ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಸ್ಪರ್ಧೆ ಮಾಡುವ ವಿಚಾರ ಕೇಳಿದೆ. ನನಗೂ ಅವರು ವಿರುದ್ಧ ಸ್ಪರ್ಧಿಸಬೇಕು ಎಂಬ ಇಚ್ಛೆ ಇದೆ. ಆದ್ದರಿಂದ ದೇವೇಗೌಡರೇ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡ್ರು ಸ್ಪರ್ಧಿಸ್ತಾರೆ ಎನ್ನುವ ಚರ್ಚೆ ಎದ್ದಿದೆ. ಸದ್ಯ ದೇವೇಗೌಡರೇ ಚುನಾವಣೆಗೆ ನಿಲ್ಲಬೇಕು. ಅವರ ವಿರುದ್ಧ ಸ್ಪರ್ಧೆಸಬೇಕು ಎಂಬುವುದು ನನ್ನ ಇಚ್ಛೆ ಎಂದು ತಿಳಿಸಿದರು. ಈ ಮೂಲಕ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೌಡರ ಗುದ್ದಾಟ ನಡೆಯುತ್ತಾ ಎಂಬ ಕುತೂಹಲಕ್ಕೆ ಕಾರಣರಾದರು.
Advertisement
Advertisement
ಇತ್ತ ಈ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡ ಅವರು, ಚುನಾವಣೆಯ ಸ್ಥಾನಗಳ ಹಂಚಿಕೆ, ಸ್ಪರ್ಧೆ ಬಗ್ಗೆ ಅಂತಿಮವಾಗಿಲ್ಲ. ಅದೆಲ್ಲಾ ಮುಂದೆ ನೋಡೋಣ ಎಂದು ತಿಳಿಸಿದರು. ಜೊತೆಗೆ, ಬಿಬಿಎಂಪಿ ಮಹಾನಗರ ಪಾಲಿಕೆಯಂತಹ ಚುನಾವಣೆಗಳಲ್ಲಿ ಹೊಂದಾಣಿಕೆ ಕಷ್ಟ. ಆ ಕಾರಣಕ್ಕಾಗಿ ಏಕಾಂಗಿ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
Advertisement
ಶ್ರೀಗಳ ಭಾರತರತ್ನ ನಮ್ಮ ಜವಾಬ್ದಾರಿ: ಭಾರತ ರತ್ನಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರೆ, ಮುಂದಿನ ದಿನಗಳಲ್ಲಿ ಈ ಗೌರವ ಕೊಡಿಸುವಂತಹ ಜವಾಬ್ದಾರಿ ನಮ್ಮದು ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv