-ಚಕ್ರವ್ಯೂಹ ಭೇದಿಸಲು ಹೊರಟ ಅಭಿಮನ್ಯುವಿನ ಉತ್ಸಾಹಕ್ಕೆ ಬ್ರೇಕ್
ಬೆಂಗಳೂರು: ಇದು ರಾಜ್ಯ ರಾಜಕಾರಣದ ದೊಡ್ಡ ಮನೆಯ ಮಹಾಭಾರತದ ಕಥೆ. ಲೋಕಸಭೆ ಚಕ್ರವ್ಯೂಹ ಭೇದಿಲು ಮುಂದಾಗಿದ್ದ ಆಧುನಿಕ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಉತ್ಸಾಹಕ್ಕೆ ದೊಡ್ಡ ಗೌಡರು ಅಂದ್ರೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ನಿಖಿಲ್ ಸಹ ಪದೇ ಪದೇ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮಂಡ್ಯ ಕ್ಷೇತ್ರದ ಪರಿಸರ ತುಂಬಾ ವಿಭಿನ್ನವಾಗಿದ್ದು, ದೋಸ್ತಿ ಪಕ್ಷಗಳೆರೆಡು ಪ್ರಬಲವಾಗಿವೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯಕ್ಕೆ ಕ್ಷೇತ್ರಕ್ಕೆ ಭೇಟಿ ನೀಡೋದನ್ನು ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ದೇವೇಗೌಡರು ಮೊಮ್ಮಗನಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂಬ ಸೂಕ್ಷ್ಮ ಗೊಂದಲಗಳು ಮೈತ್ರಿಯಲ್ಲಿದೆ. ಜೆಡಿಎಸ್ ನಲ್ಲಿಯೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸದ್ಯದ ಸಂಸದ ಶಿವರಾಮೇಗೌಡರು ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಕಾಂಗ್ರೆಸ್‍ನಲ್ಲಿ ದಿ.ಅಂಬರೀಶ್ ಅವರ ಪತ್ನಿ ಅಥವಾ ಪುತ್ರನನ್ನು ಚುನಾವಣೆ ಕಣಕ್ಕೆ ಇಳಿಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಸಂಸದೆ ರಮ್ಯಾ ಸಹ ಮಂಡ್ಯ ಕ್ಷೇತ್ರದ ಮೇಲೆ ಒಂದು ಕಣ್ಣೀಟ್ಟಿದ್ದಾರೆ ಎನ್ನಲಾಗುತ್ತಿದೆ.
Advertisement
ದಾಯಾದಿ ಕಲಹಕ್ಕೆ ವೇದಿಕೆಯಾಗುತ್ತಾ ಮಂಡ್ಯ?
ಈ ಹಿಂದೆ ಜೆಡಿಎಸ್ ನಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ವಿಧಾನಸಭಾ ಕ್ಷೇತ್ರಕ್ಕೆ ನೀಡುವ ವಿಚಾರ ಪ್ರಸ್ತಾಪವಾದಾಗ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅಸಮಾಧಾನ ಹೊರಹಾಕಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಚುನಾವಣಾ ಕಣಕ್ಕೀಳಿಯುವುದು ಬಹುತೇಕ ಖಚಿತವಾಗಿದೆ. ಒರ್ವ ಮೊಮ್ಮಗನಿಗೆ ಟಿಕೆಟ್ ಕೊಟ್ಟು ಮತ್ತೋರ್ವನಿಗೆ ಕೊಡದೇ ಇದ್ರೆ ಕುಟುಂಬದಲ್ಲಿಯೇ ಭಿನ್ನಮತ ಸ್ಫೋಟವಾಗುತ್ತಾ? ಅಥವಾ ದೊಡ್ಡ ಗೌಡರ ಆದೇಶವನ್ನು ಒಪ್ಪಿಕೊಳ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
Advertisement
ದೇವೇಗೌಡರ ಈ ಸೂಚನೆಯಿಂದಾಗಿ ರಣೋತ್ಸಾಹದಲ್ಲಿದ್ದ ನಿಖಿಲ್ ಕುಮಾರ್ ಅವರಿಗೆ ಬೇಸರ ತಂದಿರೋದು ಸತ್ಯ. ಮಂಡ್ಯದಲ್ಲಿ ಬೇರೆ ಬೇರೆ ರೀತಿಯ ರಾಜಕೀಯ ಧೃವೀಕರಣದ ಬೆಳವಣಿಗೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಗೌಡರು ಕಾದು ನೋಡುವ ತಂತ್ರಕ್ಕೆ ಮುಂದಾದಂತೆ ಕಾಣುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv