– ಪಡಿತರ ಅಂಗಡಿಯಲಿಲ್ಲ ಸಾಮಾಜಿಕ ಅಂತರ
ಹಾವೇರಿ: ಕೊರೊನಾ ಸೋಂಕು ತಡೆಗೆ ಲಾಕ್‍ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಪಡಿತರ ಪಡೆಯಲು ಸೇರಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನಾರಾಯಣಪುರ ದೊಡ್ಡಪ್ರಮಾಣದ ವ್ಯವಸಾಯ ಸಹಕಾರಿ ಸಂಘದ ವಿತರಣಾ ಕೇಂದ್ರದ ಮುಂದೆ ಜನರು ಪಡಿತರ ಪಡೆಯಲು ಜಮಾಯಿಸಿದ್ದಾರೆ. ಪಡಿತರ ವಿತರಣಾ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿಲಾಗಿತ್ತು. ಆದರೆ ಜನರು ಮಾತ್ರ ಗುಂಪು ಗುಂಪಾಗಿ ನಿಂತು ಪಡಿತರಕ್ಕಾಗಿ ಕಾಯುತ್ತಿದ್ದಾರೆ. ಸಾಮಾಜಿಕ ಅಂತರ ಅನ್ನೋದನ್ನು ಪಡಿತರ ಪಡೆಯಲು ತಂದ ಚೀಲಗಳಿಗೆ ಮಾತ್ರ ಸೀಮಿತ ಮಾಡಿದ್ದಾರೆ.
ಪಡಿತರ ಪಡೆಯಲು ತಂದ ಚೀಲಗಳನ್ನು ಸಾಮಾಜಿಕ ಅಂತರದಲ್ಲಿಟ್ಟು, ತಾವು ಮಾತ್ರ ಗುಂಪು ಗುಂಪಾಗಿ ಕುಳಿತು ಪಡಿತರಕ್ಕಾಗಿ ಕಾಯುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮಾತ್ರ ಗುಂಪು ಗುಂಪಾಗಿ ಪಡಿತರ ಪಡೆಯಲು ಜಮಾಯಿಸಿದ್ದಾರೆ.
ಪೊಲೀಸರು, ಕಂದಾಯ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾಕಷ್ಟು ಅರಿವು ಮೂಡಿಸಿದರೂ, ಜನರು ಮಾತ್ರ ಅದು ತಮಗೆ ಸಂಬಂಧಿಸಿದ್ದೆ ಅಲ್ಲ ಅನ್ನುವಂತೆ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ.