ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು- ಯುವತಿ ಸಾವು

Public TV
1 Min Read
HAVERI LOVERS 1

ಹಾವೇರಿ: ಸ್ಲೀಪರ್ ಕೋಚ್ ಬಸ್ಸಿ (Sleeper Coach Bus) ನಲ್ಲಿ ವಿಷ ಕುಡಿದು ಪ್ರೇಮಿಗಳು ಮಲಗಿದ್ದು, ಯುವತಿ ಮೃತಪಟ್ಟ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ.

 ಹೇಮಾ ರಾಮಕೃಷ್ಣಪ್ಪ (20) ಮೃತಪಟ್ಟ ಯುವತಿ. ಇತ್ತ ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಘಟನೆ ವಿವರ: ಬಿ.ಕಾಂ ಫೈನಲ್ ಇಯರ್ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾಳಿಗೆ ಬಾಗಲಕೋಟೆ ಮೂಲದ ಅಖಿಲ್ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಈ ಹಿನ್ನೆಲಯಲ್ಲಿ ಜೋಡಿ ಈ ತೀರ್ಮಾನಕ್ಕೆ ಬಂದಿದೆ.

ಸಾಯೋದಕ್ಕೂ ಮುನ್ನ ನಮಗೆ ಮದುವೆಗೆ ನೀವು ಒಪ್ಪಿಗೆ ಕೊಡಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಬಾಂಬೆಗೆ ಹೋಗ್ತಾ ಇದ್ದೇವೆ ಎಂದು ಯುವತಿ ಫೋನ್ ಮಾಡಿ ಹೇಳಿದ್ದಳು. ಬಳಿಕ ಸ್ಲೀಪರ್ ಕೋಚ್ ಬಸ್ ನಲ್ಲೇ ವಿಷ ಕುಡಿದು ಮಲಗಿದ್ದಾರೆ. ಈ ನಡುವೆ ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನಲ್ಲಿದ್ದವರಿಗೆ ಅನುಮಾನ ಬಂದಿದೆ. ವಿಷದ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ಮಾಡಿದರು. ಆದರೆ ಯುವತಿ ಬದುಕುಳಿಯಲಿಲ್ಲ. ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಈ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಿಯಕರನಿಂದ ಪ್ರಿಯತಮೆ ಮರ್ಡರ್!

Share This Article