ಬೆಂಗಳೂರು: ದೇವೇಗೌಡ (HD Devegowda) ಮತ್ತು ಕುಮಾರಸ್ವಾಮಿ (HD Kumaraswamy) ಯಾವತ್ತು ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮಾತಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ ಎಂಬ ಕುಮಾರಸ್ವಾಮಿ ಪ್ರಶ್ನೆ ತಿರುಗೇಟು ಕೊಟ್ಟ ಅವರು, ಕುಮಾರಸ್ವಾಮಿ ಇರುವಾಗ ಗ್ಯಾರಂಟಿ ಯೋಜನೆ ಕೊಟ್ಟಿದ್ದಾರಾ? ಕುಮಾರಸ್ವಾಮಿಗೆ ಮಾತಾಡಲು ಯಾವ ನೈತಿಕ ಹಕ್ಕಿದೆ? ಕುಮಾರಸ್ವಾಮಿ ಬೇಕಾದರೆ ದೆಹಲಿಯಲ್ಲಿ ಮಾತಾಡಲಿ ಎಂದು ಕಿಡಿಕಾರಿದರು.ಇದನ್ನೂ ಓದಿ: ಹಾರಾಷ್ಟ್ರ ಸರ್ಕಾರದ ಮೇಲೆ ಕೇಸ್ ಹಾಕುತ್ತೇವೆ – ಸಿದ್ದರಾಮಯ್ಯ
Advertisement
Advertisement
ನಾವು ಒಂದು ವರ್ಷಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇವೆ. 59 ಸಾವಿರ ರೂ. ನಮಗೆ ವಾಪಸ್ ಬರುತ್ತದೆ. ನಾವು ಒಂದು ರೂಪಾಯಿ ಕೊಟ್ಟರೆ ನಮಗೆ ಬರೋದು 14 ಪೈಸೆ. ಉಳಿದದ್ದು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತದೆ. ಕುಮಾರಸ್ವಾಮಿ ಆ ಹಣವನ್ನು ರಾಜ್ಯಕ್ಕೆ ಕೊಡಿಸಲಿ ಎಂದು ಸವಾಲು ಹಾಕಿದರು. ಬರೀ ಮಾತಾಡಿದರೆ ಏನು ಪ್ರಯೋಜನಾ? ದೇವೇಗೌಡ ಆಗಲಿ ಕುಮಾರಸ್ವಾಮಿ ಆಗಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮಾತಾಡಿಲ್ಲ ಎಂದು ಕಿಡಿಕಾರಿದರು.
Advertisement
ಕಳೆದ ವರ್ಷ ನಬಾರ್ಡ್‌ನಲ್ಲಿ 5,600 ಕೋಟಿ ರೂ. ರೈತರಿಗೆ ಸಾಲ ಕೊಟ್ಟಿದ್ದರು. ಈ ವರ್ಷ 2,340 ಕೋಟಿ ರೂ. ಕೊಟ್ಡಿದ್ದಾರೆ. ಇದು ಅನ್ಯಾಯ ಅಲ್ಲವಾ? ಕುಮಾರಸ್ವಾಮಿ ಏನು ಮಾಡ್ತಿದ್ದಾರೆ ಹೇಳಿ? 58% ಕಡಿಮೆ ಕೊಟ್ಟಿದ್ದಾರೆ. ಕುಮಾರಸ್ವಾಮಿ, ಜೋಶಿ ರಾಜ್ಯದ ಮಂತ್ರಿಯಾಗಿ ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ನಾನು ಪ್ರಧಾನಮಂತ್ರಿ, ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದೇನೆ. ಸಾಲ ಕಡಿಮೆ ಮಾಡಬೇಡಿ ರೈತರಿಗೆ ಅನ್ಯಾಯ ಆಗುತ್ತದೆ. ಇದು ರೈತರಿಗೆ ದ್ರೋಹ ಮಾಡುವ ಕೆಲಸ ಎಂದು ಹೇಳಿದ್ದೇನೆ. ನಾವು ರೈತರಿಗೆ 5 ಲಕ್ಷ ರೂ.ಯವರೆಗೆ ಬಡ್ಡಿ ರಹಿತ ಸಾಲ ಕೊಟ್ಡಿದ್ದೇನೆ. 15 ಲಕ್ಷ ರೂ.ಯವರೆಗೆ 3% ಬಡ್ಡಿ ಮಾತ್ರ ಸಾಲ ಕೊಡೋದು. ಕೇಂದ್ರ ಸರ್ಕಾರ ಯಾಕೆ ಇದನ್ನ ಮಾಡಿಲ್ಲ. ಕುಮಾರಸ್ವಾಮಿ ಮಂತ್ರಿಯಾಗಿದ್ದಾರೆ. ನರೇಂದ್ರ ಮೋದಿಗೆ ಹೇಳಿ ಮಾಡಿಸಲಿ. ನಬಾರ್ಡ್ ಬರೋದು ಕೇಂದ್ರ ಹಣಕಾಸು ಕೈ ಕೆಳಗಡೆ ಬರುತ್ತದೆ. ನಿರ್ಮಲಾ ಸೀತಾರಾಮನ್ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇನೆ ಎಂದು ಹೇಳಿದ್ದರು ಕೊಟ್ಟಿದ್ದಾರಾ? ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಕೊಡಲಿಲ್ಲ. ಹಾಗಾದರೆ ಕುಮಾರಸ್ವಾಮಿ, ಜೋಶಿ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
15ನೇ ಹಣಕಾಸು ಆಯೋಗ 11,595 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಕೊಡಲಿಲ್ಲ. ಇದೆಲ್ಲವನ್ನು ಕೇಳುವುದಿಲ್ಲ. ಬರೆಯುವುದಿಲ್ಲ, ತೋರಿಸುವುದಿಲ್ಲ. ಕುಮಾರಸ್ವಾಮಿ ಹೇಳಿದ ಹಾಗೆ ಕೇಳಬೇಡಿ. ನಾವು ವರ್ಷಕ್ಕೆ 56 ಸಾವಿರ ಕೋಟಿ ರೂ.ಗಳ ಗ್ಯಾರಂಟಿ ಕೊಡ್ತಿದ್ದೇವೆ. ಖಜಾನೆಯಲ್ಲಿ ದುಡ್ಡಿಲ್ಲ ಎನ್ನುತ್ತಾರೆ. ಹಾಗಾದರೆ ಇವರು ಯಾಕೆ ಬಿಜೆಪಿಯಿರುವ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಕೊಡುತ್ತಿಲ್ಲ ಎಂದು ಗರಂ ಆದರು.ಇದನ್ನೂ ಓದಿ: ಏರ್‌ಪೋರ್ಟ್ ಮಾದರಿಯಲ್ಲಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ಅಭಿವೃದ್ಧಿ: ಸೋಮಣ್ಣ