ಬೆಂಗಳೂರು: ಪ್ರಮಾಣ ವಚನಕ್ಕೂ ಮುನ್ನ ಭಾವಿ ಸಿಎಂ ಕುಮಾರಸ್ವಾಮಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಇಂದು ಕುಟುಂಬಸಮೇತರಾಗಿ ಧರ್ಮಸ್ಥಳ ಮತ್ತು ಶೃಂಗೇರಿಗೆ ಭೇಟಿ ನೀಡ್ತಿದ್ದಾರೆ.
ಇಂದು ಬೆಳಗ್ಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಲಿರುವ ಕುಮಾರಸ್ವಾಮಿ, 8.30ಕ್ಕೆ ಧರ್ಮಸ್ಥಳ ತಲುಪಲಿದ್ದಾರೆ. ಈ ಹಿಂದೆ 2011ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಕುಮಾರಸ್ವಾಮಿಯವರನ್ನು ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೆ ಬರುವಂತೆ ಸವಾಲು ಹಾಕಿದ್ರು. ಬಳಿಕ ಇಬ್ಬರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ತಪ್ಪು ಕಾಣಿಕೆ ಹಾಕಿದ್ರು. ಇದನ್ನೂ ಓದಿ: ಅಪವಿತ್ರ ಮೈತ್ರಿ ಎಂದು ಟೀಕಿಸಿದ್ದ ಅಮಿತ್ ಶಾಗೆ ತಿರುಗೇಟು ನೀಡಿದ ಹೆಚ್‍ಡಿಕೆ
Advertisement
ಇದಾದ ಕೆಲವೇ ತಿಂಗಳಲ್ಲಿ ಬಿಎಸ್‍ವೈ ಕುರ್ಚಿ ಕಳೆದುಕೊಂಡಿದ್ರು. ಇದೀಗ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಧರ್ಮಸ್ಥಳಕ್ಕೆ ಎಚ್‍ಡಿ ಕುಮಾರಸ್ವಾಮಿ ಭೇಟಿ ನೀಡ್ತಿರೋದು ಕುತೂಹಲಕ್ಕೆ ಕಾರಣವಾಗಿದೆ. ಮಧ್ಯಾಹ್ನ 12 ಗಂಟೆಗೆ ಶೃಂಗೇರಿಗೆ ಆಗಮಿಸಿ, ಶಾರದಾಂಬೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಗುರುಗಳ ಆಶೀರ್ವಾದ ಪಡೆದು ಬೆಂಗಳೂರಿಗೆ ಮರಳಲಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕುಮಾರ ಪರ್ವಕ್ಕೆ ಕ್ಷಣಗಣನೆ – ಖಾತೆ ಹಂಚಿಕೆ ಬಗ್ಗೆ ನಾಳೆ ಅಂತಿಮ ಘೋಷಣೆ
Advertisement
ಕಳೆದ ಜನವರಿಯಲ್ಲಿ 11 ದಿನಗಳ ಕಾಲ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಶಾರದಾಂಬೆ ಸನ್ನಿಧಿಯಲ್ಲಿ ಅತಿರುದ್ರಮಹಾಯಾಗ ನಡೆಸಿದ್ದರು.