ಹಾವೇರಿ: ಖಾಸಗಿ ಸ್ಕೂಲ್ ಬಸ್ ಮತ್ತು ಟಂಟಂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಬಳಿ ನಡೆದಿದೆ.
ಮೃತನನ್ನ ರಿಕ್ಷಾ ಚಾಲಕ ಮೂವತ್ತೆರಡು ವರ್ಷ ವಯಸ್ಸಿನ ಬೀರಪ್ಪ ಹೂಲಿಕಟ್ಟಿ ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿ ಕುಳಿತಿದ್ದ ಅರವತ್ತು ನಾಲ್ಕು ವರ್ಷದ ಪರಸಪ್ಪ ಮತ್ತು ಮೂವತ್ತೇಳು ವರ್ಷದ ನಿಂಗಪ್ಪ ಎಂಬುವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಕೂಲ್ ಬಸ್ ನಲ್ಲಿ ವಿದ್ಯಾರ್ಥಿಗಳು ಯಾರು ಇರಲಿಲ್ಲ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.