ್ರೆ ಮಾಡಲಿ ಸರಿ ಜನರ ಒಳ್ಳೆಯದಕ್ಕೆ ಮಾಡಲಿ. ಆದರೆ ದಿನ ಬಿರಿಯಾನಿ, ಬಾಳೆಕಾಯಿ ಬಜ್ಜಿ, ಜ್ಯೂಸ್ ಇಟ್ಟುಕೊಂಡು ಮಾಡುವುದು ಪಾದಯಾತ್ರೆನಾ ಎಂದು ಪ್ರಶ್ನಿಸಿದ್ದಾರೆ.

ನಾನು ಮಂಡ್ಯದಲ್ಲಿ ಮಾತನಾಡುವಾಗ ಮಕ್ಕಳ ಜೊತೆ ಚೆಲ್ಲಾಟ ಆಡಬೇಡಿ ಎಂದಿದ್ದೇನೆ. ಮಾತನಾಡುವಾಗ ಹಿಜಬ್ ಅಂದರೂ. ಆಗ ನಾನು ಹಿಜಬ್ – ಗಿಜಬ್ ಗೊತ್ತಿಲ್ಲ. ಮಕ್ಕಳ ಭವಿಷ್ಯ ಮುಖ್ಯ ಅಂದಿದ್ದೇನೆ. ಮಾತನಾಡುವಾಗ ಮದುವೆ ಗಿದುವೆ ಎನ್ನುತ್ತೇವೆ. ಅದನ್ನೇ ಹಿಜಬ್ ಬಗ್ಗೆ ಕುಮಾರಸ್ವಾಮಿ ಅಗೌರವವಾಗಿ ಮಾತನಾಡಿದರು ಎಂದು ವಾಟ್ಸ್‌ಅಪ್‌ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ನಾನು ಯಾವುದೇ ಸಮಾಜಕ್ಕೆ, ಧರ್ಮಕ್ಕೆ ಅಪಚಾರ ಮಾಡಲ್ಲ. ನಾನು ಎಲ್ಲರನ್ನು ಗೌರವಿಸುವವನು. ಆದರೆ ಜನ ಅರ್ಥ ಮಾಡಿಕೊಳ್ಳಬೇಕು. ದೇಶವನ್ನು ಲೂಟಿ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ರಾಷ್ಟ್ರಧ್ವಜ, ರಾಷ್ಟ್ರ ಭಕ್ತಿ ಇದೆಯಾ? ಹಿಂದೆ ಹೋರಾಟ ಮಾಡಿದ ಕಾಂಗ್ರೆಸ್ ಸತ್ತೋಗಿದೆ. ಆದರೆ ಈಗಿರುವ ಕಾಂಗ್ರೆಸ್ ಬೇರೆ. ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಕಟ್ಟಿದ ಕಾಂಗ್ರೆಸ್ ಬೇರೆ. ಮಹಾತ್ಮ ಗಾಂಧಿ ಹೇಳಿದ್ದರು ಕಾಂಗ್ರೆಸ್ ಪಕ್ಷ ಮುಚ್ಚಬೇಕು. ಮತ್ತೆ ಬಳಕೆ ಮಾಡಬಾರದು ಎಂದಿದ್ದರು. ನಾನು 1959ರಲ್ಲಿ ಹುಟ್ಟಿದ್ದೇನೆ. ಸ್ವಾತಂತ್ರ್ಯಕ್ಕೆ ನನ್ನ ಕೊಡುಗೆ ಏನು ಇಲ್ಲ. ಈಗ ಇತಿಹಾಸ ಹೇಳುವವರು ಯಾರು ಹುಟ್ಟಿದ್ದರು. ಹಿಂದೆ ರಕ್ತಪಾತವೇ ಆಗಿತ್ತು. ಈಗ ಧರ್ಮದ ಹೆಸರಿನಲ್ಲಿ ಮತ್ತೆ ಬೇಕಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಮಡಿಕೇರಿ ಪ್ರಿನ್ಸಿಪಾಲರಿಗೆ ಜೀವ ಬೆದರಿಕೆ

Share This Article
Leave a Comment

Leave a Reply

Your email address will not be published. Required fields are marked *