ಬೆಂಗಳೂರು: ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಒಟ್ಟಾದರೆ ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.
ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ದೇಶದಲ್ಲಿ ಪಂಚರಾಜ್ಯ ಚುನಾವಣೆ ಆದ ಮೇಲೆ ಫಲಿತಾಂಶ ಎಲ್ಲರಿಗೂ ಗೊತ್ತಾಗಿದೆ. ನಾನು ಬಿಡಿಸಿ ಹೇಳಬೇಕಾಗಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ. ಇದನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ದೇಶದಲ್ಲಿ ಜನರು ಇವತ್ತು ನೀಡಿರುವ ತೀರ್ಪು ಇದಾಗಿದೆ. ಒಂದು ಕಡೆ ಬಿಟ್ಟು ಉಳಿದೆಲ್ಲಾ ಕಡೆ ಬಿಜೆಪಿ ಸರ್ಕಾರ ರಚಿಸಿದೆ. ನಮ್ಮ ಪಕ್ಷ ಹೇಗೆ ಉಳಿಸಬೇಕು ಎನ್ನುವುದು ನಮ್ಮ ಮುಂದೆ ಇದೆ. ಈಗ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ. ಅಲ್ಲಲ್ಲಿ ಪ್ರಾದೇಶಿಕ ಪಕ್ಷದ ರೀತಿ ಇದೆ. ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಒಟ್ಟಾದರೆ ದೇಶದ ದೃಷ್ಟಿಯಿಂದ ಒಳ್ಳೆಯದು. ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಅಂತ ಕರೆ ಕೊಟ್ಟರು. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್
Advertisement
Advertisement
ಕಾಂಗ್ರೆಸ್ ಅವರು ನೀರು ತರಬೇಕು ಅಂತ ಒಳ್ಳೆ ಹೋರಾಟ ಮಾಡಿದರು. ಅದಕ್ಕೆ ಒಳ್ಳೆ ಪ್ರಚಾರ ಸಿಕ್ಕಿತು. ಹಿಂದೆ ಏನೇನಾಯ್ತು ನೋಡಿದ್ದೇನೆ. ಮನಮೋಹನ್ ಸಿಂಗ್, ಮೋದಿ, ವಾಜಪೇಯಿ ಮಾಡಿದ್ರಾ? ನನಗೆ ಅಂದು ವಿರೋಧ ಬಂದರೂ ಎಲ್ಲವನ್ನು ಸರಿ ಮಾಡಿ 18 ಸಾವಿರ ಕೋಟಿ ನೀರಾವರಿಗೆ ಕೊಟ್ಟೆ. ರಾಮನಗರದಿಂದ ಪಾದಯಾತ್ರೆ ಮಾಡಬೇಕು ಅಂತ ಹೊರಟರು. ರಾಮನಗರದಿಂದ ಪಾದಯಾತ್ರೆ ಮಾಡಿದರೆ ನೀರು ಬರುತ್ತಾ? ನಾನು ಸಿಎಂ ಆಗಿದ್ದಾಗ ನಾನು ರಾಮನಗರ ಭಾಗಕ್ಕೆ ಕಾವೇರಿ ನೀರು ಕೊಟ್ಟೆ. ಕಾಂಗ್ರೆಸ್‍ನಿಂದ ಕೊಡಲು ಆಗದ್ದನ್ನು ನಾನು ಮಾಡಿದೆ. ಯಾವ ಆಧಾರದಲ್ಲಿ ಇವರು ಮಾತಾನಾಡುತ್ತಾರೆ? ಕಾವೇರಿ ಭಾಗದ ಜನರಿಗೆ ಯಾಕೆ ಹೀಗೆ ಕಾಂಗ್ರೆಸ್ ಹೇಳುತ್ತದೆ? ಸಿದ್ದರಾಮಯ್ಯ ಬಿಜೆಪಿ ಏನು ಮಾಡಿದೆ ಅಂತ ಕೇಳುತ್ತಾರೆ. ಅವತ್ತು ಸಿದ್ದರಾಮಯ್ಯ ನಮ್ಮ ಮನೆಗೆ ಬಂದು ಉಳಿಸಬೇಕು ಅಂತ ಹೇಳಲಿಲ್ವಾ? ಕಾಂಗ್ರೆಸ್ ಯಾವುದೇ ಹೋರಾಟ ಮಾಡಿದರೆ ನನ್ನದೇನು ಅಭ್ಯಂತರ ಇಲ್ಲ. ನನ್ನ ಪಕ್ಷದ ನಾಯಕರು, ಕಾರ್ಯಕರ್ತರಿಗೆ ನಾನು ನಮ್ಮ ಬಗ್ಗೆ ಹೇಳುತ್ತೇವೆ ಎಂದರು.
