– ಬಿಜೆಪಿ ಬದಲು ಆರ್‌ಎಸ್‌ಎಸ್ ಅಧಿಕಾರ ನಡೆಸುತ್ತಿದೆ
– ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗೆ ಇರುತ್ತಿರಲಿಲ್ಲ
ರಾಮನಗರ: ಆರ್‌ಎಸ್‌ಎಸ್ ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ. ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್ ಕಾರ್ಯಕರ್ತರಿದ್ದಾರೆ. ಅವರಿಗೆ ತರಬೇತಿ ನೀಡಿದ್ದಾರೆ ಎಂದು ಆರ್‍ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2016ರಲ್ಲಿ ಒಂದೇ ವರ್ಷ 676 ಕಾರ್ಯಕರ್ತರು ಪಾಸ್ ಆಗಿದ್ದಾರೆ. ಬೇರೆ ಬೇರೆ ಇನ್‍ಸ್ಟಿಟ್ಯೂಶನ್‍ನಲ್ಲಿ ಆರ್‌ಎಸ್‌ಎಸ್ ನವರು ಟೀಮ್ ಇಟ್ಟಿದ್ದಾರೆ. ದೇಶದಲ್ಲಿ ಆರ್‌ಎಸ್‌ಎಸ್ ಸರ್ಕಾರ ಇದೆ. ಬಿಜೆಪಿ ಬದಲು ಆರ್‌ಎಸ್‌ಎಸ್ ಅಧಿಕಾರ ನಡೆಸುತ್ತಿದೆ. ಆರ್‌ಎಸ್‌ಎಸ್ ನವರೇ ದೇಶದ ಸವಿಲ್ ಸರ್ವೆಂಟ್ ಗಳು. 4 ಸಾವಿರ ಅಧಿಕಾರಿಗಳು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದಾರೆ. ಪರೀಕ್ಷೆ ಬರೆಯಲು ಅವರಿಗೆ ತರಬೇತಿ ನೀಡುತ್ತಾರೆ. ಹೀಗಾಗಿಯೇ ಒಂದೇ ವರ್ಷ 676 ಜನ ಆಯ್ಕೆಯಾಗ್ತಾರೆ ಎಂದು ಆರೋಪಿಸಿದರು.
Advertisement
Advertisement
ಆರ್‌ಎಸ್‌ಎಸ್ ನವರೇ ಹೇಳಿರುವ ಮಾಹಿತಿಯನ್ನು ಜನರ ಮುಂದಿಟ್ಟಿದ್ದೇನೆ. ಆರ್‌ಎಸ್‌ಎಸ್ ಕಾರ್ಯಕರ್ತರು ಸಿವಿಲ್ ಸರ್ವಿಸ್‍ನಲ್ಲಿದ್ದಾರೆ ಎಂದು ನಾನು ಹೇಳಿದ್ದಲ್ಲ, ಆರ್‌ಎಸ್‌ಎಸ್ ಪ್ರಮುಖರೇ ಹೇಳಿದ್ದಾರೆ. ಆರ್‌ಎಸ್‌ಎಸ್ ನ ಅಜೆಂಡಾವನ್ನು ಇಂಪ್ಲಿಮೆಂಟ್ ಮಾಡುವ ರೀತಿ ತರಬೇತಿ ನೀಡಲಾಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖಂಡರೇ ಹೇಳಿಕೊಂಡಿದ್ದಾರೆ. ಕೇಂದ್ರದಲ್ಲಿರುವ ಮಂತ್ರಿಗಳದ್ದು ಏನೂ ನಡೆಯಲ್ಲ, ಅಧಿಕಾರಿಗಳದ್ದೇ ನಡೆಯುವುದು ಎಂದು ಹೇಳಿದರು. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್
Advertisement
ಬಿಜೆಪಿಯವರು ಆಆರ್‌ಎಸ್‌ಎಸ್ ನ ಕೇಂದ್ರ ಬಿಂದುವಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಆರ್‌ಎಸ್‌ಎಸ್ ನ ಕೀಲುಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತವನ್ನು ಆರ್‌ಎಸ್‌ಎಸ್ ನಡೆಸುತ್ತಿದೆ, ಬಿಜೆಪಿಯಲ್ಲ. ದೇಶದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಗೆ ಸಂಬಂಧಿಸಿದ ಪುಸ್ತಕ ಓದುತ್ತಿದ್ದೆ. 1990ರಲ್ಲಿ ಬೆಳವಣಿಗೆ ಪ್ರಾರಂಭವಾಯಿತು. ಎಲ್.ಕೆ.ಅಡ್ವಾಣಿ ಅವರು ಬಿಜೆಪಿ ಕಟ್ಟುವ ಸಮಯ ಅದು. ಜಿನ್ನಾ ಅವರ ಬಗ್ಗೆ ಮಾತನಾಡಿದ್ದರಂತೆ, ಅಡ್ವಾನಿ ಅವರಿಗೆ ಒಂದು ಮೆಸೇಜ್ ಹೋಗುತ್ತೆ. ಅಲ್ಲಿಂದ ಬಂದ ನಂತರ ನೀವು ಆರ್‍ಎಸ್‍ಎಸ್ ಕಚೇರಿಗೆ ಬನ್ನಿ ಎಂದು. ಹೀಗೆ ಆ ಬಗ್ಗೆ ಓದುತ್ತಿದ್ದರೆ ಅವರ ಹಿಡನ್ ಅಜೆಂಡಾ ಗೊತ್ತಗುತ್ತಿದೆ ಎಂದು ಕಿಡಿಕಾರಿದರು.
