– ಮಾಜಿ ಸಿಎಂ ವಿರುದ್ಧ ‘ಕೈ’ ನಾಯಕ ಆನಂದಸ್ವಾಮಿ ಕಣಕ್ಕೆ
– ಉತ್ತರ ಕರ್ನಾಟಕ ಜಿಲ್ಲೆಗಳ ಹೆಬ್ಬಾಗಿಲು ಪ್ರವೇಶಿಸೋದು ಯಾರು?
ಹಾವೇರಿ/ಗದಗ: ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹಾವೇರಿ ಹೆಬ್ಬಾಗಿಲಿದ್ದಂತೆ. ಮುಂಬರುವ ಲೋಕಸಭಾ ಚುನಾವಣೆಗೆ ಹಾವೇರಿ-ಗದಗ (Haveri-Gadag) ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸ್ಪರ್ಧೆಗೆ ಇಳಿದಿರುವುದು ಕುತೂಹಲ ಮೂಡಿಸಿದೆ. ಇದು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಬಿಜೆಪಿ ಈ ಬಾರಿ ಬದಲಾವಣೆಯೊಂದಿಗೆ ‘ಲೋಕ’ ಸಮರಕ್ಕೆ ಧುಮುಕಿದೆ.
Advertisement
ಶಿವಕುಮಾರ್ ಉದಾಸಿ ಅವರ ಹ್ಯಾಟ್ರಿಕ್ ಗೆಲುವಿನೊಂದಿಗೆ ಹಾವೇರಿ-ಗದಗ ಕ್ಷೇತ್ರದಲ್ಲಿ ಬಿಜೆಪಿ ಭದ್ರ ನೆಲೆ ಸ್ಥಾಪಿಸಿತ್ತು. ಆದರೆ ಬರುವ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಲು ಉದಾಸಿ ