ಹಾಸನ: ಕುಮಾರಣ್ಣ (HD Kumaraswamy) ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುವಂತಹವರು. ಅವರು ಏನು ಹೇಳಿದರೂ ಆಶೀರ್ವಾದ ಅನ್ಕೊತೀನಿ ಎಂದು ಬಿಜೆಪಿ (BJP) ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.
ಅವನ್ಯಾವನೋ ಶಾಸಕ 50 ಸಾವಿರ ಲೀಡ್‌ನಿಂದ ಗೆಲ್ತೀನಿ ಅಂತ ಚಾಲೆಂಜ್ ಹಾಕ್ತಾನೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿಗೆ ನಯವಾಗಿಯೇ ತಿರುಗೇಟು ಕೊಟ್ಟ ಪ್ರೀತಂ ಗೌಡ, ಅವರು ವೈಯುಕ್ತಿಕವಾಗಿ ನನ್ನ ಬಗ್ಗೆ ಮಾತಾನಾಡಿದರೆ ಅವರು ಯಾವಾಗಲೂ ನನ್ನ ಹಿತೈಷಿಯೇ. ನನ್ನ ಬಗ್ಗೆ ವೈಯುಕ್ತಿಕವಾಗಿ ಮಾತನಾಡಿದರೆ ಅವರು ಪ್ರೀತಿಯಿಂದ ಮಾತನಾಡಿರುತ್ತಾರೆ ಎಂದು ಹೇಳಿಕೆ ನೀಡಿದರು.
Advertisement
Advertisement
ಅವರ ಪ್ರೀತಿಯನ್ನು ನಾನು ಆಶೀರ್ವಾದ ಎಂದು ತೆಗೆದುಕೊಂಡಿರುತ್ತೇನೆ. ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರುತ್ತದೆ. ಅವರು ಏನು ಬಯಸುತ್ತಾರೆ ಅದನ್ನು ಮಾಡುವುದಕ್ಕೆ ಅವರ ಒಬ್ಬ ಸಹೋದರನಾಗಿ ನಾನು ಹಾಸನದಲ್ಲಿ ಅವರ ಪರವಾಗಿ ಯೋಚನೆ ಮಾಡುತ್ತೇನೆ ಎಂದರು.
Advertisement
ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ರೇವಣ್ಣ ಅವರ ಮನೆಯವರನ್ನು ಕ್ಯಾಂಡಿಡೇಟ್ ಮಾಡಲ್ಲ ಎಂದು ಶಪಥ ಮಾಡಿದ್ದಾರೆ ಹೊರತು ಪ್ರೀತಂ ಗೌಡನನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ಶಪಥ ಮಾಡಿಲ್ಲ. ಅವರು ಸಾಮಾನ್ಯ ಕಾರ್ಯಕರ್ತನನ್ನು ಕ್ಯಾಂಡಿಡೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರಾ? ಅವರು ಹಾಗೆ ಹೇಳಲ್ಲ, ಪಾಪ ಅವರು ನನ್ನ ಹಿತೈಷಿ ಎಂದು ತಿರುಗೇಟು ನೀಡಿದರು.
Advertisement
ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಎಂದಿದ್ದಾರೆ ಹೊರತು ಗೆಲ್ಲಿಸಿಕೊಳ್ತೀನಿ ಅಂತ ಹೇಳಿಲ್ಲ. ಗೆಲ್ಲಿಸಿಕೊಳ್ಳೋದು ಪ್ರೀತಂ ಗೌಡನನ್ನು. ಟಿಕೆಟ್ ಕೋಡೋದು ಸಾಮಾನ್ಯ ಕಾರ್ಯಕರ್ತನಿಗೆ. ನಿಮಗೆ ಅಷ್ಟು ರಾಜಕೀಯ ಮರ್ಮ ಅರ್ಥವಾಗಲಿಲ್ಲ ಎಂದರೆ ನಾನು ಮತ್ತೇನು ಹೇಳಲಿ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಕಾರವಾರದಲ್ಲಿ PDO ವರ್ಗಾವಣೆ ಕಿರಿಕ್ – ಕಚೇರಿಯಲ್ಲೇ ಹಾಲಿ, ಮಾಜಿ ಶಾಸಕರ ಫೈಟ್
ಅವರು ನಮ್ಮ ಜೊತೆ ಬರುತ್ತಾರೆ. ನಾನು ಹೇಳ್ತಿರೋದು ಅಧಿಕಾರ ಮಾಡೋಕೆ ಬರ್ತಾರೆ ಅಂತ ಅಲ್ಲ. ಕುಮಾರಣ್ಣ ಬಿಜೆಪಿಗೆ ಬಂದರೆ ಸ್ವಾಗತ, ಯಾರು ಬೇಡ ಅಂತಾರೆ? ಕುಮಾರಣ್ಣನನ್ನು ನಾನು ಭಾರತೀಯ ಜನತಾ ಪಾರ್ಟಿಗೆ ಕರೆಯುತ್ತಿದ್ದೇನೆ. ನಿಮ್ಮ ಕುಟುಂಬದಲ್ಲಿ ಆಗುತ್ತಿರುವಂತಹ ಒತ್ತಡವನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಆ ಒತ್ತಡವನ್ನು ಅವರಿಂದ ಸಹಿಸಲು ಆಗುತ್ತಿಲ್ಲ ಎಂದರೆ ದಯಮಾಡಿ ಭಾರತೀಯ ಜನತಾ ಪಾರ್ಟಿಗೆ ಬಂದು ಸೇರಿಕೊಳ್ಳಿ ಎಂದು ಟಾಂಗ್ ನೀಡಿದರು.
ನಿಮಗೆ ಉತ್ತಮವಾದಂತಹ ಜನಾಭಿಪ್ರಾಯ ಇದೆ. ನಾನು ವೈಯಕ್ತಿಕವಾಗಿ ನನ್ನ ಹಾಗೂ ಅವರ ಸಂಬAಧದ ಮೇಲೆ ಕರೆಯುತ್ತಿದ್ದೇನೆ. ನನಗೆ ಪಕ್ಷದ ಅಥವಾ ಸರ್ಕಾರದ ಯಾವುದೇ ಜವಾಬ್ದಾರಿ ಇಲ್ಲ. ಅವರು ಏಕವಚನದಲ್ಲಿ ಮಾತನಾಡಿರುವುದು ನಮ್ಮಿಬ್ಬರ ನಡುವೆ ಇರುವಂತಹ ಸಲುಗೆ, ವಿಶ್ವಾಸ, ಪ್ರೀತಿಯಿಂದ. ಆ ಪ್ರೀತಿಗೆ ಯಾಕೆ ಅಪಾರ್ಥ ಕಲ್ಪಿಸಬೇಕು ಎಂದು ನುಡಿದರು. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!