Advertisement
Advertisement
ನಾನು ಪ್ರಧಾನಿ ಆದಾಗ ನಮ್ಮದೇ ಸರ್ಕಾರವಿತ್ತು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ, ಜೆ.ಹೆಚ್.ಪಟೇಲ್ ಸಿಎಂ ಆಗಿದ್ದರು. 16 ಸ್ಥಾನ ಅವತ್ತು ಗೆದ್ದಿದ್ದೆವು. ಆಮೇಲೆ 1 ಸ್ಥಾನಕ್ಕೆ ಬಂದೆವು. ಯಾಕೆ? ರಾಜ್ಯದಲ್ಲಿ ತುಳಿತಕ್ಕೆ ಒಳಗಾದವರನ್ನು ಗುರುತಿಸಿದೆವು. ಮುಸ್ಲಿಂ ಮೀಸಲಾತಿ ಕೊಟ್ಟೆವು, ನಾಯಕ ಸಮುದಾಯಕ್ಕೆ ಮೀಸಲಾತಿ ಕೊಟ್ಟೆವು, ಮಹಿಳೆಯರಿಗೆ ಮೀಸಲಾತಿ ಕೊಟ್ಟೆವು, ಆದರೂ ನಾವು 1 ಸೀಟು ಪಡೆಯುವ ಸ್ಥಿತಿಗೆ ಬಂದೆವು. ಒಬ್ಬ ಕನ್ನಡಿಗ ಪ್ರಧಾನಿ ಆಗಿದ್ದೇ ಕೆಲವರಿಗೆ ಸಹಿಸಲು ಆಗಲಿಲ್ಲ. ಇದಕ್ಕಾಗಿ ಹೀಗೆಲ್ಲ ಆಯಿತು. ನಾನೇನು ಮತ್ತೆ ಪ್ರಧಾನಿ ಆಗಲು ಹೋಗುವುದಿಲ್ಲ. ಈ ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪಂಚರಾಜ್ಯ ಗೆಲುವು ಪ್ರಧಾನಿ ಮೋದಿ ಅವರ ಗೆಲುವು. ಪಂಚರಾಜ್ಯ ಮುಗಿದ ಕೂಡಲೇ ಗುಜರಾತ್‍ಗೆ ಹೋಗಿದ್ದಾರೆ. ತಮ್ಮ ಪಕ್ಷವನ್ನು ಇಡೀ ಹಿಂದೂ ಸ್ಥಾನದಲ್ಲಿ ತರಬೇಕು ಎನ್ನುವ ಹಂಬಲ ಹೊಂದಿದ್ದಾರೆ. ಅದು ಅವರ ಬದ್ಧತೆ. ಅದೇ ರೀತಿ ನಮ್ಮಲ್ಲಿ ಮೋದಿ ಅವರ ಬದ್ಧತೆ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ
ಸಿಎಂ ಇಬ್ರಾಹಿಂ ಪಕ್ಷ ಸೇರ್ಪಡೆ ವಿಚಾರ: 4-5 ತಿಂಗಳಿಂದ ಚರ್ಚೆ ನಡೆಯುತ್ತಿದೆ. ಇಬ್ರಾಹಿಂ ನನ್ನ ಬಳಿ ಇನ್ನೂ ಮಾತನಾಡಿಲ್ಲ. ಹಿಂದೆ ಕಾಂಗ್ರೆಸ್‍ನಿಂದ ನಾನೇ ಇಬ್ರಾಹಿಂರನ್ನ ಕರೆದುಕೊಂಡೆ ಬಂದೆ. ತುರ್ತು ಪರಿಸ್ಥಿತಿಯಲ್ಲಿ ಅವರನ್ನು, ನನ್ನನ್ನು ಅರೆಸ್ಟ್ ಮಾಡಿದ್ದರು. ಮತ್ತೆ ಪಕ್ಷಕ್ಕೆ ಬರುವ ವಿಚಾರ ಕೂತು ಮಾತಾಡಬೇಕಾಗುತ್ತದೆ. 3-4 ತಿಂಗಳ ಹಿಂದೆ ನನ್ನನ್ನ ಭೇಟಿಯಾಗಿದ್ದರು. ನಮ್ಮಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ಮೇಲೆ ಕುಳಿತು ಮಾತಾನಾಡೋಣ ಅಂತ ಹೇಳಿದ್ದೆ. ಪಕ್ಷ ಸೇರ್ಪಡೆ ಬಗ್ಗೆ ಕುಳಿತು ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದರು.
ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆ ಚುನಾವಣೆ ಒಪ್ಪಂದ ನಾವು ಮಾಡಿಕೊಳ್ಳಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತೇವೆ. ನಾವ್ಯಾಕೆ ಅವರ ಜೊತೆ ಒಪ್ಪಂದ ಮಾಡಿಕೊಳ್ಳೋಣ. ಒಂದು ಕಾಲದಲ್ಲಿ ಈ ದೇಶ ಆಳಿದ ಪಕ್ಷ ಇದು. ಅಸೂಯೆ ಇನ್ನಿತರ ವಿಚಾರಕ್ಕೆ ನಮಗೆ ಸಮಸ್ಯೆ ಆಯಿತು. ಕನ್ನಡಿಗ ಪ್ರಧಾನಿ ಆಗುವುದನ್ನು ಕೆಲವರು ಸಹಿಸಲಿಲ್ಲ. ಕುಮಾರಸ್ವಾಮಿ ಸದನದಲ್ಲಿ ಯಾವುದೇ ಅನಾವಶ್ಯಕ ವಿಷಯ ಮಾತನಾಡಿಲ್ಲ. ಅಂಕಿಅಂಶದ ಜೊತೆ ಸತ್ಯದ ವಿಚಾರ ಮಾತನಾಡಿದ್ದಾರೆ. ಕುಮಾರಸ್ವಾಮಿ ಅನವಶ್ಯಕವಾಗಿ ಸಮಯ ಹಾಳು ಮಾಡುವುದಿಲ್ಲ. ಅದಕ್ಕೆ 5 ಗಂಟೆ ಆಯಿತು. ನಾವು ಬಿಜೆಪಿ ಜೊತೆ ಹೋಗಬೇಕಾದರೆ ಅದು ನಗೆಪಾಟಲು ಅಲ್ಲವೇ? 28 ಸೀಟು ನಮ್ಮ ಬಳಿ ಇದೆ. ಅದನ್ನ ಬಿಟ್ಟುಕೊಡಿ ಅಂತ ಅವರ ಬಳಿ ನಾನು ಕೇಳಲಾ? ನಾನು ಸಿಎಂ ಆಗಿದ್ದಾಗ 76 ಸೀಟು ನನ್ನ ಬಳಿ ಇತ್ತು. ಆ ಸೀಟು ನನ್ನಿಂದ ದೂರ ಹೋಗಿಲ್ಲ. ಜನರ ಮುಂದೆ ಹೋಗುತ್ತೇನೆ. ಯಾರೋ ಒಬ್ಬರು, ಇಬ್ಬರು ಪಕ್ಷ ಬಿಟ್ಟು ಹೋಗುತ್ತಾರೆ ಅಂದರೆ ಕಟ್ಟಿ ಹಾಕಲು ಸಾಧ್ಯವಿಲ್ಲ. ಮಾರ್ಚ್ 20 ರಂದು ಎಲ್ಲಾ ವಿಷಯ ಕುಮಾರಸ್ವಾಮಿ ನೇತೃತ್ವದಲ್ಲಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ
ಪಂಚರಾಜ್ಯ ಗೆಲುವಿನಿಂದ ಚುನಾವಣೆ ಅವಧಿ ಪೂರ್ವವೇ ರಾಜ್ಯದಲ್ಲಿ ಚುನಾವಣೆಗೆ ಬಿಜೆಪಿ ಹೋಗುತ್ತಿದೆ ಎಂಬ ಬಗ್ಗೆ ಮಾತನಾಡಿದ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ಮೇ ನಲ್ಲಿ ನಮ್ಮ ರಾಜ್ಯ ಸೇರಿ 3 ರಾಜ್ಯದ ಚುನಾವಣೆ ಇದೆ. ಡಿಸೆಂಬರ್‍ನಲ್ಲಿ ಗುಜರಾತ್ ಚುನಾವಣೆ ಇದೆ. ಪಂಜಾಬ್‍ನಲ್ಲಿ ಎಎಪಿ ಯಾಕೆ ಗೆಲ್ಲಿತು ಗೊತ್ತಾ? ಕಾಂಗ್ರೆಸ್ ತನ್ನ ಸಮಸ್ಯೆ ಸರಿ ಮಾಡಿಕೊಂಡು ಒಟ್ಟಾಗಿ ಹೋಗಿದ್ದರೆ ಇಷ್ಟು ಕೆಟ್ಟ ಸ್ಥಿತಿ ಬರುತ್ತಿರಲಿಲ್ಲ. ಇದರ ಉಪಯೋಗ ಎಎಪಿಗೆ ಸಿಕ್ಕಿತು. ಸಾಮಾನ್ಯ ವ್ಯಕ್ತಿಯನ್ನು ಎಎಪಿ ಸಿಎಂ ಮಾಡಿದ್ದಾರೆ. ಇದು ಉತ್ತಮವಾದ ನಿರ್ಧಾರ. ಅವಧಿ ಪೂರ್ವ ಚುನಾವಣೆ ಯಾಕೆ ಆಗಬೇಕು. ಅವಧಿ ಪೂರ್ವ ಚುನಾವಣೆ ಹೋಗುವುದು ಅಷ್ಟು ಸುಲಭ ಅಲ್ಲ. ಬೇರೆ ರಾಜ್ಯ ರಾಜಕಾರಣಕ್ಕೂ ನಮ್ಮ ರಾಜ್ಯದ ರಾಜಕಾರಣಕ್ಕೂ ವ್ಯತ್ಯಾಸ ಇದೆ. ಇದನ್ನ ಯಡಿಯೂರಪ್ಪನವರೇ ಹೇಳಿದ್ದರು. ಮೋದಿ, ಅಮಿತ್ ಶಾ ಎಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅವಧಿ ಪೂರ್ವ ಚುನಾವಣೆ ಅಷ್ಟು ಸುಲಭ ಅಲ್ಲ ಎಂದು ತಿಳಿಸಿದರು.