Advertisement
ನಾಡಿನಲ್ಲಿ ಯುವಕರು ಬುದ್ಧಿವಂತರಾಗದಿದ್ದರೆ ಕಷ್ಟವಾಗಲಿದೆ. ಆರೇಳು ತಿಂಗಳಿಂದ ಪುಸ್ತಕ ಓದುತ್ತಿದ್ದೇನೆ. ವಾಸ್ತವಾಂಶದ ಅರಿವು ಬಂದ ಮೇಲೂ ಅದರ ಬಗ್ಗೆ ಜನತೆಯ ಮುಂದೆ ಇಡದಿದ್ದರೆ ಜನರಿಗೆ ಮಾಡುವ ದ್ರೋಹ ಅದು. ಕರ್ನಾಟಕದಲ್ಲಿ ಸರ್ವಧರ್ಮ ರಕ್ಷಣೆ ಮಾಡುವ ಸರ್ಕಾರ ತರಬೇಕು. ಮೂಲಭೂತ ಹಕ್ಕುಗಳು ಪ್ರತಿ ಕುಟುಂಬಕ್ಕೆ ಕೊಡಬೇಕಾಗಿದೆ. ಈ ದೇಶದಲ್ಲಿ ಸಣ್ಣ ಪುಟ್ಟ ಸಮಾಜಕ್ಕೆ ಶಿಕ್ಷಣ, ಆರೋಗ್ಯ ಕೊಟ್ಟಿದ್ದರೆ ಅದು ಆರ್‌ಎಸ್‌ಎಸ್ ಅಲ್ಲ. ಇತರೆ ಹಿಂದುಳಿದ ಸಮುದಾಯಗಳು ನೀಡಿರುವುದು. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್‌ಎಸ್‌ಎಸ್ ಅವರ ಸಂಘದಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯ ರಾಜಕಾರಣ ಬಿಟ್ಟು ನಾನು ಬರಲ್ಲ: ಸೋನಿಯಾ ಭೇಟಿಯ ಇನ್‌ಸೈಡ್ ಸುದ್ದಿ
ವಿಧೇಯಕದಿಂದ ಮತಾಂತರ ನಿಷೇಧ ಸಾಧ್ಯವಿಲ್ಲ
ವಿಧಾನಸಭೆ ಕಲಾಪದಲ್ಲಿ ಮತಾಂತರದ ಬಗ್ಗೆ ಚರ್ಚೆಯನ್ನು ಗಮನಿಸಿದೆ. ಶಾಸಕರ ತಾಯಿ ಮತಾಂತರ ಆಗಿದ್ದರ ಬಗ್ಗೆ ಹೇಳಿದ್ದರು. ನನಗೆ ಅದು ಗೊಂದಲವಾಯಿತು. ಶಾಸಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋದ ನಂತರ ಅದು ಪಕ್ಷಾಂತರ ಎಂದು ಗೊತ್ತಾಯಿತು. ಅಲ್ಲಿಯವರೆಗೆ ಗೊತ್ತಿರಲಿಲ್ಲ. ಬೈಬಲ್ ನಲ್ಲಿ ಒತ್ತಾಯ ಮಾಡಿ ಮತಾಂತರ ಮಾಡುವುದಕ್ಕೆ ಬೆಂಬಲ ಇಲ್ಲ. ಪ್ರೀತಿಯನ್ನು ನಾವು ಬಯಸುವವರು, ನಾವು ಬೇರೆ ದೇಶದಲ್ಲಿ ಹುಟ್ಟಿದ್ದಲ್ಲ. ಭಾರತೀಯರೇ ಎಂದು ಕ್ರೈಸ್ತ ಗುರು ಇಂದು ಗಂಭೀರವಾಗಿ ಹೇಳಿದರು ಎಂದು ಪ್ರಸ್ತಾಪಿಸಿದರು.
ಮತಾಂತರ ನಿಷೇಧ ವಿದೇಯಕದಿಂದ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಶಿಕ್ಷಣ, ಬಡತನ ನಿರ್ಮೂಲನೆ ಮಾಡಬೇಕು. ಸರ್ಕಾರ ಸರಿಯಾದ ರೀತಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಆಗ ಮತಾತಂರ ಯಾಕೆ ಆಗುತ್ತಾರೆ? ಸ್ವಯಂಪ್ರೇರಿತರಾಗಿ ಹೋಗುತ್ತಿರುವ ಉದಾಹರಣೆ ಇವೆ. ಹಣ ಲೂಟಿ ಮಾಡುವುದನ್ನು ಬಿಟ್ಟು ಎಲ್ಲ ಮೂಲಭುತ ಸೌಕರ್ಯ ಕೊಡಿ. ಬಿಜೆಪಿಯವರಿಗೆ ಬೇಕಾಗಿರುವುದೇ ಮತಾಂತರ ವಿಚಾರ. ಅವರು ಪದೇ ಪದೇ ಈ ವಿಚಾರ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಿಕೆಶಿ ಸಾಕ್ಷ್ಯ ವೇಳೆ ಸುಳ್ಯ ಕೋರ್ಟಲ್ಲಿ ಕೈ ಕೊಟ್ಟ ಕರೆಂಟ್!
ಇಂದು ಏಳನೇ ದಿನದ ಕಾರ್ಯಾಗಾರ ನಡೆಯುತ್ತಿದೆ. ಪ್ರಥಮ ಬಾರಿಗೆ ಕ್ರೈಸ್ತ ಸಮಾಜದವರಿಗೆ ಕಾರ್ಯಗಾರ ಮಾಡಲಾಗುತ್ತಿದೆ. ಕ್ರೈಸ್ತ ಸಮುದಾಯದ ಸಂಘಟನೆ ಮಾಡುವ ಸಲುವಾಗಿ ಪ್ರತಿನಿಧಿಗಳು ಬಂದಿದ್ದಾರೆ. ಪ್ರಥಮ ಬಾರಿಗೆ ನಾವು ನಿಮ್ಮ ಜೊತೆಗೂಡುತ್ತೇವೆ ಅಂತ ಬಂದಿದ್ದಾರೆ ಎಂದು ತಿಳಿಸಿದರು.
ಉತ್ತರ ಪ್ರದೇಶದ ಘಟನೆ ಕುರಿತು ವಾಗ್ದಾಳಿ ನಡೆಸಿದ ಅವರು, ಯಾಕೆ ಈ ಘಟನೆ ನಡೆಯಿತು? ಆರ್‍ಎಸ್‍ಎಸ್ ಸಂಘಟನೆಯಿಂದ ಬಿಜೆಪಿ ಸರ್ಕಾರ ರಚಿಸಿದ್ದಾರೆ. ಇಲ್ಲಿರುವುದು ಆರ್‍ಎಸ್‍ಎಸ್ ಸರ್ಕಾರ, ಆರ್‍ಎಸ್‍ಎಸ್ ಹಿಡಿತದಲ್ಲಿದ್ದೀರಾ? ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ ನಿಮ್ಮ ಅಜೆಂಡಾ. ನಾವೂ ಹಿಂದುಗಳೇ, ಆದರೆ ಹಿಂದುತ್ವ ಮೊದಲ ಅಜೆಂಡಾ ಅಲ್ಲ. ಮೊದಲು ದುಡಿಯುವ ಕೈಗೆ ದುಡುಮೆ ಕೊಡಿ. ಸರ್ಕಾರ ಈ ರಾಜ್ಯ, ದೇಶದ ಬಡವರ ಬಗ್ಗೆ ಗಮನ ಹರಿಸಲಿ. ರೈತರ ಬಗ್ಗೆ ಗೌರವ ಇದ್ದರೆ ಕಾರು ಹತ್ತಿಸಿದವನನ್ನು ಅರೆಸ್ಟ್ ಮಾಡಬೇಕಿತ್ತು. ಯಾಕೆ ರಕ್ಷಣೆ ಕೊಟ್ಟಿದ್ದೀರಿ? ಸಾಮಾನ್ಯರು ಈ ಕೆಲಸ ಮಾಡಿದ್ದರೆ ತಕ್ಷಣ ಅರೆಸ್ಟ್ ಮಾಡುತ್ತಿದ್ದರು. ಯೋಗಿ ಆದಿತ್ಯನಾಥ್ ಬಂದ ಮೇಲೆ ಉತ್ತರ ಪ್ರದೇಶ ಶಾಂತಿಯುತ ಆಗಿದೆ ಅಂತಾರೆ. ಇದೇನಾ ಶಾಂತಿಯುತ ಉತ್ತರ ಪ್ರದೇಶ? ಅಧಿಕಾರಕ್ಕೆ ಅಮಾಯಕರನ್ನು ಬಲಿ ಪಡೆಯುವುದು, ರಕ್ತದೋಕುಳಿ ಆಡುತ್ತಿದ್ದೀರಾ? ಎಷ್ಟು ದಿನ ಈ ಕೆಲಸ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು
ಅಷ್ಟು ಹೋರಾಟ ಮಾಡಿದರೂ ಪ್ರಧಾನಿ ಮೋದಿಯವರು ಒಬ್ಬ ರೈತನನ್ನೂ ಕರೆದು ಚರ್ಚೆ ಮಾಡಿಲ್ಲ. ಕರೆದು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತೆ. ಆದರೆ ಆ ಕೆಲಸ ಯಾಕೆ ಮಾಡಿಲ್ಲ? ಇಲ್ಲಿನ ಸಿಎಂ ಸ್ಪಾನ್ಸರ್ ಎಂದು ಹೇಳುತ್ತಾರೆ. ಇವರು ಹೇಗೆ ಬಂದಿದ್ದು? ಹೋರಾಟದಿಂದಲೇ ಅಲ್ಲವೇ? ಕಾಂಗ್ರೆಸ್ ಸರಿಯಾಗಿದ್ದಿದ್ದರೆ ಈ ದೇಶ ಹೀಗೆ ಇರುತ್ತಿರಲಿಲ್ಲ. ಅವರ ಸ್ವೇಚ್ಛಾವರ್ತನೆಯಿಂದಲೇ ಇಂತಹ ವಾತಾವರಣ ನಿರ್ಮಾಣ ಆಗಿದೆ. ಸುಧೀರ್ಘ ಅಧಿಕಾರ ಇದ್ದಾಗ ಯಾವ ರೀತಿ ನಡೆದುಕೊಂಡರು ಗೊತ್ತಿದೆ. ಮೂರು ಸಾವಿರ ರೈತರು ಸಾಯುವರೆಗೂ ಏನೂ ಗೊತ್ತಿಲ್ಲ ಎಂಬಂತೆ ಇದ್ದರು. ಆಗಿನ ಸಿಎಂ ರಾಜಕೀಯಕ್ಕೆ ಹಾಗೂ ಅಧಿಕಾರ ಹಿಡಿಯಲು ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ತರಾತುರಿಯಲ್ಲಿ ಪಂಜಿನ ಮೆರವಣಿಗೆ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಸಹ ಕಿಡಿಕಾರಿದರು.
ಇವರು ಕೊಡುವ ಡೆಡ್ ಲೈನ್ ಯಾವುದೂ ನಡೆಯಲ್ಲ, ಎರಡು ರಾಷ್ಟ್ರೀಯ ಪಕ್ಷಗಳಿಂದ ಏನೂ ನಡೆಯಲ್ಲ. ಇದಕ್ಕೆ ಉತ್ತರ ಜೆಡಿಎಸ್ ಪಕ್ಷ. ನೀರಾವರಿ ಯೋಜನೆ ಜಾರಿಗೆ ತರಲು ಜನತಾ ದಳಕ್ಕೆ ಮಾತ್ರ ಸಾಧ್ಯ. ಕಾಂಗ್ರೆಸ್ ನಡೆ ಕೃಷ್ಣ ಕಡೆಗೆ ಅಂದರು, ಎಲ್ಲಿ ಬಂದಿದೆ. ಅಧಿಕಾರ ಹಿಡಿಯಲು ಮಾತ್ರ ಇವೆಲ್ಲ. ಎತ್ತಿನ ಹೊಳೆ ಎಲ್ಲಿಗೆ ಬಂತು? 14 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಸಿದ್ದಾರಾಮಯ್ಯ ಹೇಳುತ್ತಾರೆ. ಹಣ ಕೊಟ್ಟಿದ್ದು ಸಿದ್ದರಾಮಯ್ಯ ಅಂತಾರೆ, ಏನಾಯ್ತು ಆ ಕಥೆ ಎಂದು ಪ್ರಶ್ನಿಸಿದರು.