ರಾಮನಗರ: ನಾನು ಯಾವುದೇ ಕಾರಣಕ್ಕೂ ಚನ್ನಪಟ್ಟಣ (Channapatna) ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಘೋಷಣೆ ಮಾಡಿದ್ದಾರೆ.
Advertisement
ಚನ್ನಪಟ್ಟಣದ (Channapatna) ಅಲ್ಪಸಂಖ್ಯಾತರ ಘಟಕದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ ನಾನು ಚನ್ನಪಟ್ಟಣದಿಂದಲೇ ಚುನಾವಣೆಗೆ (Election) ಸ್ಪರ್ಧಿಸುತ್ತೇನೆ. ಕಳೆದ ಬಾರಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆ. ಆದರೆ ಈ ಬಾರಿ ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ ಮಾಡ್ತೇನೆ. ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರದಿಂದ ಸ್ಪರ್ಧಿಸಲು ನಮ್ಮದು ಟೂರಿಂಗ್ ಟಾಕೀಸ್ ಅಲ್ಲ. ನನ್ನ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲ ಇಲ್ಲ ಅಂತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ
Advertisement
Advertisement
ಇದೇ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwara) ವಿರುದ್ಧ ವಾಗ್ದಾಳಿ ನಡೆಸಿದ ಹೆಚ್‌ಡಿಕೆ, ಯೋಗೇಶ್ವರ್ ಥರದವರನ್ನು ಇನ್ನೂ ನೂರು ಜನರನ್ನು ಕಳಿಸಲಿ. ನಾನು ಹೆದರಿ ಪಲಾಯನ ಮಾಡುವುದಿಲ್ಲ. ಎಂಎಲ್‌ಸಿಗೆ ಅನುದಾನ ಕೊಟ್ಟು ಕ್ಷೇತ್ರದ ಜನರ ಓಲೈಕೆ ಮಾಡಬಹುದು ಅಂತ ಬೊಮ್ಮಾಯಿ (Basavaraj Bommai) ಅಂದ್ಕೊಂಡಿದ್ದಾರೆ. ಆದರೆ ನನ್ನ ಕ್ಷೇತ್ರದ ಜನರು ಆಮಿಷಕ್ಕೆ ಬಲಿಯಾಗಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್
Advertisement
ನಾನು ದೇವೇಗೌಡರ ಕುಟುಂಬದಲ್ಲಿ ಹುಟ್ಟಿರೋದು. ಎಲ್ಲದಕ್ಕೂ ಹೋರಾಟ ಮಾಡುವ ಶಕ್ತಿ ನಮ್ಮ ಅಪ್ಪ ನನಗೆ ಕೊಟ್ಟಿದ್ದಾರೆ. ನಾನು ಚನ್ನಪಟ್ಟಣದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯದ 120ಕ್ಕೂ ಹೆಚ್ಚು ಕಡೆ ನಾನು ಸಂಚಾರ ಮಾಡಬೇಕು. ನನ್ನ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸುತ್ತಾರೆ ಎಂದು ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.