ಲಿಂಗಸುಗೂರು, ಮಾನ್ವಿಯಲ್ಲಿ HDK ಭರ್ಜರಿ ಮತಬೇಟೆ; ಕುಮಾರಸ್ವಾಮಿಗೆ ಟಗರು ಮರಿ ಗಿಫ್ಟ್‌

Public TV
1 Min Read
kumaraswamy 1

ರಾಯಚೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ರಾಯಚೂರು ಜಿಲ್ಲೆಯಲ್ಲಿಂದು ಜೆಡಿಎಸ್ ಅಭ್ಯರ್ಥಿಗಳ (JDS Candidates) ಪರ ಭರ್ಜರಿ ಮತಬೇಟೆ ನಡೆಸಿದರು.

ಲಿಂಗಸುಗೂರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಹಾಗೂ ಮಾನ್ವಿ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ ಪರ ಲಿಂಗಸುಗೂರು ಹಾಗೂ ಮಾನ್ವಿಯಲ್ಲಿ ಮತ ಶಿಕಾರಿ ನಡೆಸಿದರು. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

Congress BJP JDS

ಮತ ಪ್ರಚಾರದಲ್ಲಿ ನೀರಾವರಿ ಯೋಜನಗಳ ಜಪ ಮಾಡಿದ ಹೆಚ್‌ಡಿಕೆ ಸಂಪೂರ್ಣ ನೀರಾವರಿಗಾಗಿ ಜೆಡಿಎಸ್ ಬೆಂಬಲಿಸುವಂತೆ ಕೋರಿದರು. ಲಿಂಗಸುಗೂರು, ಮುದಗಲ್ ಹಾಗೂ ಹಟ್ಟಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರದ ಭರವಸೆ ನೀಡಿದ ಕುಮಾರಸ್ವಾಮಿ ಎರಡು ಬಾರಿ ಸೋತಿರುವ ಲಿಂಗಸುಗೂರು ಅಭ್ಯರ್ಥಿ ಸಿದ್ದು ಬಂಡಿಯನ್ನ ಈ ಬಾರಿ ಗೆಲ್ಲಿಸುಂತೆ ಮನವಿ ಮಾಡಿದರು. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಮಾಹಿತಿ ಸಾಬೀತು ಮಾಡಿದರೆ 1 ಕೋಟಿ ಬಹುಮಾನ ಘೋಷಣೆ

kumaraswamy

ಇನ್ನೂ ಮಾನ್ವಿಯಲ್ಲಿ ರಾಜಾ ವೆಂಕಟಪ್ಪ ಪರ ಮತಬೇಟೆ ನಡೆಸಿದ ಹೆಚ್‌ಡಿಕೆ ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗಕ್ಕೆ ನೀರು ಹರಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ, ಕ್ಷೇತ್ರಕ್ಕೆ ಕೈಗಾರಿಕೆಗಳು ಬರಬೇಕಿದೆ ಈ ನಿಟ್ಟಿನಲ್ಲಿ ಜೆಡಿಎಸ್ ಗೆ ಬೆಂಬಲಿಸುವಂತೆ ಕೋರಿದರು. ಇದೇ ವೇಳೆ ಜೆಡಿಎಸ್‌ ಕಾರ್ಯಕರ್ತರು ಹೆಚ್‌ಡಿಕೆಗೆ ಟಗರು ಮರಿಯನ್ನು ಉಡುಗೊರೆಯಾಗಿ ನೀಡಿದರು.

Share This Article