ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಮಧ್ಯಾಹ್ನದ ವೇಳೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ, ತಾವು ಸ್ಥಳೀಯ ಸಂಸ್ಥೆ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದರು.
Advertisement
ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೈತ್ರಿ ಸರ್ಕಾರದಲ್ಲೂ ಮುಂದುವರಿಸಲಾಗಿದೆ. ಮೈತ್ರಿ ಸರ್ಕಾರ ಉಳಿಯವುದು ಬಿಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟು ಕೊಟ್ಟಿದ್ದೇನೆ. ಸದ್ಯ ಪಕ್ಷದ ಸಂಘಟನೆಯಲ್ಲಿ ತಾವು ತೊಡಗಿದ್ದೇವೆ ಎಂದು ಹೇಳಿದರು.
Advertisement
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲ ಸ್ಥಾನಗಳಿಗೆ ಮಧ್ಯಂತರ ಚುನಾವಣೆಗಳು ಮುಂದಿನ ಅವಧಿಯಲ್ಲಿ ಬರುತ್ತಿದ್ದು, ಈ ಚುನಾವಣೆಯಲ್ಲಿ ನಾವು ಕಳೆದುಕೊಂಡ ಸ್ಥಾನಗಳ ಬಗ್ಗೆ ಮಾತನಾಡಿದ್ದೇನೆ. ಮತ್ತೆ ಜನರ ವಿಶ್ವಾಸ ಗಳಿಸಿ ತಳ ಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಈ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ರಾಜ್ಯದಲ್ಲಿ ತಮಗೆ ನೀಡಿದ್ದ ಸಚಿವ ಸ್ಥಾನಗಳನ್ನು ಕೂಡ ಪಕ್ಷೇತರರಿಗೆ ಬಿಟ್ಟು ಕೊಟ್ಟಿದ್ದೇವೆ. ಸರ್ಕಾರ ಉಳಿಯುವುದು ಬಿಡುವುದು ಕಾಂಗ್ರೆಸ್ ನಾಯಕರಿಗೆ ಬಿಟ್ಟಿದ್ದೇನೆ ಎಂಬುವುದನ್ನು ಎಚ್ಡಿಡಿ ಮತ್ತೆ ಹೇಳಿದರು. ಅಲ್ಲದೇ ನಾನು ಲೋಕಸಭೆಯಿಂದ ಸ್ಥಳೀಯ ಚುನಾವಣೆವರೆಗೂ ಎದುರಿಸುವ ಅನುಭವವನ್ನು 29 ವರ್ಷಗಳ ಕಾಲ ಪಡೆದಿದ್ದೇನೆ. ನನಗಾಗಿ ಅಲ್ಲ, ರಾಜ್ಯ-ರಾಷ್ಟ್ರದ ಅಭಿವೃದ್ಧಿಗಾಗಿ ಮುಂದಾಗಿದ್ದು, ನನ್ನ ಇಂದಿನ ಚುನಾವಣೆ ಸೋಲು ಗೆಲುವಿಗೆ ಕಾರಣವಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]