– ಎಂ ಸಿ ಮನಗೂಳಿ ನೆನೆದ ದೇವೇಗೌಡರು
ವಿಜಯನಗರ: ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಿಡಿಕಾರಿದರು.
ಸಿಂದಗಿ ಉಪಚುನಾವಣೆ ಹಿನ್ನೆಲೆ ಎಲ್ಲೆಡೆ ಪ್ರಚಾರ ಕೈಗೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಎಂ.ಸಿ ಮನಗೂಳಿ ನನ್ನ ಸಹಪಾಠಿಯಾಗಿ ಕೆಲಸ ಮಾಡಿದ್ದರು. ನನ್ನ ಜೊತೆ ಅವರು 1994 ರಿಂದ ಕೆಲಸ ಮಾಡಿದ್ದರು. ಅದು ಅಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರು. ಪ್ರಸ್ತುತ ಅವರು ನಮ್ಮನ್ನ ಅಗಲಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ
ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ. 2023 ರ ಚುನಾವಣೆಗೆ ಇಡೀ ರಾಜ್ಯ ಸುತ್ತುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುವೆ. ಯಾವ ಪಕ್ಷದ ಜೊತೆ ಚುನಾವಣೆ ಸಂಬಂಧವಿಲ್ಲ ಎಂದು ನಿಖರವಾಗಿ ಹೇಳಿದರು.
ಸಿಂದಗಿ ಕ್ಷೇತ್ರದಲ್ಲಿ ಅಳಿಲು ಸೇವೆ ಮಾಡಿದ್ದೇವೆ. ಅದಕ್ಕೆ ಸಿಂದಗಿ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಒಂಭತ್ತು ಜನ ಅಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ನಾನು, ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲರೊಂದಿಗೆ ಎರಡು ದಿನ ಚರ್ಚೆ ಮಾಡಿದ್ದೆವು. ಎಲ್ಲರ ಒಮ್ಮತದಿಂದ ನಾಜಿಯಾ ಅಂಗಡಿಯವರನ್ನಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೇವೆ. ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ, ಸಿಎಂ, ಪಿಎಂ ಆಗಿ ಸೇವೆ ಮಾಡಿದ್ದೇನೆ. ಇಂತಹ ಇಳಿ ವಯಸ್ಸಿನ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.
ಜಯ ಗಳಿಸೋ ದೃಢವಾದ ಸಂಕಲ್ಪದಿಂದ ಚುನಾವಣೆ ಎದುರಿಸುತ್ತಿದ್ದೇವೆ. ಕೇವಲ ಸಭೆ ಸಮಾರಂಭ ಮಾಡದೇ ಜನರ ಮನೆ ಬಾಗಿಲಿಗೆ ತೆರಳಿ, ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತೇವೆ. ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ
ಪ್ರಚಾರಕ್ಕೆ ಕುಮಾರಸ್ವಾಮಿ ಆಗಮಿಸುತ್ತಾರೆ. ಮತದಾರರ ತೀರ್ಪು ಅಂತಿಮವಾಗಿದ್ದು, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ನಾನು ಯಾರ ಬಗ್ಗೆಯೂ ಆಪಾದನೆ ಮಾಡಲ್ಲ. ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲ್ಲ. ಉಪಚುನಾವಣೆ ಫಲಿತಾಂಶ ಒಂದು ಪಕ್ಷದ ಅಳಿವು ಉಳಿವಿಗೆ ಕಾರಣವಾಗಲ್ಲ. ಜೆಡಿಎಸ್ ಪಕ್ಷವನ್ನು ಮುಗಿಸೋಕೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ ಪಟ್ಟವು, ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯನ್ನು ದೇವೇಗೌಡರು ಪದಾಧಿಕಾರಿಗಳ ಜೊತೆಗೆ ನಡೆಸಿದ್ದು, ಸಭೆ ಬಳಿಕ ಇಂಡಿಗೆ ತೆರಳುತ್ತಿದ್ದಾರೆ.