ಹಾವೇರಿ: ಅಯೋಧ್ಯೆಯ ಏರ್‌ಪೋರ್ಟ್‌ಗೆ ವಾಲ್ಮೀಕಿ ಹೆಸರಿಟ್ಟಿರುವುದು ಸಂತಸ ತಂದಿದೆ. ಮುಂದೆ ವಾಲ್ಮೀಕಿ ಮಂದಿರ (Valmiki Temple) ಸಹ ನಿರ್ಮಾಣವಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ರಾಣೇಬೆನ್ನೂರಿನಲ್ಲಿ ಮಾತನಾಡಿದ ಅವರು, ಜನರ ನಿರೀಕ್ಷೆಯಂತೆ ಒಳ್ಳೆಯ ರೀತಿಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣವಾಗಿದೆ. ದೇಶದ ಹಲವು ಪ್ರತಿಷ್ಠಿತ ಮಂದಿರಗಳಲ್ಲಿ ಇದು ಕೂಡಾ ಒಂದಾಗಿದ್ದು, ಆಧುನಿಕ ವಾಸ್ತುಶಿಲ್ಪದಿಂದ ಕೂಡಿದೆ. ರಾಜಕೀಯಕ್ಕೂ ಇದಕ್ಕೂ ಸಂಬಂಧ ಇದ್ದೇ ಇರುತ್ತದೆ. ನಮ್ಮ ದೇಶದಲ್ಲಿ ಹಾಗೆಯೇ ನಡೆದುಕೊಂಡು ಬಂದಿದೆ. ಅಭಿವೃದ್ಧಿ ಮತ್ತು ರಾಜಕೀಯ ಎರಡು ವಿಚಾರಗಳೂ ನಡೆಯುತ್ತವೆ. ಅದಕ್ಕೆ ತಕ್ಷಣವೇ ಕಡಿವಾಣ ಹಾಕಲು ಆಗುವುದಿಲ್ಲ. ಅಂತಹ ಬೆಳವಣಿಗೆಗಳಿಗೆ ಇನ್ನೂ ಸಮಯ ಬೇಕು ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ – ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆರಡು ದೂರು ದಾಖಲು
Advertisement
Advertisement
ಇನ್ನಿಬ್ಬರು ಡಿಸಿಎಂ ನೇಮಕಾತಿ ವಿಚಾರವಾಗಿ ಮಾತನಾಡಿ, ಅಂತಹ ಯಾವುದೇ ಯೋಚನೆ ಇಲ್ಲ. ಈ ವಿಚಾರ ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದೆ. ಇನ್ನೂ ಹಿಜಬ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಜಬ್ ಧರಿಸೋದು, ಬಿಡೋದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆ: ಪ್ರಮೋದ್ ಮುತಾಲಿಕ್