– ಪತ್ನಿ, ಅತ್ತಿಗೆಯಿಂದ ಹೆಚ್‌ಡಿಕೆ ಪಡೆದಿದ್ದಾರೆ ಸಾಲ
ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಅಂತೆಯೇ ಇಂದು ನಾಮಪತ್ರ ಸಲ್ಲಿಕೆ ಮಾಡಿರುವ ಹೆಚ್‌ಡಿಕೆ ತಮ್ಮ ಆಸ್ತಿ ವಿವರವನ್ನು ಕೂಡ ಘೋಷಿಸಿಕೊಂಡಿದ್ದಾರೆ.
Advertisement
ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕುಟುಂಬದ ಒಟ್ಟು ಆಸ್ತಿ 217.21 ಕೋಟಿಯಾಗಿದ್ದು, ಇವರಿಗಿಂತ ಇವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಶ್ರೀಮಂತೆಯಾಗಿದ್ದಾರೆ. ಅತ್ತಿಗೆ ಭವಾನಿ, ಪತ್ನಿ ಹಾಗೂ ಪುತ್ರನಿಂದಲೂ ಹೆಚ್‌ಡಿಕೆ ಸಾಲವನ್ನು ಪಡೆದಿದ್ದಾರೆ. ಅತ್ತಿಗೆ ಭವಾನಿ ರೇವಣ್ಣರಿಂದ 3.26 ಲಕ್ಷ ರೂ ಸಾಲ ಪಡೆದರೆ, ಪತ್ನಿ ಅನಿತಾರಿಂದ 8.5 ಕೋಟಿ ಸಾಲವನ್ನು ಕುಮಾರಸ್ವಾಮಿ ಮಾಡಿದ್ದಾರೆ.
Advertisement
Advertisement
ಕುಮಾರಸ್ವಾಮಿ ಆಸ್ತಿ 62.82 ಕೋಟಿ ಆಗಿದ್ದು, ಚರಾಸ್ತಿ- 10.71 ಕೋಟಿಯಾದರೆ ಸ್ಥಿರಾಸ್ತಿ 43.94 ಕೋಟಿ. ವಿವಿಧ ಕಡೆ 19.12ಕೋಟಿ ಸಾಲವನ್ನು ಹೆಚ್‌ಡಿಕೆ ಮಾಡಿದ್ದಾರೆ. ಇನ್ನು 47 ಲಕ್ಷ ಮೌಲ್ಯದ 750 ಗ್ರಾಂ. ಚಿನ್ನಾಭರಣ ಇದೆ. 9.62 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 2.60 ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರ ಹೆಚ್‌ಡಿಕೆ ಬಳಿಯಿದೆ. ಇದನ್ನೂ ಓದಿ: ಕೋಟಿ ಕೋಟಿ ಆಸ್ತಿ ಒಡತಿ ಶೋಭಾ ಕರಂದ್ಲಾಜೆ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್ – ಆಸ್ತಿ ಎಷ್ಟಿದೆ ಗೊತ್ತಾ?
Advertisement
ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಆಸ್ತಿ-154.39 ಕೋಟಿ. ಚರಾಸ್ತಿ 90.32 ಕೋಟಿಯಾದ್ರೆ ಸ್ಥಿರಾಸ್ತಿ 64.07 ಕೋಟಿ ಮೌಲ್ಯದ್ದಾಗಿದೆ. ಇವರು 63.05 ಕೋಟಿ ಸಾಲ ಮಾಡಿದ್ದಾರೆ. ಅನಿತಾ ಅವರ ಬಳಿ 2.41ಕೋಟಿ ಮೌಲ್ಯದ 3.8ಕೆಜಿ ಚಿನ್ನಾಭರಣ, 13 ಲಕ್ಷ ಮೌಲ್ಯದ 17 ಕೆಜಿ ಬೆಳ್ಳಿ ಹಾಗೂ 33 ಲಕ್ಷ ಮೌಲ್ಯದ 50 ಕ್ಯಾರೆಟ್ ಡೈಮಂಡ್ ಇದೆ.
ಎದುರಿಸುತ್ತಿರೋ ಪ್ರಕರಣ: ಲೋಕಾಯುಕ್ತ, ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನು ಮಾಜಿ ಮುಖ್ಯಮಂತ್ರಿಗಳು ಎದುರಿಸುತ್ತಿದ್ದಾರೆ. ಲೋಕಾಯುಕ್ತದಲ್ಲಿ 3 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.