ಹಾಸನ: ಎಂಎಲ್‍ಸಿ ಚುನಾವಣೆಗೆ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಸ್ಪರ್ಧಿಸುತ್ತಿರುವುದು ಬಹುತೇಕ ಖಚಿತವಾಗಿದ್ದು, ಅಂತಿಮ ಘೋಷಣೆಯೊಂದೇ ಬಾಕಿ ಇದೆ ಮತ್ತು ನಾಳೆ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
Advertisement
ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹಾಸನದಲ್ಲಿ ನಡೆದಿದ್ದ ಸಭೆ ವೇಳೆ ಭವಾನಿ ರೇವಣ್ಣ ಅವರಿಗೆ ಎಂಎಲ್‍ಸಿ ಟಿಕೆಟ್ ನೀಡುವಂತೆ ಶಾಸಕರಾದ ಲಿಂಗೇಶ್, ಬಾಲಕೃಷ್ಣ ಸೇರಿದಂತೆ ಹಲವರು ಒತ್ತಾಯಿಸಿದ್ದರು. ಆ ನಂತರ ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಮುಖಂಡರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಇದೀಗ ಎಂಎಲ್‍ಸಿ ಟಿಕೆಟ್ ಸೂರಜ್ ರೇವಣ್ಣ ಅವರಿಗೆ ಬಹುತೇಕ ಖಚಿತ ಎಂಬ ಮಾಹಿತಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ: ಆರ್. ಅಶೋಕ್
Advertisement
Advertisement
ಒಂದು ವೇಳೆ ಸೂರಜ್ ರೇವಣ್ಣ ಹೆಸರು ಅಂತಿಮವಾಗಿ ಘೋಷಣೆಯಾದರೆ ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಅಧಿಕೃತವಾಗಿ ರಾಜ್ಯರಾಜಕಾರಣಕ್ಕೆ ಎಂಟ್ರಿ ಪಡೆದಂತಾಗುತ್ತದೆ ಎನ್ನಬಹುದು. ಇದನ್ನೂ ಓದಿ: ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್