ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ (LokSabha Elections 2024) ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಅಧಿಕ ಸ್ಥಾನಗಳನ್ನ ಗೆಲ್ಲಲು ಮಹಾ ಕಸರತ್ತನ್ನೇ ನಡೆಸಿವೆ. ಅದರಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ (JDS BJP Alliance) ಕೂಟ ಹಾಲಿ ಸಚಿವರು ಹಾಗೂ ಶಾಸಕರನ್ನೇ ಕಣಕ್ಕಿಳಿಸಲು ಪ್ಲ್ಯಾನ್ ಮಾಡಿವೆ. ಈ ನಡುವೆ ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಅನ್ನೋ ಬಗ್ಗೆ ಕುತೂಹಲ ಮೂಡಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಹಿರಿಯ ನಾಯಕರು ಹಾಗೂ ಕಾರ್ಯಕರ್ತರಿಂದ ಒತ್ತಡ ಕೇಳಿಬರುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟರೆ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಗೆಲ್ಲಲು ಕಾಂಗ್ರೆಸ್‍ಗೆ ಮಹಿಳಾ ಅಭ್ಯರ್ಥಿಗಳೇ ಆಸರೆ- 3 ಕ್ಷೇತ್ರದಲ್ಲಿ ಆಯ್ಕೆ ಫೈನಲ್
Advertisement
Advertisement
ಮೋದಿ ಒಪ್ಪಿದ್ರೆ ಕುಮಾರಸ್ವಾಮಿ ಸ್ಪರ್ಧೆ?
* ಬಿಜೆಪಿ ಜೊತೆ ಮೈತ್ರಿ ಆಗಿರೋದ್ರಿಂದ ಏಕಾಏಕಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡೋಕೆ ಆಗೋದಿಲ್ಲ. ಮೋದಿ ಒಪ್ಪಿಗೆ ಬೇಕು ಎಂಬ ಅನಿಸಿಕೆ.
* ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ಸೀಟು ಹಂಚಿಕೆ ಇನ್ನು ಫೈನಲ್ ಆಗಿಲ್ಲ. ಈಗಲೇ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಒತ್ತಡ ಹಾಕಿದ್ರೆ ಮೈತ್ರಿ ವೇಳೆ ಗೊಂದಲ ಉಂಟಾಗುವ ಆತಂಕವೂ ಇದೆ.
* ಪ್ರಧಾನಿ ಮೋದಿ ಅವರೇ ಕುಮಾರಸ್ವಾಮಿ ಸ್ಪರ್ಧೆ ಮಾಡಲಿ ಅಂದರೆ ಅದಕ್ಕೆ ದೊಡ್ಡ ಬೆಲೆ ಸಿಗುತ್ತದೆ. ಇದು ಕುಮಾರಸ್ವಾಮಿ ದೊಡ್ಡ ಗೆಲುವಿಗೂ ಕಾರಣವಾಗುತ್ತೆ ಎಂಬ ಲೆಕ್ಕಾಚಾರ.
* ಮೋದಿ ಅವರೇ ಕುಮಾರಸ್ವಾಮಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟರೆ ರಾಜ್ಯದ ಬಿಜೆಪಿ ನಾಯಕರು, ಕಾರ್ಯಕರ್ತರು, ಮುಖಂಡರು ವಿರೋಧ ಮಾಡಲು ಆಗೊಲ್ಲ.
* ಮೋದಿ ಒಪ್ಪಿಗೆಯಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಜೆಡಿಎಸ್‌ನಲ್ಲೂ ವಿರೋಧಗಳು ಬರೊಲ್ಲ ಎಂಬ ಲೆಕ್ಕಾಚಾರ.
* ಮೋದಿ ಒಪ್ಪಿಗೆಯಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಉತ್ತಮ ಸಂದೇಶ ಹೋಗುವ ಲೆಕ್ಕಾಚಾರವೂ ಇದೆ. ಇದನ್ನೂ ಓದಿ: ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ – ಎಂಇಎಸ್‌ಗೆ ಬೆಳಗಾವಿ ಪಾಲಿಕೆ ಆಯುಕ್ತರ ಶಾಕ್!