ಬೆಂಗಳೂರು/ ಚಿಕ್ಕಬಳ್ಳಾಪುರ: ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಗೈರು ಆಗಿರುವುದು ನನಗೆ ಬಹಳ ಬೇಸರ ತಂದಿದೆ. ಅವರು ಇಬ್ಬರೂ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. 120 ಡಿಗ್ರಿ ಜ್ವರ ಬಂದಿದ್ದರೂ ವ್ಹೀಲ್ ಚೇರ್ ನಲ್ಲಾದ್ರೂ ಕಾರ್ಯಕ್ರಮಕ್ಕೆ ಹೋಗಲೇಬೇಕಿತ್ತು ಅಂತ ಕನ್ನಡ ಚಳುವಳಿ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಟಿಪ್ಪು ಜನ್ಮಸ್ಥಳ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಟಿಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಬಾಗಿಯಾಗುತ್ತಿದ್ದರೆ ಅವರ ಘನತೆ ಗಾಂಭೀರ್ಯ ಇನ್ನಷ್ಟೂ ಹೆಚ್ಚಾಗುತ್ತಿತ್ತು. ಅವರು ಹೋಗದೇ ಇರುವುದು ಸರಿಯಲ್ಲ. ಅವರ ಬಗ್ಗೆ ನನಗೆ ಗೌರವ ಇದೆ ಆದ್ರೆ ಯಾರೂ ಸಲಹೆ ಕೊಟ್ಟರೋ ಗೊತ್ತಿಲ್ಲ. ಅವರು ಸಾಮಾನ್ಯರಲ್ಲ ಈ ರಾಜ್ಯದ ಮುಖ್ಯಮಂತ್ರಿಗಳು. ಸಿಎಂ ದೇಶಭಕ್ತನ ಸಮಾರಂಭಕ್ಕೆ ಹೋಗದಿದ್ರೆ ನೋವಾಗುತ್ತೆ ಅಂತ ವಾಟಾಳ್ ಅಸಮಾಧಾನ ಹೊರಹಾಕಿದರು.
ಸಿಎಂ ಕುಮಾರಸ್ವಾಮಿ ಬಹಳ ತಪ್ಪು ಮಾಡಿದಂತಾಗುತ್ತೆ. ಸಿಎಂ ತಪ್ಪು ದಾರಿಯನ್ನ ಹಿಡಿದಂತಾಗುತ್ತೆ. ಹೀಗಾಗಿ ಕಾರ್ಯಕ್ರಮಕ್ಕೆ ಹೋಗದೇ ಇರುವುದು ಸರಿಯಾದ ಕ್ರಮ ಅಲ್ಲ. ಡಿಸಿಎಂ ಸಹ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಿಎಂ-ಡಿಸಿಎಂ ಈ ರೀತಿ ನಡೆದರೆ ಇದು ರಾಜ್ಯ ಆಗೋದಿಲ್ಲ. ರಾಜ್ಯದ ಅಧಿಕಾರ ಹಿಡಿದವರು ಜನತೆಯನ್ನ ಗೊಂದಲಕ್ಕೀಡು ಮಾಡಬಾರದು ಅಂತ ಹೇಳಿದ ಅವರು ತಮ್ಮ ಅಧಿಕಾರವನ್ನ ಪ್ರಾಮಾಣಿಕವಾಗಿ ಮಾಡುವಂತೆ ಒತ್ತಾಯಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews