ತುಮಕೂರು: ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆರ್ಶಿವಾದದಿಂದ ನಾನು ಉಳಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗುಬ್ಬಿ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತಿನ ಈ ಕಾರ್ಯಕ್ರಮ ಬಯಸಿ ಬಂದ ಕಾರ್ಯಕ್ರಮ ಅಲ್ಲ. 2018 ಚುನಾವಣೆ ನಂತರ ಯಾವುದೇ ಬಹುಮತ ಬರಲಿಲ್ಲ. ಜೆಡಿಎಸ್‍ಗೆ ಬಂದಿದ್ದು 37 ಸ್ಥಾನಗಳು. ಕಾಂಗ್ರೆಸ್ ನಾಯಕರೇ ಬಂದು ಸರ್ಕಾರ ಮಾಡಲು ದುಂಬಾಲು ಬಿದ್ದರು. ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ದೇವೇಗೌಡರು ಹೇಳಿದರು. ಆದರೆ ದೆಹಲಿಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಎಂದರು. ಲಕ್ಷಾಂತರ ಕಾರ್ಯಕರ್ತರು ಕಟ್ಟಿರುವ ಪಕ್ಷ ಇದು. ಆದರೆ ಬಿಜೆಪಿಯ ಬಿ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸಿಗರು ಆರೋಪಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಮುಸ್ಲಿಂ ಭಾಂದವರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 130 ಸ್ಥಾನ ಇದ್ದ ಕಾಂಗ್ರೆಸ್ ನಮ್ಮನ್ನು ಮುಗಿಸಲು ಬಂದು 78 ಸ್ಥಾನಕ್ಕೆ ಬಂದಿದೆ. ಮುಸ್ಲಿಂ ಭಾಂದವರೇನಾದರೂ ನಮ್ಮ ಜೊತೆ ಇದ್ದಿದ್ದರೇ 70 ಸ್ಥಾನ ಗೆಲ್ಲುತ್ತಿದ್ವಿ. ಈ ಜಿಲ್ಲೆಯಲ್ಲಿ ಏನೋ ಆಗೋಗಿದೆ, ಜೆಡಿಎಸ್ ಮುಗಿದೋಯ್ತು. ಅವರೇ ಆಚೆ ಕಳಿಸ್ತಿದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. 23 ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ ಅಂತ ಚರ್ಚೆ ಮಾಡಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ
Advertisement
Advertisement
1999ರಲ್ಲಿ ಗುಬ್ಬಿಯಲ್ಲಿ ವೀರಣ್ಣಗೌಡರು ಶಾಸಕರಾಗಿದ್ದರು. 10 ಜನರಲ್ಲಿ 6 ಜನರು ಜನತಾಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದರು. 2004ರ ಚುನಾವಣೆ ಚನ್ನಿಗಪ್ಪ ಶಿವನಂಜಪ್ಪ ಅವರ ಮನೆಗೆ ದೇವೇಗೌಡರನ್ನು ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಂದೇ ಶಿವನಂಜಪ್ಪ ಅವರಿಗೆ ಟಿಕೆಟ್ ಕೊಡುತ್ತೇನೆ ಅಂತ ಮಾತು ಕೊಟ್ಟಿದ್ದರು. ಬಳಿಕ ಶ್ರೀನಿವಾಸ್ ಅವರು ಬಂದು ಗುಬ್ಬಿಗೆ ಟಿಕೆಟ್ ಕೇಳಿದ್ದರು. ಶಿವನಂಜಪ್ಪ ಅವರಿಗೆ ಮಾತು ಕೊಟ್ಟಿದ್ದರಿಂದ ಪಕ್ಷೇತರ ನಿಲ್ಲಿ ಎಂದು ನಾನೇ ಹೇಳಿದ್ದೆ. ಆ ಚುನಾವಣೆಯಲ್ಲಿ ನಿಮ್ಮೆಲರ ಆಶೀರ್ವಾದದಿಂದ ಗೆದ್ದರು. ಬಹಳ ಅನ್ಯೋನ್ಯವಾಗಿದ್ದರು, ನನ್ನ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಗುಬ್ಬಿ ತಾಲೂಕಿನ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಅವರೇನು ಕಾಯಬೇಕಿರಲಿಲ್ಲ. ಗುಬ್ಬಿ ತಾಲೂಕಿನ ಎಲ್ಲಾ ಅಭಿವೃದ್ದಿ ಕೆಲಸ ಮಾಡಿಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ
ಬಳಿಕ 2008ರಲ್ಲಿ ನಿಂತು ಗೆದ್ದರು. ನಾನು ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಯಲ್ಲಿ ಸ್ಪರ್ಧಿಸಿದೆ. ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗಿ, ಚಿಕ್ಕಬಳ್ಳಾಪುರದಲ್ಲಿ ಸೋತೆ. ಅದೇನೋ ಸೂಟ್ ಕೇಸ್, ನಾನೇ ಬೆಳೆಸ್ದೆ ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ, 2013 – 14 ರಿಂದಲೇ ನನ್ನ ವಿರುದ್ಧ ಕೆಲವರು ಮಾತನಾಡುವುದಕ್ಕೆ ಶುರುಮಾಡಿದ್ರು. ನಾನು ಇವತ್ತು ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ. ನನ್ನಿಂದ ಯಾವುದೇ ಅಪಚಾರವಾಗಿಲ್ಲ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ನಾವು ರಾಜಕೀಯ ಮಾಡಿಲ್ಲ. ನಿಮ್ಮಂತ ಜನರನ್ನು ವಿಶ್ವಾಸದಲ್ಲಿಟ್ಟುಕೊಂಡು ಚುನಾವಣೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ
ಇದೇ ವೇಳೆ ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆಶೀರ್ವಾದದಿಂದ ನಾನು ಉಳಿದೆ. ದೇವೇಗೌಡರು ಈ ವಯಸ್ಸಿನಲ್ಲೂ ಓಡಾಡುತ್ತಾರೆ ಎಂದು ಹೇಳುತ್ತಾ ಭಾಷಣ ಮಾಡುತ್ತಾ ಭಾವುಕರಾದರು.