ಚಿಕ್ಕಬಳ್ಳಾಪುರ: ಈ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಕೋಲಾರ, ಚಿಕ್ಕಬಳ್ಳಾಪುರವೂ ಸೇರಿದಂತೆ 28 ಕ್ಷೇತ್ರಗಳಲ್ಲಿಯೂ ಮೈತ್ರಿ (ಬಿಜೆಪಿ-ಜೆಡಿಎಸ್) ಅಭ್ಯರ್ಥಿ ಗೆಲ್ಲಿಸಿ ದೆಹಲಿಗೆ ಕಳುಹಿಸೋಣ ಆಮೇಲೆ ಕಾವೇರಿ, ಕೃಷ್ಣ ನೀರು (Cauvery And Krishna River Water) ಕೊಡಿ ಅಂತ ಮೋದಿ ಅವರನ್ನ ಕೇಳೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಅವರು ಕರೆ ನೀಡಿದರು.
Advertisement
ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಪಕ್ಷದ ವಿಜಯಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಐ.ಎನ್.ಡಿ.ಐ.ಎ (I.N.D.I.A Block) ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬರಿದಾದ ಚೊಂಬನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡ್ತೀವಿ- ಬಿಜೆಪಿ ಸಮಾವೇಶದಲ್ಲಿ ಅಬ್ಬರಿಸಿದ ಹೆಚ್‍ಡಿಡಿ
Advertisement
Advertisement
ಇದೇ ವೇಳೆ ಬೇಸಿಗೆ ಬವಣೆ ಬಗ್ಗೆ ಮಾತನಾಡಿದ ಗೌಡರು, ಬೆಂಗಳೂರಿನಲ್ಲಿಂದು ಒಂದು ಟ್ಯಾಂಕರ್ ನೀರಿಗೆ 2,500 ರೂ. ತಗೋತಿದ್ದಾರೆ. ಈ ನಡುವೆ ರಾಜ್ಯದಲ್ಲಿ 5 ಗ್ಯಾರಂಟಿ ಕೊಟ್ಟಿರುವ ಕಾಂಗ್ರೆಸ್ ದೇಶವಾಸಿಗಳಿಗೆ 25 ಗ್ಯಾರಂಟಿ ಕೊಟ್ಟಿದೆ. 10 ವರ್ಷಗಳಿಂದ ಸರಿಯಾದ ವಿಪಕ್ಷ ನಾಯಕನನ್ನು ಪಡೆಯಲು ಯೋಗ್ಯತೆ ಇಲ್ಲದ ಕಾಂಗ್ರೆಸ್, 400 ಸ್ಥಾನ ಗೆಲ್ಲಲು ಮನಸ್ಸು ಮಾಡಿರುವ ಮೋದಿ ಅವರನ್ನ ಸೋಲಿಸಬೇಕು ಅಂದುಕೊಂಡಿದೆ. ಆದ್ದರಿಂದ ನಮ್ಮ ಕಾಣಿಕೆಯಾಗಿ ಕೋಲಾರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿಯೂ ಮೈತ್ರಿ (ಬಿಜೆಪಿ-ಜೆಡಿಎಸ್) ಅಭ್ಯರ್ಥಿಗಳನ್ನ ಗೆಲ್ಲಿಸಿ ದೆಹಲಿಗೆ ಕಳುಹಿಸೋಣ. ಆಮೇಲೆ ಕಾವೇರಿ, ಕೃಷ್ಣ ನೀರು ಕೊಡಿ ಅಂತ ಮೋದಿ ಅವರನ್ನ ಕೇಳೋಣ. ಆದ್ದರಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಲೆ ಬಾಗಿ ಕೇಳುತ್ತೇನೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ದೇವೇಗೌಡರ ಉತ್ಸಾಹವೇ ನಮಗೆ ಪ್ರೇರಣೆ, ಮಾರ್ಗದರ್ಶನ – ಮೋದಿ ಗುಣಗಾನ
Advertisement
ಬರಿದಾದ ಚೊಂಬನ್ನು ಅಕ್ಷಯ ಪಾತ್ರೆ ಮಾಡ್ತೀವಿ:
ಇದೇ ವೇಳೆ ಕೆಪಿಸಿಸಿಯಿಂದ ವಿವಿಧ ಪತ್ರಿಕೆಗಳಿಗೆ ನೀಡಲಾದ `ಚೊಂಬು’ ಜಾಹೀರಾತಿನ ಕುರಿತು ಪ್ರಸ್ತಾಪಿಸಿದ ಗೌಡರು, ಬರಿದಾದ ಚೊಂಬನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡ್ತೀವಿ. ಕಾಂಗ್ರೆಸ್‌ನ ಚೊಂಬು ಜಾಹೀರಾತು ಪ್ರದರ್ಶನವನ್ನು ದೇವೇಗೌಡರು ಮಾಡಿದರು. ರಾಜ್ಯದ ಮುಖ್ಯಮಂತ್ರಿಗಳು ಚೊಂಬನ್ನು ಯಾರಿಗೆ ಕೊಟ್ಟರು? ಈ ಚೊಂಬನ್ನು 10 ವರ್ಷ ಮನಮೋಹನ್ ಸಿಂಗ್ ಕೊಟ್ಟಿದ್ದು. 2004-2014 ಅವಧಿಯಲ್ಲಿ ಈ ರಾಷ್ಟ್ರ ಆಳಿದರು, ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದರು. ಯುಪಿಎ ಅಧಿಕಾರದಲ್ಲಿದ್ದಾಗ 2ಜಿ ಹಗರಣ, ಕಲ್ಲಿದ್ದಲು ಹಗರಣ ಹೀಗೆ ಎಷ್ಟು ಭ್ರಷ್ಟಾಚಾರಗಳು ನಡೆದಿವೆ. ಈ ರಾಷ್ಟ್ರದ ಸಂಪತ್ತನ್ನ ಸೂರೆ ಮಾಡಿ ಚೊಂಬು ಬರಿದಾಗಿತ್ತು. ಆ ಬರೀ ಚೊಂಬನ್ನು ಯಾರ ಕೈಗೆ ಕೊಟ್ರು. ಈ ಕಾಂಗ್ರೆಸ್ ಅವರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆರ್‌ಸಿಬಿ ಹಸಿರು ಅಭಿಯಾನ; ಬೆಂಗ್ಳೂರು ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾದ ಫ್ರಾಂಚೈಸಿಗೆ ಭೇಷ್ ಎಂದ ಫ್ಯಾನ್ಸ್