ಸಾಂದರ್ಭಿಕ ಚಿತ್ರ
ಬೆಂಗಳೂರು: ಹವಾಲ ವ್ಯವಹಾರದಲ್ಲಿ ಜಲಸಂಪ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಹೇಗೆ ನಡೆದುಕೊಳ್ಳಬೇಕು ಎಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಎಚ್‍ಡಿ ರೇವಣ್ಣ ಅವರಿಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಎಚ್ಚರಿಕೆ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ.
ಸದ್ಯ ಐಟಿ ದಾಳಿ ವಿಚಾರ ಅತ್ಯಂತ ಸೂಕ್ಷ್ಮ ಹಾಗೂ ಕಾನೂನಾತ್ಮಕ ವಿಚಾರವಾಗಿದ್ದು, ಈ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸದ್ಯದ ಸನ್ನಿವೇಶದಲ್ಲಿ ಡಿಕೆಶಿ ಅವರಿಗೆ ನೈತಿಕ ಬೆಂಬಲ ನೀಡಿ ಎಂದು ಎಚ್‍ಡಿ ದೇವೇಗೌಡ ಅವರು ಹೇಳಿದ್ದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನು ಓದಿ: ಐಟಿ ಅಧಿಕಾರಿಗಳ ನಿಜ ಬಣ್ಣ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ: ಡಿ.ಕೆ.ಸುರೇಶ್
ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಲ್ಲಿ ಹೆಚ್ಚಿನ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಜನತೆಗೆ ತಮ್ಮ ಸಮುದಾಯದ ವಿರುದ್ಧ ಮೆಚ್ಚುಗೆ ಉಂಟಾಗುವಂತೆ ಮಾಡಲು ಡಿಕೆಶಿ ಅವರ ವಿಚಾರವಾಗಿ ಹೆಚ್ಚು ಮಾತನಾಡದಿರಲು ಸಲಹೆ ನೀಡಿದ್ದಾರೆ. ಅಲ್ಲದೇ ಸಂಪೂರ್ಣವಾಗಿ ಸುಮ್ಮನಿರಲು ಸೂಚಿಸಿರುವ ಅವರು, ಕಾನೂನು ಹೋರಾಟ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರದ ಬೆಂಬಲ ಡಿಕೆಶಿ ಅವರಿಗೆ ಇರುತ್ತದೆ ಎಂದು ಹೇಳಲು ಸಲಹೆ ನೀಡಿದ್ದಾರೆ. ಇದನ್ನು ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?
ದೇವೇಗೌಡ ಸಲಹೆ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್ ನಮ್ಮ ಸಂಪುಟದಲ್ಲಿ ಸಚಿವರು. ಅವರಿಗೆ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಬಿಜೆಪಿ ಹೇಳಿದರೆ ರಾಜೀನಾಮೆ ನೀಡಬೇಕಾ? ಏಕೆ ರಾಜೀನಾಮೆ ನೀಡಬೇಕು? ಇಲ್ಲಿ ರಾಜೀನಾಮೆಯ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರ ಮೇಲೆ ಎಷ್ಟು ಆರೋಪಗಳಿವೆ, ಅವರ ವಿರುದ್ಧ ಆರೋಪ ಕೇಳಿಬಂದ ವೇಳೆ ರಾಜೀನಾಮೆ ನೀಡಿದ್ದರಾ ಎಂದು ಸಚಿವ ಡಿಕೆಶಿ ಪರವಾಗಿ ಎಚ್‍ಡಿಕೆ ಬ್ಯಾಟ್ ಬೀಸಿದ್ದಾರೆ. ಇದನ್ನು ಓದಿ: ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ ಪರ ಸಿಎಂ ಎಚ್‍ಡಿಕೆ ಬ್ಯಾಟಿಂಗ್