ತಮ್ಮ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಬಾಲಾಜಿ ಮತ್ತು ಮಾವ ಎಂ.ಕೆ ಪೋತರಾಜು ವಿರುದ್ಧ ದೂರು ದಾಖಲಿಸಿದ್ದರು. ಅವರ ಮೇಲೆ ಕ್ರಮ ತಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು
Advertisement
ನಟಿ ಚೈತ್ರಾ ಹಳ್ಳಿಕೇರಿ ತಮ್ಮ ಮೇಲೆ ದಾಖಲಿಸಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸುವಂತೆ ಬಾಲಾಜಿ ಮತ್ತು ಅವರ ತಂದೆ ಪೋತರಾಜು ಅವರು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಚಂದನಗೌಡರ್ ಅವರು ತಡೆಯಾಜ್ಞೆ ನೀಡಿದ್ದಾರೆ. ಈ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಶ್ಯಾಮಸುಂದರ್ ವಾದಿಸಿದ್ದರು. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ
Advertisement
Advertisement
ಚೈತ್ರಾ ಹಳ್ಳಿಕೇರಿ ಈ ಹಿಂದೆಯೇ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ತಮಗೆ ನಿರಂತರ ಹಿಂಸೆ ಕೊಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು. ಈ ಬಾರಿ ತಮ್ಮ ಅರಿವಿಗೆ ಬಾರದಂತೆ ತಮ್ಮದೇ ಹೆಸರಿನಲ್ಲಿ ಪತಿ ಮತ್ತು ಮಾವ ಬ್ಯಾಂಕ್ ಖಾತೆ ತೆಗೆದು ವ್ಯವಹರಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.