– ಕಲಬುರಗಿ ಮೇಯರ್ ಚುನಾವಣೆ ವಿಚಾರ ಬಗ್ಗೆ ಎಚ್‍ಡಿಕೆ ತೀರ್ಮಾನಿಸುತ್ತಾರೆ
ಹಾಸನ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
Advertisement
ಜಿಲ್ಲೆಯ ಉಡುವಾರೆ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸನ್ನಿವೇಶ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. ಇನ್ನೂ ಎಲೆಕ್ಷನ್ ನೋಟಿಫಿಕೇಷನ್ ಆಗಿಲ್ಲ. ಕಾಂಗ್ರೆಸ್ ಗೆ ಅಧಿಕಾರ ನೀಡುವಂತೆ ಖರ್ಗೆಯವರು ಮಾತಾಡಿದ್ದು ನಿಜ. ಸಿಎಂ ಬೊಮ್ಮಾಯಿಯವರೂ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಅಲ್ಲಿಯ ಮುಖಂಡರು, ಗೆದ್ದಿರುವ ಸದಸ್ಯರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ
Advertisement
Advertisement
ಜೆಡಿಎಸ್ ಜೊತೆಗೆ ಒಟ್ಟಿಗೆ ಹೋಗೋಣ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹೇಳುತ್ತಾರೆ ಅದು ಬೇರೆ ವಿಚಾರ. ಖರ್ಗೆಯವರು ನಮಗೆ ಹೇಳಿಲ್ವೇ? ನಾವು ಗೆದ್ದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನಿಸಬೇಕು. ಇಬ್ಬರು ಮುಸ್ಲಿಮರು ಗೆದ್ದಿದ್ದಾರೆ. ಒಂದು ಶೆಡ್ಯೂಲ್ ಕಾಸ್ಟ್, ಒಬ್ಬರು ರೆಡ್ಡಿ ಸಮುದಾಯದವರು ಗೆದ್ದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಮ್ಮ ಮನಸ್ಸೋ ಇಚ್ಛೆ ತೀರ್ಮಾನ ಮಾಡೋದು ಸರಿಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.