ಹಾವೇರಿ: ಅಪರಿಚಿತ ಮಾನಸಿಕ ಅಸ್ವಸ್ಥನೊಬ್ಬನಿಗೆ ಯುವಕರು ಕಟಿಂಗ್, ಶೇವಿಂಗ್ ಮಾಡಿ ಸ್ನಾನ ಮಾಡಿಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಬಳಿ ಕೆಲವು ತಿಂಗಳುಗಳಿಂದ ಮಾನಸಿಕ ಅಸ್ವಸ್ಥ ಓಡಾಡಿಕೊಂಡಿದ್ದನು. ದಾಡಿ ಬಿಟ್ಟು, ಉದ್ದವಾದ ತಲೆಗೂದಲು ಬಿಟ್ಟು ವಿಕಾರಗೊಂಡಿದ್ದ. ಅಲ್ಲದೇ ತಿಂಗಳುಗಟ್ಟಲೇ ಸ್ನಾನ ಮಾಡದೇ ಹಾಗೇ ಓಡಾಡಿಕೊಂಡಿದ್ದನು.
ಈತನ ಸ್ಥಿತಿಯನ್ನ ನೋಡಿದ ಪಟ್ಟಣದ ಯುವಕರ ದಂಡು ಮಾನಸಿಕ ಅಸ್ವಸ್ಥನನ್ನ ಹಿಡಿದು ತಾವೇ ಕಟಿಂಗ್, ಶೇವಿಂಗ್ ಮಾಡಿದ್ದಾರೆ. ನಂತರ ಸೋಪು ಹಚ್ಚಿ ಸ್ನಾನ ಮಾಡಿಸಿ ಮಾನವೀಯತೆ ಮೆರೆದಿರುವುದರ ಜೊತೆಗೆ ಮಾನಸಿಕ ಅಸ್ವಸ್ಥನಿಗೆ ಹೊಸ ರೂಪು ನೀಡಿದ್ದಾರೆ.
ಸ್ನಾನ ಮಾಡಿಸಿದ ನಂತರ ಬೇರೆ ಬಟ್ಟೆ ತೊಡಿಸಿ ನಂತರ ಊಟ ನೀಡಿದ್ದಾರೆ. ಯುವಕರ ಕೈಯಿಂದ ಬಿಡುಗಡೆಯಾದ ಮಾನಸಿಕ ಅಸ್ವಸ್ಥ ಶುಚಿಯಾಗಿ ಪಟ್ಟಣದಲ್ಲಿ ಎಂದಿನಂತೆ ಓಡಾಡಿಕೊಂಡಿದ್ದಾನೆ.