ರಾಯಚೂರು: ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬ್ಲ್ಯಾಕ್‌ಮೇಲ್ (Blackmail) ಮಾಡಿಕೊಂಡೇ ರಾಜಕೀಯ ಜೀವನ ಮಾಡಿಕೊಂಡು ಬಂದಿದ್ದಾರೆ. ಅಸೆಂಬ್ಲಿಯಲ್ಲೂ ಹಾವು ಇದೆ ಅಂತಾನೆ ಹೇಳಿಕೊಂಡು ಬಂದಿದಾರೆ. ಪೆನ್‌ಡ್ರೈವ್ ತೋರಿಸಿದ್ರೂ, ಇವತ್ತಿನವರೆಗೂ ಕೊಟ್ಟಿಲ್ಲ. ಈಗಲೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್‌ಎಸ್ ಬೋಸರಾಜು (NS Boseraju) ಹೇಳಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ರಾಜ್ಯದ ಸಚಿವರ ದಾಖಲೆ ಬಿಡುಗಡೆ ಮಾಡಿದರೆ ರಾಜೀನಾಮೆ ಕೊಡಬೇಕಾಗುತ್ತೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ದಾಖಲೆ ತೆಗೆದು ಬಹಿರಂಗಪಡಿಸಲಿ ಯಾರು ಬೇಡ ಎನ್ನುತ್ತಾರೆ. ಒಂದು ವಿಷಯ ಮಾತನಾಡಿದರೆ ಅದಕ್ಕೆ ಗಂಭೀರತೆ ಇರಬೇಕು. ಅವರು ಹಿಟ್ ಆ್ಯಂಡ್ ರನ್ ಅಂತ ಎಲ್ಲರೂ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಡೆಹ್ರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ, ಆರೋಗ್ಯ Expo – ಪ್ರಹ್ಲಾದ್ ಜೋಶಿ ಮಾಹಿತಿ
ಎಸ್‌ಐಟಿ (SIT) ಎಡಿಜಿಪಿ ಚಂದ್ರಶೇಖರ್ (ADGP Chandrashekar) ಸರಿಯಲ್ಲ ಅಂತ ಹೇಳೋಕೆ ಇವರು ಯಾರು? ಇವರು ಮಾಡಿರುವ ಇ.ಡಿ, ಸಿಬಿಐನವರು ಸರಿಯಿದ್ದಾರಾ? ಎಂಥಾ ಇ.ಡಿ ಅಧಿಕಾರಿಗಳನ್ನು ಹಾಕಿದ್ದಾರೆ? ಇದಕ್ಕೆಲ್ಲಾ ಕುಮಾರ ಸ್ವಾಮಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಿತ್ರದುರ್ಗ| ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೇ ಹೊತ್ತಿ ಉರಿದ ಟ್ಯಾಂಕರ್ – ಚಾಲಕ, ನಿರ್ವಾಹಕ ಪಾರು
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳುವ ಮುನ್ನ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು. ಅವರೇ ಎರಡು ಮೂರು ಕೇಸಿನಲ್ಲಿದ್ದಾರೆ. ಚುನಾವಣಾ ಬಾಂಡ್ ವಿಚಾರದಲ್ಲಿ ಎಫ್‌ಐಆರ್ ಆಗಿದೆ. ಬಿಜೆಪಿಯವರು ರಾಜೀನಾಮೆ ಕೊಡುತ್ತಾರಾ? ಬಾಂಡ್‌ಗಳಿಗೆ ಮೋದಿಯವರು ಸಹ ಸಂಬಂಧಿಸಿದ್ದಾರೆ. ಅವರು ರಾಜೀನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್ ವಾರ್ನಿಂಗ್; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್