ಮೈಸೂರು: ರಾಜಕೀಯದಲ್ಲಿ (Politics) ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ. ಸರ್ಕಾರ ಬೀಳುವಾಗ ಅಮೆರಿಕದಲ್ಲಿ ಕೂತಿದ್ದರು. ಇದಕ್ಕೆ ಏನೂ ಕರೆಯಬೇಕು? ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್‌ನಲ್ಲಿ ಕಾಲ ಕಳೆದರು ಎಂದು ಸಿಎಂ ಸಿದ್ದರಾಮಯ್ಯ (Siddaramaiah), ಹೆಚ್‌ಡಿ ಕುಮಾರಸ್ವಾಮಿ (HD Kumaraswamy)) ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬಿಜೆಪಿ ಅವರೇ ಸರ್ಕಾರ ಬೀಳಿಸಿದ್ದು ಅಂತಾ ಹೇಳಿದ್ದರು. ಇದು ರೆಕಾರ್ಡ್ ಆಗಿದೆ. ಅಸೆಂಬ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ. ಸಚಿವರು, ಶಾಸಕರನ್ನು ಭೇಟಿ ಮಾಡದೆ ಹೋಟೆಲ್‌ನಲ್ಲಿ ಕೂತು ಈಗ ನನ್ನ ಮೇಲೆ ಆರೋಪ ಮಾಡುತ್ತಾರೆ. ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದ ರೀತಿ ಮಾತಾಡಿದ್ದಾರೆ. ಬಿಜೆಪಿಯವರು (BJP) ಹತಾಶರಾಗಿದ್ದಾರೆ. ಬಿಜೆಪಿಗಿಂತಾ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ. ಬಿಜೆಪಿ, ಜೆಡಿಎಸ್‌ದು ಹೆಳವರು, ಕುರುಡರ ಕಥೆ ಆಗಿದೆ. ಇವರು ಅವರ ಮೇಲೆ ಅವರು ಇವರ ಮೇಲೆ ಡಿಪೆಂಡ್ ಆಗಿದ್ದಾರೆ. ಖಾಲಿ ಡಬ್ಬ ಮಾತ್ರ ಶಬ್ದ ಜಾಸ್ತಿ ಮಾಡುತ್ತೆ. ತುಂಬಿದ ಕೊಡ ತುಳುಕುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿಗೆ ಕನಕಪುರ ಸೇರಿಸೋದು ಸರಿ: ಪ್ರದೀಪ್ ಈಶ್ವರ್
Advertisement
Advertisement
ರಾಮನಗರ (Ramanagara) ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನಗರ ವಿಚಾರ ಅವರನ್ನೇ ಕೇಳಿ. ನನಗೆ ಅದು ಗೊತ್ತಿಲ್ಲ. ನನ್ನ ಜೊತೆ ಅವರು ಚರ್ಚೆ ಮಾಡಿಲ್ಲ. ನನಗೆ ಅವರ ಮೈಂಡ್‌ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ ಕಾಡಾನೆ ಥರ ಆಗ್ತಿದ್ದಾರೆ: ಸಿಪಿ ಯೋಗೇಶ್ವರ್ ಟಾಂಗ್
Advertisement
ನಾಡಹಬ್ಬ ರೀ ಲುಕ್ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಮೈಸೂರು ಜನರ ಅಭಿಪ್ರಾಯ ಕೇಳಿ ರೀ ಲುಕ್ ಬಗ್ಗೆ ತೀರ್ಮಾನ ಮಾಡುತ್ತೇವೆ. ಜನರ ಅಭಿಪ್ರಾಯದ ಪ್ರಕಾರ ತೀರ್ಮಾನ ಮಾಡುತ್ತೇವೆ. ಈ ಬಾರಿ ಒಟ್ಟಾರೆ ದಸರಾ ಶಾಂತಿಯುತವಾಗಿ ಇತ್ತು. ಅಧಿಕಾರಿಗಳು ಟೀಂ ವರ್ಕ್ ಆಗಿ ಕೆಲಸ ಮಾಡಿದ್ದಾರೆ. ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬರ ನಿರ್ವಹಣೆಗೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ಧ ಕೋಟ ಕಿಡಿಕಿಡಿ
Advertisement
ಇದು ಎಟಿಎಂ ಸರ್ಕಾರ ಎಂಬ ಬಿಜೆಪಿ ಟ್ವೀಟ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ? ಕೋಟ್ಯಂತರ ರೂ. ಹಣದಲ್ಲಿ ಆಪರೇಷನ್ ಕಮಲ ಮಾಡಿದವರು ನಮ್ಮ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಆರ್ಥಿಕವಾಗಿ ದಿವಾಳಿ ಆಗಲು ಬಿಜೆಪಿ ಕಾರಣ. ವಿದ್ಯುತ್ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿ ಕಾರಣ. ಬಿಜೆಪಿ ಆಡಳಿತ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಬಿಜೆಪಿಯವರು ಸಾಲ ಮಾಡಿ ಆರ್ಥಿಕವಾಗಿ ರಾಜ್ಯ ದಿವಾಳಿ ಮಾಡಿ ಹೋಗಿದ್ದಾರೆ. ಹಣ ಇರದಿದ್ದರೂ ಕಾಮಗಾರಿ ಟೆಂಡರ್ ಕರೆದಿದ್ದಾರೆ. 30 ಸಾವಿರ ಕೋಟಿ ರೂ. ಪೆಂಡಿಂಗ್ ಬಿಲ್ ಇದೆ. ಇದಕ್ಕೆ ಯಾರು ಹೊಣೆ? ನಮ್ಮ ಐದು ವರ್ಷದ ಆಡಳಿತ ಆರ್ಥಿಕ ಪರಿಸ್ಥಿತಿ, ಬಿಜೆಪಿ ಅವಧಿಯ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇನೆ. ಹೈಕಮಾಂಡ್‌ಗೆ ದುಡ್ಡು ಕಳಿಸುತ್ತೇವೆ ಎಂಬುದು ಸುಳ್ಳು. ನಾವು ಯಾರಿಗೂ ಒಂದು ಪೈಸೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯ
ಸಂಪುಟ ಪುನಾರಚನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ವಿಸ್ತರಣೆ ಹಾಗೂ ಮತ್ತೊಂದು ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಈ ರೀತಿಯ ಚರ್ಚೆ ಯಾವುದು ಇಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನ ಎಂದರು. ಇನ್ನು ಹುಲಿ ಉಗುರು ಧರಿಸಿದ್ದಕ್ಕೆ ನಟ ಜಗ್ಗೇಶ್ ಹಾಗೂ ನಟ ದರ್ಶನ ವಿರುದ್ಧ ದೂರು ಪ್ರಕರಣದ ಕುರಿತು ಮಾತನಾಡಿದ ಅವರು, ಯಾಕೆ ಹಾಕಿದ್ದು ಅಂತ ಗೊತ್ತಿಲ್ಲ. ಕೇಳಿ ತಿಳಿದು ಮಾತನಾಡುತ್ತೇನೆ. ಪೊಲೀಸ್ ಇಲಾಖೆ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ ಹಣ ತಿಂದಿಲ್ಲವೆಂದು ಹೆಚ್‍ಡಿಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ: ಬಾಲಕೃಷ್ಣ
Web Stories