ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆಯೋ ಮಹಾಮಸ್ತಕಾಭಿಷೇಕದಲ್ಲಿ ಹಣ ಹೊಡೆಯಲು ಬಿಟ್ಟಿಲ್ಲ ಅಂತಾ ಹೆಣ್ಮಗಳನ್ನು ವರ್ಗ ಮಾಡಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.
Advertisement
ಈ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ದೇವೇಗೌಡರು, ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ವರ್ಗ ಮಾಡಿದೆ. ಅವರು ಬಂದು ಆರು ತಿಂಗಳು ಕೂಡಾ ಆಗಿಲ್ಲ. ಈ ಹಿಂದಿನ ಡಿಸಿಗೂ ಕೂಡ ಸರ್ಕಾರ ಹೀಗೆಯೇ ಮಾಡಿದೆ. ಮಹಾಮಸ್ತಕಾಭಿಷೇಕದ ಸಿದ್ಧತೆ ಕೆಲಸ ನಡೆಯುತ್ತಿದೆ. ಇದರಲ್ಲಿ ಹಣ ಹೊಡೆಯಲು ಆ ಹೆಣ್ಣುಮಗಳು ಬಿಡಲಿಲ್ಲ. ಅಲ್ಲಿನ ಉಸ್ತುವಾರಿ ಸಚಿವರು ಏನ್ ಮಾಡ್ತಿದ್ದಾರೆ ಅಂತಾ ಗೊತ್ತು. ಇಂಥ ಪವಿತ್ರ ಕಾರ್ಯದಲ್ಲೂ ಪರ್ಸಂಟೇಜ್ ಬೇಕಾ ಅಂತ ಪ್ರಶ್ನಿಸಿದ್ರು. ಇದನ್ನೆಲ್ಲ ತಡೆಯಲು ಮುಂದಾಗಿದ್ದಕ್ಕೇ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದ್ರು.
Advertisement
Advertisement
ಸಿಎಂ ಸಿದ್ದರಾಮಯ್ಯ ಜೊತೆಗೆ ನಾನು ವೇದಿಕೆ ಹಂಚಿಕೊಳ್ಳಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರವರಿ 7ರಂದು ನಡೆಯೋ ಮಹಾಮಸ್ತಾಭಿಷೇಕ ಉದ್ಘಾಟನೆಗೆ ಹೋಗಲ್ಲ. ಈ ಬಗ್ಗೆ ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ ಅಂತ ಹೇಳಿದ್ರು.
Advertisement
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋದಕ್ಕೆ ಏನ್ ಮಾಡಬೇಕು ಅಂದಾಗ ಡಿಸಿ ರೋಹಿಣಿ ಸಿಂಧೂರಿ ವರ್ಗ ಮಾಡಬೇಕು ಅಂದ್ರಂತೆ. ನಾನು ಆಕೆಯನ್ನು ಡಿಸಿ ಕಚೇರಿಯಲ್ಲಿ ಒಮ್ಮೆ ಭೇಟಿಯಾಗಿದ್ದೆ ಅಷ್ಟೆ ಎಂದು ಹೇಳಿದ್ರು. ಇದನ್ನೂ ಓದಿ: ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ
ಥೂ ಎಂದು ಉಗಿದ ಹೆಚ್‍ಡಿಡಿ: ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್‍ಡಿಡಿ, ಪೊಲೀಸರೇ ರಕ್ಷಣೆ ಕೋರಿ ಗೃಹ ಕಾರ್ಯದರ್ಶಿಗೆ ಮನವಿ ಮಾಡುತ್ತಾರೆ. ಕೆಂಪಯ್ಯ ನವರ ಅಧಿಕಾರದಲ್ಲಿ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಜನ ಹೊಡಿತಾರೆ ಅಂತಾ ಪೊಲೀಸರೇ ಮನವಿ ಮಾಡುತ್ತಿದ್ದಾರೆ ಅಂದ್ರೆ ಇದನ್ನು ಯಾರಾದ್ರೂ ಸರ್ಕಾರ ಅಂತಾ ಕರೆಯಲು ಸಾಧ್ಯವೇ? ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು. ಮಾಜಿ ಪ್ರಧಾನಿ ಜಿಲ್ಲೆಯಲ್ಲೇ ಕಲೆಕ್ಷನ್ ಮಾಡಕ್ಕೆ ಅವಕಾಶ ಕೊಡಲ್ಲ ಅಂತಾ ಡಿಸಿ ವರ್ಗಾವಣೆ ಮಾಡ್ತಾರೆ ಅಂದ್ರೆ ಥೂ…. ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎರಡೆರಡು ಬಾರಿ ಥೂ ಎಂದು ಉಗಿದರು.
ಜನವರಿ 25 ಮತ್ತು ಫೆ. 4ರಂದು ಕರೆ ನೀಡಿರುವ ಬಂದ್‍ಗೆ ಜೆಡಿಎಸ್ ವಿರೋಧಿಸುವುದಿಲ್ಲ. ಈ ಬಂದ್‍ಗಳಿಂದ ಮಹಾದಾಯಿ ಸಮಸ್ಯೆ ವಿವಾದಕ್ಕೆ ಪರಿಹಾರ ಸಿಗಲ್ಲ. ಇದನ್ನು ಸರ್ಕಾರಿ ಪ್ರೇರಿತ ಬಂದ್ ಎನ್ನುತ್ತಿದ್ದಾರೆ ಎಂದರು.
https://www.youtube.com/watch?v=es6FHQGRIb4
https://www.youtube.com/watch?v=VljqR9QPwQo