ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಸ್ಟಂಟ್, ಜನರಿಗೆ ವಿಷ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಜನರಿಗೆ ನೀರು ಕೊಡಲು ಈಗ ಜ್ಞಾನೋದಯ ಆಗಿದ್ಯಾ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Advertisement
ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಯಾ ಜಿಂಕೆಗಳು ಇದ್ದ ಹಾಗೇ. ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿವೆ. ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡುತ್ತಿದೆ. ಇದರಿಂದ ನಮಗೇನು ಆತಂಕ ಇಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಹೋಗಿದ್ದರು ಆಗ ಏನಾಗಿತ್ತು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಪ್ರಾರಂಭ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.
Advertisement
Advertisement
ಸಿದ್ದರಾಮಯ್ಯ ಅವಧಿಯಲ್ಲಿ ಡಿಪಿಆರ್ ಆಗೇ ಇಲ್ಲ. ಡಿಪಿಆರ್ ಆಗಿದ್ದು ನನ್ನ ಕಾಲದಲ್ಲಿ. ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಕಾವೇರಿ ಭಾಗದ ಜನರ ಜೀವನ ಹಾಳು ಮಾಡುವುದಕ್ಕೆ ಹೊರಟಿದೆ. ಇಷ್ಟು ದಿನ ಇಲ್ಲದವರು ಈಗ ಬೆಂಗಳೂರು ಜನರಿಗೆ ನೀರು ಕೊಡಿಸುವುದಕ್ಕೆ ಜ್ಞಾನೋದಯ ಆಗಿದೆಯಾ ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್
Advertisement
ಕಾಂಗ್ರೆಸ್ ಪಾದಯಾತ್ರೆಯಿಂದ ಆ ಭಾಗದ ಜನರ ಜೀವಕ್ಕೆ ಎಫೆಕ್ಟ್ ಆಗುತ್ತದೆ. ನೀವು ಎಸಿಯಲ್ಲಿ ಹಾಯಾಗಿ ಇರುತ್ತೀರಾ. ಬಡವರನ್ನು ನೋಡುವವರು ಯಾರು ಎಂದು ಪ್ರಶ್ನಿಸುವುದರ ಜೊತೆಗೆ 5 ವರ್ಷದ ಅಧಿಕಾರ ಜೆಡಿಎಸ್‍ಗೆ ಕೊಟ್ಟರೆ. ಪಾದಯಾತ್ರೆ ಮೂಲಕ ಸ್ಟಂಟ್ ಮಾಡುವುಲ್ಲ. ನಿಗದಿತ ಅವಧಿಯೊಳಗೆ ಈ ಯೋಜನೆಗಳನ್ನು ಮುಗಿಸುತ್ತೇವೆ. ಬಿಜೆಪಿ- ಕಾಂಗ್ರೆಸ್ ತರಹ ಬೂಟಾಟಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಡಿ.ಕೆ. ಶಿವಕುಮಾರ್ ಕುಮಾರಣ್ಣ ನಮ್ಮ ಅಣ್ಣ ಅಂತಾರೆ. ಏನ್ ನಾಟಕ ಮಾಡುತ್ತಿದ್ದೀರಾ? ಈ ಡ್ರಾಮಾ ಮಾಡಿಕೊಂಡು ನೀವು ಜೀವನ ಮಾಡಲು ಸಾಧ್ಯವಿಲ್ಲ. ಇವೆಲ್ಲಾ ವ್ಯಂಗ್ಯ ಅಷ್ಟೇ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ ಎಲ್ಲಿ ಹೋಗಿತ್ತು: ರೇಣುಕಾಚಾರ್ಯ
ಕಾಂಗ್ರೆಸ್ ಪಾದಯಾತ್ರೆ ಮಾಡಿದ ಕೂಡಲೇ ಮೋದಿ ಯೋಜನೆಗೆ ಕ್ಲಿಯರ್ ಕೊಡ್ತಾರಾ? ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅವಕಾಶ ಕೊಡುವುದಿಲ್ಲ ಅಂತಿದ್ದಾರೆ. ಅಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರ ಇದೆ. ಆದರೂ ಕಾಂಗ್ರೆಸ್ ಅವರು ಅಣ್ಣಾಮಲೈ ಮೇಲೆ ಆರೋಪ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಜಾತ್ರೆ ಮಾಡಿ. ಈ ಕೋವಿಡ್ ಸಮಯದಲ್ಲಿ 10-20 ಜನ ಸೇರಿಸಿ. ನಿಮ್ಮ ಜಾತ್ರೆ ಮೂಲಕ ನಿಮಗೆ ನೀರು ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ನೀರಾವರಿ ವಿಚಾರದಲ್ಲಿ ದೇವೇಗೌಡರನ್ನು ನಿರ್ಲಕ್ಷ್ಯ ಮಾಡಿದರೆ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಎಷ್ಟು ದಿನ ಅವರು ಬದುಕುತ್ತಾರೋ ಗೊತ್ತಿಲ್ಲ. ಅವರು ಇರುವ ಒಳಗೆ ರಾಜಕೀಯ ಮಾಡದೇ ಯೋಜನೆಗಳನ್ನು ಮುಗಿಸಿಕೊಳ್ಳಿ. ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ. ಆದರೆ ಯೋಜನೆ ಅನುಷ್ಠಾನ ಮಾಡುವ ಬದ್ದತೆ ಎರಡು ಪಕ್ಷಗಳಿಗೆ ಇಲ್ಲ. ದೇವೇಗೌಡ ಅನುಭವ ಪಡೆದು ಯೋಜನೆ ಅನುಷ್ಠಾನ ಮಾಡಿ ಅಂತ ಸಲಹೆ ನೀಡಿದರು. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್
ಪಾದಯಾತ್ರೆ ಮಾಡಿ ಶೋ ಕೊಡುವುದರಿಂದ ರಾಜ್ಯಕ್ಕೆ ಸಮಸ್ಯೆ ಆಗಬಹುದು. ಪಾದಯಾತ್ರೆ ಮಾಡಿ ಅಂತ ಸಲಹೆ ಕೊಟ್ಟವರು ಯಾರು? ನಾಳೆ ತಮಿಳುನಾಡಿನವರು ಸುಮ್ಮನೆ ಇರುತ್ತಾರಾ? ಸುಪ್ರೀಂಕೋರ್ಟ್ ನಲ್ಲಿ ಕೇಸ್ ಇದೆ. ಇವರ ಪಾದಯಾತ್ರೆ ಮತ್ತಷ್ಟು ಸಮಸ್ಯೆ ಆಗಬಹುದು. ಪಾದಯಾತ್ರೆಯಿಂದ ಈ ಕೆಲಸ ಆಗುತ್ತದೆ ಅಂದರೆ ನಾನು ಕೂಡಾ ಪಾದಯಾತ್ರೆಗೆ ಹೋಗುವುದಕ್ಕೆ ಸಿದ್ದ. ಈ ಬಗ್ಗೆ ವಾಸ್ತವಾಂಶವನ್ನು ಕಾಂಗ್ರೆಸ್ ಇಡಲಿ. ಪಾದಯಾತ್ರೆ ಮೂಲಕ ಜನರಿಗೆ ವಿಷ ಹಾಕುತ್ತಿದ್ದೀರಾ. ಓಟ್ ಬ್ಯಾಂಕ್‍ಗೆ ಈ ಪಾದಯಾತ್ರೆ ಅಷ್ಟೇ ಅಂತ ವಾಗ್ದಾಳಿ ನಡೆಸಿದರು.