ಬೆಂಗಳೂರು: ನಾನು ಇನ್ಮುಂದೆ ದಿನ ಮಾಧ್ಯಮದವರ ಸಲಹಾ ಸಮಿತಿಯನ್ನು ರಚನೆ ಮಾಡಿ ಏನು ಮಾತಾನಾಡಬೇಕು. ಏನು ಮಾತಾನಾಡಬಾರದು ಅಂತಾ ಕೇಳುತ್ತೇನೆ. ಅಲ್ಲದೇ ಮಾಧ್ಯಮಗಳೊಂದಿಗೆ ಇನ್ನುಂದೆ ಹೆಚ್ಚು ಮಾತನಾಡಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಬೀದಿ ಬದಿ ರೈತರನ್ನು ಸಾಲಶೂಲ, ಮೀಟರ್ ಬಡ್ಡಿ ಮಾಫಿಯಾದಿಂದ ರಕ್ಷಿಸೋ ಸಲುವಾಗಿ ಬಜೆಟ್‍ನಲ್ಲಿ ಘೋಷಿಸಿದ್ದ `ಬಡವರ ಬಂಧು’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಕಳೆದ ಕೆಲ ದಿನಗಳಿಂದ ಬೆಳವಣಿಗೆಗಳಿಂದ ಬಹಳ ನೋವಾಗಿದೆ. ನನಗೆ ಹೇಗೆ ಮಾತನಾಡಬೇಕು ಎಂದು ಸಲಹೆ ಪಡೆಯುವ ಪರಿಸ್ಥಿತಿ ಇದೆ. ನನ್ನ ಮಾತಿಗೆ ಬೇರೆ ಅರ್ಥ ಕಲ್ಪಿಸಲಾಗುತ್ತೆ. ಅದಕ್ಕೆ ಇನ್ಮುಂದೆ ಜಾಸ್ತಿ ಮಾತಾಡಲ್ಲ. ಅದರಲ್ಲೂ ಮಾಧ್ಯಮಕ್ಕೆ ಹೇಳಿಕೆ ಕೊಡಲ್ಲ. ಬೇಕಿದ್ದರೆ ಬರೆದುಕೊಳ್ಳಿ ಇಲ್ಲ ಬೇಡ ಎಂದು ಮಾಧ್ಯಮದ ವಿರುದ್ಧ ಹರಿಹಾಯ್ದದರು.
Advertisement
Advertisement
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ಸಿಎಂ ಕುಮಾರಸ್ವಾಮಿ ಅವರು, ಈರುಳ್ಳಿ ಬೆಳೆಗಾರರು ಪ್ರಧಾನಿ ಮೋದಿಗೆ ಟ್ವೀಟ್ ಮಾಡುತ್ತಾರೆ. ನಾನುಮಾಡುವುದು ಇವರಿಗೆ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.
Advertisement
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳು ನಡೆಸುತ್ತಿರುವವರ ಮೇಲ ಪೊಲೀಸರು ಗದಾ ಪ್ರಹಾರ ಮಾಡಬೇಡಿ. ಅಲ್ಲದೇ ಅವರಿಂದ ಹಫ್ತಾ ವಸೂಲಿ ಮಾಡಬೇಡಿ. ಕಷ್ಟ ಪಟ್ಟು ದುಡಿಯುವ ಜನರಿಂದ ಹಣ ಪಡೆಯಬೇಡಿ ಎಂದರು. ಅಲ್ಲದೇ ಕೆಲವರಿಗೆ ಏನೆ ಮಾಡಿದರು ಕೆಟ್ಟದಾಗಿ ಕಾಣಿಸುತ್ತದೆ ಎಂದು ವಿರೋಧಿ ಪಕ್ಷದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv