ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ NDA ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವುದಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಈ ಮೂಲಕ ಎನ್.ಡಿ.ಎ ಅಭ್ಯರ್ಥಿ ಗೆಲುವು ಮತ್ತಷ್ಟು ಸುಲಭವಾಗಿದೆ.
Advertisement
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯಿಂದ ಜೆಡಿಎಸ್‍ಗೆ ಬೆಂಬಲ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದ್ರೌಪದಿ ಮುರ್ಮು ಅವರು ದೇವೇಗೌಡರಿಗೆ ಎರಡು ಬಾರಿ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಖುದ್ದು ಬೆಂಗಳೂರಿಗೆ ಬಂದು ದೇವೇಗೌಡರನ್ನು ಭೇಟಿ ಮಾಡೋದಾಗಿಯೂ ಹೇಳಿದ್ದರು. ಆದರೆ ನಾನೇ ಅವರು ಬೆಂಗಳೂರಿಗೆ ಬರೋದು ಬೇಡ ಅಂತ ಹೇಳಿದ್ದೆ ಅಂತ ತಿಳಿಸಿದರು. ಇದನ್ನೂ ಓದಿ: ದ್ರೌಪದಿ ಮುರ್ಮು ಹುಟ್ಟೂರಿಗೆ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ
Advertisement
ದ್ರೌಪದಿ ಮುರ್ಮು ಅವರ ಹಿನ್ನೆಲೆಯನ್ನು ನಾವು ಗಮನಹರಿಸಿದ್ದೇವೆ. ಅವರ ಕಷ್ಟಗಳ ಮಾಹಿತಿಯೂ ಪಡೆದಿದ್ದೇವೆ. ಈಗಾಗಲೇ NDA ಅಭ್ಯರ್ಥಿಗೆ ಬಹುಮತದ ಸಂಖ್ಯೆ ಇದೆ. ನನ್ನ ಪ್ರಕಾರದಲ್ಲಿ ಅವರು ಈಗಾಗಲೇ ಗೆದ್ದಿದ್ದಾರೆ. ಬಹುಮತ ಇದ್ದರು ಅವರು ನಮ್ಮ ಬಳಿ ಬೆಂಬಲ ಕೇಳಿದ್ದಾರೆ. ಅದು ಅವರ ಒಳ್ಳೆ ಗುಣ ಅಂತ ಹೊಗಳಿದರು.
Advertisement
Advertisement
ರಾಷ್ಟ್ರಪತಿ ಚುನಾವಣೆಯಲ್ಲಿ A ಟೀಂ B ಟೀಂ ಅನ್ನೋ ಆರೋಪಗಳು ಬರೋದಿಲ್ಲ. ಮತ ಹಾಕಿದರೆ ಯಾರು ಕೂಡಾ B ಟೀಂ ಅಂತ ಆರೋಪ ಮಾಡಲು ಆಗೋದಿಲ್ಲ. ಹೀಗಾಗಿ ಇಬ್ಬರು ಅಭ್ಯರ್ಥಿಗಳ ಹಿನ್ನಲೆ ನೋಡಿ ಮತ ಹಾಕುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ NDA ಅಭ್ಯರ್ಥಿಗೆ ಬೆಂಬಲ ಅಂತ ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ
ಜೆಡಿಎಸ್ ಬಳಿ ಒಟ್ಟು 34 ಮತಗಳು ಇವೆ. 32 ಜನ ವಿಧಾನ ಸಭೆ ಸದಸ್ಯರು ಹಾಗೂ ಒಬ್ಬರು ಸಂಸದರು ಮತ್ತು ಒಬ್ಬರು ರಾಜ್ಯಸಭೆ ಸದಸ್ಯರು ಇದ್ದಾರೆ. ಹೀಗಾಗಿ 34 ಮತಗಳ ಮೌಲ್ಯಗಳು ಅತ್ಯಂತ ಮಹತ್ವ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಬೆಂಬಲ ಕೇಳಿದ್ದರು.