ಬೆಂಗಳೂರು: ಮೈತ್ರಿ ಸರ್ಕಾರ ಪತನದ ಬಳಿಕ ಪಕ್ಷ ಕಟ್ಟುವ ಕೆಲಸದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಏಕಾಂಗಿಯಾದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ.
ಮೈತ್ರಿ ಸರ್ಕಾರ ಪತನದ ಬಳಿಕ ಮಾಜಿ ಸಚಿವರಾದ ಎಸ್.ಆರ್.ಶ್ರೀನಿವಾಸ್ ಮತ್ತು ಜಿ.ಟಿ.ದೇವೇಗೌಡರು ಬಹಿರಂಗವಾಗಿಯೇ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ ವಿರುದ್ಧ ಕಿಡಿಕಾರುತ್ತಾ ಬಿಜೆಪಿಯನ್ನು ಹೊಗಳುತ್ತಿದ್ದಾರೆ. ಇತ್ತ ಕೆಲ ಜೆಡಿಎಸ್ ಶಾಸಕರು ಪಕ್ಷ ತೊರಯಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮೈತ್ರಿ ಸರ್ಕಾರದ ಪತನದ ಬಳಿಕ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ದಳಪತಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಸರ್ಕಾರ ಪತನದ ಬಳಿಕ ದೇವೇಗೌಡರು ಸಾಲು ಸಾಲು ಸಭೆಗಳನ್ನು ನಡೆಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಸಹ ಒಂದೆರೆಡು ಕಾರ್ಯಕ್ರಮ ನಡೆಸಿದ್ದಾರೆ. ಸರ್ಕಾರವಿದ್ದಾಗ ಒಮ್ಮೆಯೂ ಕಣ್ಣೆತ್ತಿಯೂ ನೋಡದ್ದು ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಅಧಿಕಾರ ಕಳೆದುಕೊಂಡ ಬಳಿಕ ಮತ್ತೆ ಸಂಘಟನೆ ಎನ್ನುತ್ತಿದ್ದಾರೆ. ಅಧಿಕಾರವಿದ್ದಾಗ ಕೆಲವರ ಮಾತಿಗೆ ಬದ್ಧರಾಗಿದ್ದ ನಾಯಕರು, ಒಮ್ಮೆಯೂ ನಮ್ಮ ಕಷ್ಟಗಳನ್ನು ಆಲಿಸಲಿಲ್ಲ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರವಾದ ನಾಯಕರು
Advertisement
ಕುಮಾರಸ್ವಾಮಿ- ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಎಚ್ ಡಿ ರೇವಣ್ಣ- ಮಾಜಿ ಸಚಿವ
ಮಧು ಬಂಗಾರಪ್ಪ- ಕಾರ್ಯಾಧ್ಯಕ್ಷ.
ವೈಎಸ್ ವಿ ದತ್ತಾ- ಪ್ರಚಾರ ಸಮಿತಿ ಅಧ್ಯಕ್ಷ.
ಪಿಜಿಆರ್ ಸಿಂಧ್ಯಾ- ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಸವರಾಜ್ ಹೊರಟ್ಟಿ- ಮಾಜಿ ಸಭಾಪತಿ
ನಿಖಿಲ್ ಕುಮಾರಸ್ವಾಮಿ- ಯುವ ಘಟಕದ ಅಧ್ಯಕ್ಷ
ಪ್ರಜ್ವಲ್ ರೇವಣ್ಣ- ಸಂಸದ
ಪುಟ್ಟರಾಜು – ಮಾಜಿ ಸಚಿವ
ಸಾರಾ ಮಹೇಶ್ – ಮಾಜಿ ಸಚಿವ
ಕುಪ್ಪೇಂದ್ರ ರೆಡ್ಡಿ- ರಾಜ್ಯಸಭಾ ಸಂಸದ
ಬಂಡೆಪ್ಪ ಕಾಶಂಪೂರ್- ಮಾಜಿ ಸಚಿವ
ಶರವಣ – ಎಂಎಲ್‍ಸಿ