ರಾಮನಗರ: ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಒಂದು ಕಡೆ ನಿಲ್ಲುವ ಮನುಷ್ಯ ಅಲ್ಲ, ನಾವೂ ಕೂಡಾ ಅವರ ಗರಡಿಯಲ್ಲಿ ಪಳಗಿದವರು. ಅವರು ಎಲ್ಲಿಯೂ ಒಂದು ಕಡೆ ನಿಲ್ಲಲ್ಲ. ಅವರ ಬಿಟ್ಟು ಇವರು, ಇವರ ಬಿಟ್ಟು ಅವರು ಎಂದು ಸ್ನೇಹಿತರನ್ನು ಹುಡುಕಿಕೊಂಡು ಹೋಗ್ತಾರೆ. ಅಂತವರ ಜೊತೆಗಿನ ಮೈತ್ರಿ ಹೆಚ್ಚು ದಿನ ಇರಲ್ಲ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಭವಿಷ್ಯ ನುಡಿದಿದ್ದಾರೆ.
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೆಚ್‍ಡಿಕೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು (BJP) ಬೀದಿಗೆ ನಿಲ್ಲಿಸಿದ್ದಾರೆ. ನಮಗೆ ಇರುವ ಸಂಖ್ಯೆ ಆಧಾರದ ಮೇಲೆ ನಾವು ಮೂರು ಸ್ಥಾನ ಗೆಲ್ಲಿಸಿಕೊಂಡಿದ್ದೇವೆ. ಬಿಜೆಪಿ ಒಂದು ಸ್ಥಾನ ಗೆಲ್ಲಿಸಲು ಸಂಖ್ಯಾಬಲ ಇತ್ತು. ಕುಮಾರಸ್ವಾಮಿ ಅವರಿಗೆ ಸಂಖ್ಯೆ ಇತ್ತಾ? ಕೇವಲ 19 ಜನರನ್ನು ಇಟ್ಟುಕೊಂಡು ಕುಪೇಂದ್ರ ರೆಡ್ಡಿ ಗೆಲ್ತಾರೆ ಎಂದು ಓಡಾಡಿದ್ದರು. ಇದರ ಅರ್ಥ ಏನು? ಕ್ರಾಸ್ ವೋಟಿಂಗ್ ಬಿಜೆಪಿಯವರಿಂದ ಆಯ್ತು ಎಂಬ ಸುದ್ದಿಯಾಯ್ತು. ಇದು ಕುಮಾರಸ್ವಾಮಿಗೆ ಮುಖಭಂಗ ಆದ ಹಾಗೆ ಅಲ್ವಾ? ಮುಂದೆ ಕುಮಾರಸ್ವಾಮಿಯಿಂದ ಬಿಜೆಪಿಗೆ ಏನೇನ್ ಕಾದಿದೆಯೋ ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ – ಜಾತಿಗಣತಿ ಸ್ವೀಕಾರಕ್ಕೆ ಹೆಬ್ಬಾಳ್ಕರ್ ಆಕ್ಷೇಪ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಬಗ್ಗೆ ಗೊಂದಲದ ವಿಚಾರ ಕುರಿತು ಮಾತನಾಡಿ, ಡಾ.ಮಂಜುನಾಥ್ (Dr.Manjunath), ದೇವೇಗೌಡರ (H.D Devegowda) ಅಳಿಯ, ಕುಮಾರಸ್ವಾಮಿ ಅವರ ಬಾವ. ಅವರನ್ನ ಜೆಡಿಎಸ್ (JDS) ಪಕ್ಷದಲ್ಲಿ ನಿಲ್ಲಿಸೋದಕ್ಕೆ ಹೆಚ್ಡಿಕೆಗೆ ಧೈರ್ಯ ಇಲ್ಲ, ಅಂದ್ರೆ ಏನ್ ಅರ್ಥ? ಈ ಕ್ಷೇತ್ರದಲ್ಲಿ ದೇವೇಗೌಡರು ಗೆದ್ದಿದ್ದಾರೆ, ಕುಮಾರಸ್ವಾಮಿ ಸಹ ಗೆದ್ದಿದ್ದಾರೆ. ಗೆದ್ದಿರುವ ಕ್ಷೇತ್ರದಲ್ಲಿ ತನ್ನ ಬಾವನನ್ನ ಗೆಲ್ಲಿಸಿಕೊಳ್ಳಲು ಆಗಲ್ಲ ಎಂದರೆ ಪಕ್ಷ ದುರ್ಬಲವಾಗಿದೆ ಎಂದರ್ಥ. ಬೇರೆ ಪಕ್ಷದಿಂದ ಅಭ್ಯರ್ಥಿಯನ್ನು ಮಾಡ್ತೀವಿ ಎಂದು ಹೊರಟಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದಿದ್ದಾರೆ.
ಜೆಡಿಎಸ್ ಚಿಹ್ನೆಯಿಂದ ಚುನಾವಣೆಗೆ ನಿಲ್ಲಿಸಲಿ ನೋಡೋಣ. ಮೈತ್ರಿ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಇಲ್ಲ. ನಮ್ಮಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಹಾಗಾಗಿ ನಮ್ಮ ಗೆಲುವು ನಿಶ್ಚಿತ ಎಂದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ 2,000 ಅಲ್ಲ, 4 ಸಾವಿರ ರೂ. ಕೊಡಬಹುದು: ಡಿ.ಕೆ ಸುರೇಶ್ ಹೀಗಂದಿದ್ದೇಕೆ?