ದಿಸ್ಪುರ್: ವಿಶ್ವದಲ್ಲಿ ಎರಡು ನಾಗರಿಕ ಸಂಹಿತೆಯನ್ನು (UCC) ಹೊಂದಿರುವ ಮುಸ್ಲಿಂ ರಾಷ್ಟ್ರ (Muslims Nations) ಯಾವುದೂ ಇಲ್ಲ. ಮುಸ್ಲಿಂ ಸಮುದಾಯದಲ್ಲಿರುವ (Muslims Community) ಪ್ರಗತಿಪರ ಹಾಗೂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಪಷ್ಟನೆ ನೀಡಿದ್ದಾರೆ.
Advertisement
ಖಾಸಗಿ ವಾಹಿನಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ, `ಮುಸ್ಲಿಂ ಪುರುಷರು 3-4 ಮದುವೆಯಾಗುವ (Marriage) ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ (Muslims Women) ನ್ಯಾಯ ಒದಗಿಸಬೇಕು’ ಎನ್ನುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ (UCC) ಕುರಿತ ಪ್ರಶ್ನೆಗೆ ಉತ್ತರಿಸಿ, ನಾಲ್ವರು ಪತ್ನಿಯರನ್ನ ಹೊಂದುವುದು ಅಸ್ವಾಭಾವಿಕ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಪುರುಷರು 3-4 ಮದುವೆಯಾಗುವ ವ್ಯವಸ್ಥೆ ಬದಲಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು: ಹಿಮಂತ ಶರ್ಮಾ
Advertisement
Advertisement
ಎರಡು ನಾಗರಿಕ ಸಂಹಿತೆ ಹೊಂದಿದ ಮುಸ್ಲಿಂ ರಾಷ್ಟ್ರ ಯಾವುದಾದರೂ ಇದೆಯೇ? ಒಬ್ಬ ಪುರುಷ ಓರ್ವ ಮಹಿಳೆಯನ್ನು ಮದುವೆಯಾದರೆ ಅದು ಸಹಜ. ಆದ್ರೆ ಒಬ್ಬ ಪುರುಷ ನಾಲ್ವರು ಮಹಿಳೆಯರನ್ನ ಮದುವೆಯಾದ್ರೆ ಅದು ಅಸಹಜ. ಮುಸ್ಲಿಂ ಸಮುದಾಯದಲ್ಲಿರುವ ಪ್ರಗತಿಪರ ಹಾಗೂ ವಿದ್ಯಾವಂತರ‍್ಯಾರೂ ನಾಲ್ಕು ಬಾರಿ ಮದುವೆಯಾಗುವುದಿಲ್ಲ. ಹಾಗೆಯೇ ಏಕರೂಪ ನಾಗರಿಕ ಸಂಹಿತೆ ಯಾವುದೇ ಒಂದು ಧರ್ಮಕ್ಕೆ ವಿರುದ್ಧವಾಗಿಲ್ಲ. ಅದು ರಾಷ್ಟ್ರದ ಅಭಿವೃದ್ಧಿಗಾಗಿ ಇದೆ. ಆದ್ದರಿಂದ ಸಂಹಿತೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೇ ಈ ದೇಶದ ಬಡವರಿಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ನೋಡಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ: ಅಮಿತ್ ಶಾ ಭೇಟಿಯಾದ ಮಹಾರಾಷ್ಟ್ರ ಸಂಸದರು – ರಾಜ್ಯ ಸಂಸದರ ದಿವ್ಯ ಮೌನ