ನವದೆಹಲಿ: ಲೋಕಸಭೆಯ ಅವಿಶ್ವಾಸ ಮಂಡನೆ ವೇಳೆ ಬಿಜೆಪಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಕಣ್ಣೀರಿನ ವಿಚಾರವನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿದೆ.
ಬಿಜೆಪಿ ಸಂಸದ ರಾಕೇಶ್ ಸಿಂಗ್ ರವರು ತಮ್ಮ ಭಾಷಣದ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ವತಃ ತಾನು ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದನ್ನು ಇಡೀ ದೇಶವೇ ನೋಡಿದೆ. ತಾವು ವಿಷ ಕುಡಿದು ವಿಷ ಕಂಠನಾಗಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿರೋ ಇನ್ನೆಷ್ಟು ಪಕ್ಷಗಳು ವಿಷ ಕುಡಿಯಬೇಕಾಗಾತ್ತದೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಕಿದ್ದ ಕಣ್ಣೀರು ಕಾಂಗ್ರೆಸ್ ಗೆ ನುಂಗಲಾರದ ತುಪ್ಪವಾಗಿದ್ದು, ಇಂದಿನ ಅವಿಶ್ವಾಸ ನಿರ್ಣಯ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಬಿಜೆಪಿ ವಿಷ ಕಂಠ ಎಂಬ ಹೇಳಿಕೆಯನ್ನೆ ಬಿಜೆಪಿ ನಾಯಕರು ಬ್ರಹಾಸ್ತ್ರವಾಗಿ ಬಳಸಿಕೊಂಡರು.