ಹವಾಯಿ: ಜ್ವಾಲಾಮುಖಿಯಿಂದಾಗಿ ಕರಗಿದ ಬಂಡೆಯ ಜ್ವಾಲಾರಸವು ನಗರದ ಬೀದಿಗಳಿಗೆ ನುಗ್ಗಿದ ಪರಿಣಾಮ ಹಲವಾರು ಮನೆಗಳು ನಾಶಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಲೀಲಾನಿ ಎಸ್ಟೇಟ್ ವಸತಿ ಅಭಿವೃದ್ಧಿಗೆ ಸೇರಿದ ಸುಮಾರು 82 ಮನೆಗಳು ನಾಶವಾಗಿದೆ ಎಂದು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ತಿಳಿಸಿದೆ. ಸಾರ್ವಜನಿಕರಿಗೆ ಜ್ವಾಲಾರಸದಿಂದ ತಪ್ಪಿಸಿಕೊಳ್ಳುವಂತೆ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದಾರೆ.
Advertisement
Advertisement
ಮೇ 3 ರಿಂದ 2,200 ಎಕರೆ ವ್ಯಾಪ್ತಿಯಲ್ಲಿ ಲಾವಾರಸ ಹರಡಿದೆ. ಕಳೆದ 100 ವರ್ಷದಲ್ಲೇ ಹವಾಯಿ ದ್ವೀಪ ರಾಷ್ಟ್ರ ಕಂಡ ವಿನಾಶಕಾರಕ ಕಿಲೂಯೆ ಜ್ವಾಲಾಮುಖಿ ಇದಾಗಿದೆ ಎನ್ನಲಾಗಿದೆ.
Advertisement
ಕೌಪುಲಿ ರಸ್ತೆಯಲ್ಲಿ ನಿಂತು ಪಕ್ಕದ ರಸ್ತೆಗೆ ಜ್ವಾಲಾರಸ ಹೋಗುತ್ತಿರುವ ವಿಡಿಯೊವನ್ನು ಇಕಾಕ್ ಮಾರ್ಜೊ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.
Advertisement
ಜ್ವಾಲಾರಸ ಸುಮಾರು 100 ಅಡಿಗಳ ಎತ್ತರಕ್ಕೆ ಚಿಮ್ಮಿ ಕರಗಿದ ಬಂಡೆಗಳ ಕೊಳಗಳು ನಿರ್ಮಾಣವಾಗುತ್ತಿವೆ. ಕಹುಕೈ ಮತ್ತು ಮೊಹಾಲಾ ರಸ್ತೆಗಳ ಕಡೆ ಲಾವಾ ರಸ ಹರಿದು ಬರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದವರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಅಲ್ಲಿಯ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ.
ಕೆಲವು ರಸ್ತೆಗಳ ಸುತ್ತ ಲಾವಾರಸ ಹರಿದು ಅಲ್ಲಿರುವವರನ್ನು ತಲುಪಲಿಕ್ಕೆ ಆಗದ ಸ್ಥಿತಿ ಕೂಡ ನಿರ್ಮಾಣವಾಗಿದೆ ಎನ್ನಲಾಗಿದೆ. ಈಗ ಹೊರಬರುತ್ತಿರುವ ಲಾವಾರಸ ಜ್ವಾಲಾಮುಖಿಯ ಒಂದು ಸಣ್ಣ ಭಾಗ ಎಂದು ಹೇಳಲಾಗುತ್ತಿದೆ.
https://www.facebook.com/ikaika.marzo/videos/1814217715297423/
Incredible video by @ Ikaika Marzo – who has been updating us on all that’s happening in Leilani Estates pic.twitter.com/GUrhW2qftM
— Eliza Larson (@Eliza_Larson1) May 6, 2018
#BREAKING #LeilaniEstatesEruption: At least one other eruption & fissure has opened within the #LeilaniEstates evacuation zone & this flow is moving with more intensity & speed than prior breakouts; all access blocked https://t.co/CZxHp8BRlZ (Video: Ikaika Marzo) @HawaiiNewsNow pic.twitter.com/ldfPS7P6xv
— Mileka Lincoln (@MilekaLincoln) May 5, 2018