Connect with us

Bengaluru City

ಶಾಂತವಾಗಿ ನೆರವೇರಿತು ಅಂಬಿ ಅಂತ್ಯಕ್ರಿಯೆ- ರಿಯಲ್ ಹೀರೋ ಆದ್ರು ಎಚ್‍ಡಿಕೆ

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಮುಗಿಸಿದ ಶ್ರೇಯಸ್ಸು ಸರ್ಕಾರಕ್ಕೆ ಸಂದಿದೆ. ಅದರಲ್ಲೂ ಕುಮಾರಸ್ವಾಮಿ ಅವರ ಮುತುವರ್ಜಿಯಿಂದಾಗಿ ಈ ಘನಕಾರ್ಯ ನಡೆದಿದೆ. ಈ ಮೂಲಕ ಮುಖ್ಯಮಂತ್ರಿಯವರು ರಿಯಲ್ ಹೀರೋ ಆಗಿದ್ದಾರೆ.

ಡಾ. ರಾಜಕುಮಾರ್ ನಿಧನದ ವೇಳೆ ನಡೆದಿದ್ದ ಘಟನೆಗಳಿಂದ ಪಾಠ ಕಲಿತಿದ್ದ ಕುಮಾರಸ್ವಾಮಿ ಅವರು ಅಂಬಿ ಅವರ ಎಲ್ಲಾ ವಿಧಿವಿಧಾನಗಳನ್ನು ಶಾಂತಿಭಂಗವಾಗದಂತೆ ಸಮರ್ಥವಾಗಿ, ದಕ್ಷವಾಗಿ ನಿಭಾಯಿಸಿದ್ದಾರೆ.

ಸಿಎಂ ರಿಯಲ್ ಹೀರೋ ಅನಿಸಿದ್ದು ಹೇಗೆ?:
ನಟ ಅಂಬರೀಶ್ ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಕುಮಾರಸ್ವಾಮಿಯವರು ತಕ್ಷಣವೇ ಆಸ್ಪತ್ರೆಯತ್ತ ದೌಡಾಯಿಸಿದ್ದರು. ಅಲ್ಲದೇ ಆಸ್ಪತ್ರೆಯ ಮುಂದೆ ಅದಾಗಲೇ ನೆರೆದಿದ್ದ ಅಭಿಮಾನಿಗಳಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರು.

ಅಂಬಿ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದರು. ಮರುದಿನ ಅಂದರೆ ಭಾನುವಾರ ಮಂಡ್ಯದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ರು. ಅಲ್ಲದೇ ಈ ಕುರಿತಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಿ, ಸೇನಾ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆಯಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಶಿಫ್ಟ್ ಮಾಡುವಲ್ಲಿ ಯಶಸ್ವಿಯಾದ್ರು.

ಇಷ್ಟು ಮಾತ್ರವಲ್ಲದೇ ಅಂಬಿ ಪಾರ್ಥಿವ ಶರೀರದ ಜೊತೆ ಸೇನಾ ಹೆಲಿಕಾಪ್ಟರ್‍ನಲ್ಲಿ ಸಿಎಂ ಕೂಡ ತೆರಳಿದ್ದರು. ಅಲ್ಲಿಯೂ ಖುದ್ದು ನಿಂತು ವ್ಯವಸ್ಥೆ ಪರಿಶೀಲನೆ ನಡೆಸಿದ್ದರು. ಸಚಿವ ಪುಟ್ಟರಾಜು ಸೇರಿದಂತೆ ಹಲವರ ಉಸ್ತುವಾರಿಯ ಮುಖಾಂತರ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಅಲ್ಲಿಂದ ಮತ್ತೆ ಅಂಬಿ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತಂದಿದ್ದು, ಬಳಿಕ ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋವರೆಗೆ ಅಂತಿಮ ಯಾನ ನಡೆಸಲಾಯಿತು. ಈ ವೇಳೆಯೂ ಕುಮಾರಸ್ವಾಮಿಯವರು ಅಂಬಿ ಪಾರ್ಥಿವ ಶರೀರದೊಂದಿಗೆ ಸಾಗಿದ್ದರು.

ಬಳಿಕ ಖುದ್ದು ಸಿಎಂ ಕುಮಾರಸ್ವಾಮಿಯೇ ಮುತುವರ್ಜಿ ವಹಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಒಟ್ಟಿನಲ್ಲಿ ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಅಂಬರೀಶ್ ಅಂತ್ಯಸಂಸ್ಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಹೆಗ್ಗಳಿಕೆ ಸಿಎಂ ಕುಮಾರಸ್ವಾಮಿ ಪಾತ್ರರಾಗಿದ್ದಾರೆ.

https://www.youtube.com/watch?v=107Y6xA1jyg

https://www.youtube.com/watch?v=7x6fhqCn8pU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *