ಬೆಂಗಳೂರು: ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎಂಬುದು ಸುಳ್ಳು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಆರ್.ಎಸ್.ಎಸ್. ಅವ್ರನ್ನ ದೇವೇಗೌಡರೇ ಹೊಗಳಿದ್ದಾರೆ ಅನ್ನೋ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಸುಳ್ಳು ಹೇಳೋದಕ್ಕೂ ಇತಿಮಿತಿ ಇರಬೇಕು. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು. ಅಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ, ಹೆಚ್‍ಡಿಕೆ ಗೆ RSS ಸಂಸ್ಕಾರ ಗೊತ್ತಿಲ್ಲ: ಶ್ರೀರಾಮುಲು
ಬಾಂಕ್ವೆಟ್ ಹಾಲ್‍ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು. ನಾನೇ ಬಾಂಕ್ವಟ್ ಹಾಲ್ ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು. ನಾನು ಆ ಸಭೆಯಲ್ಲೇ ಹೇಳಿದ್ದೆ, ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದಿದ್ದೆ. ಅದು ಬಿಟ್ಟು ಆರ್.ಎಸ್.ಎಸ್. ಹೊಗಳಿದೆ ಅಂತ ಕುಮಾರಸ್ವಾಮಿ ಅವರು ಹೇಳಿದ ಮಾತಿಗೆ ಜೋಡಿಸೋದು ಸರಿಯಲ್ಲ. ನಾನು ಆರ್.ಎಸ್.ಎಸ್. ಹೊಗಳಿಲ್ಲ ಎಂದು ಹೆಚ್‍ಡಿಡಿ ಪುನರುಚ್ಛರಿಸಿದರು. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ
ಇತ್ತೀಚೆಗೆ ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 2016ರಲ್ಲಿ ಒಂದೇ ವರ್ಷ 676 ಕಾರ್ಯಕರ್ತರು ಪಾಸ್ ಆಗಿದ್ದಾರೆ. ಬೇರೆ ಬೇರೆ ಇನ್‍ಸ್ಟಿಟ್ಯೂಶನ್‍ನಲ್ಲಿ ಆರ್‍ಎಸ್‍ಎಸ್ ನವರು ಟೀಮ್ ಇಟ್ಟಿದ್ದಾರೆ. ದೇಶದಲ್ಲಿ ಆರ್‍ಎಸ್‍ಎಸ್ ಸರ್ಕಾರ ಇದೆ. ಬಿಜೆಪಿ ಬದಲು ಆರ್‍ಎಸ್‍ಎಸ್ ಅಧಿಕಾರ ನಡೆಸುತ್ತಿದೆ. ಆರ್‍ಎಸ್‍ಎಸ್ ನವರೇ ದೇಶದ ಸವಿಲ್ ಸರ್ವೆಂಟ್ ಗಳು. 4 ಸಾವಿರ ಅಧಿಕಾರಿಗಳು ಆರೆಸ್‍ಎಸ್ ಕಾರ್ಯಕರ್ತರಾಗಿದ್ದಾರೆ. ಪರೀಕ್ಷೆ ಬರೆಯಲು ಅವರಿಗೆ ತರಬೇತಿ ನೀಡುತ್ತಾರೆ. ಹೀಗಾಗಿಯೇ ಒಂದೇ ವರ್ಷ 676 ಜನ ಆಯ್ಕೆಯಾಗ್ತಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ ರಾಜಕೀಯ ನಾಯಕರು ಪರ ವಿರೋಧ ಹೇಳಿಕೆಗಳನ್ನು ನೀಡುತ್ತಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಿದ್ದಾರೆ.
RSS ಪರ ಹಾಗೂ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