– ವಿಡಿಯೋ ಮೂಲಕ ಸಿಎಂಗೆ ಮನವಿ
ಹಾವೇರಿ: ಪಿಟ್ಸ್ ಕಾಯಿಲೆಯಿಂದ ಬಳಲುತ್ತಿರೋ ತನ್ನ ಮೂರೂವರೆ ವರ್ಷದ ಮಗುವಿಗೆ ಲಾಕ್‍ಡೌನ್‍ನಿಂದಾಗಿ ಔಷಧಿ ಸಿಗದೇ ತಾಯಿಯೋಬ್ಬರು ಗೋಳಾಡುತ್ತಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಜ್ಯೋತಿ ಮಡಿವಾಳರ ಅವರು ತಮ್ಮ ಮೂರೂವರೆ ವರ್ಷದ ಮಗ ದೈವಿಕ್‍ಗೆ ಔಷಧಿ ಸಿಗದೇ ಪರದಾಡುತ್ತಿದ್ದಾರೆ. ದೈವಿಕ್ ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಮಗನಿಗೆ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ತಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಮಗನಿಗೆ ಚಿಕಿತ್ಸೆ ನೀಡಿ ಥಯಾಮಿನ್ ಹೈಡ್ರೋಕ್ಲೋರೈಡ್ ಮತ್ತು ರಿಬೋಪ್ಲಾವಿನ್ ಔಷಧಿ ನೀಡಿದ್ದಾರೆ. ಆದರೆ ಈಗ ಔಷಧಿ ಖಾಲಿ ಆಗಿದ್ದು, ಔಷಧಿ ಇಲ್ಲದಿದ್ದರೆ ಮಗನಿಗೆ ತೊಂದರೆ ಆಗಲಿದೆ ಎಂದು ತಾಯಿ ಗೋಳಾಡುತ್ತಿದ್ದಾರೆ.
Advertisement
Advertisement
ಮಣಿಪಾಲ ಆಸ್ಪತ್ರೆ ಬಿಟ್ಟರೆ ಸ್ಥಳೀಯ ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ. ಲಾಕ್‍ಡೌನ್‍ನಿಂದ ಔಷಧಿ ತರಲು ಮಣಿಪಾಲ ಆಸ್ಪತ್ರೆಗೆ ಹೋಗಲು ಆಗುತ್ತಿಲ್ಲ. ಹೀಗಾಗಿ ಮಗನಿಗೆ ಔಷಧಿ ಕೊಡಿಸೋ ವ್ಯವಸ್ತೆ ಮಾಡುವ ಮೂಲಕ ಸಹಾಯ ಮಾಡಿ ಎಂದು ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ತಾಯಿ ಸಿಎಂಗೆ ಮನವಿ ಮಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಎಂ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ತಾಯಿಗೆ ಸಹಾಯ ಮಾಡಿ ಮಗುವಿನ ಜೀವ ಉಳಿಸಬೇಕಾಗಿದೆ.