ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಗುದ್ದಿ ಯುವಕ ಮೃತಪಟ್ಟ ಘಟನೆ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ನಡೆದಿದೆ.
ಕೋಡ ಗ್ರಾಮದ ಶಿವಪ್ಪ ಮಲ್ಲೂರ (34) ಮೃತ ಯುವಕ. ಸಂಕ್ರಾಂತಿ ಹಬ್ಬದ ನಿಮಿತ್ತ ಕೋಡ ಗ್ರಾಮದಲ್ಲಿ ಶುಕ್ರವಾರ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯ ಆಯೋಜಿಸಲಾಗಿತ್ತು. ಆದರೆ ಸ್ಪರ್ಧೆಯ ನಡೆಸಿದ್ದ ಕಮೀಟಿಯ ಸದಸ್ಯರಾಗಿದ್ದ ಶಿವಪ್ಪ ಅವರು, ಜನರನ್ನು ನಿಯತ್ರಿಸಲು ಮುಂದಾಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
Advertisement
Advertisement
ಶಿವಪ್ಪ ಅವರ ಎದೆಯ ಭಾಗಕ್ಕೆ ಹೋರಿ ಗುದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಹಿರೇಕೆರೂರು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ಶಿವಪ್ಪ ಮೃತಪಟ್ಟಿದ್ದಾರೆ. ಮೃತದೇಹವನ್ನು ಹಿರೇಕೆರೂರು ತಾಲೂಕು ಸರಕಾರಿ ಆಸ್ಪತ್ರೆಗೆ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.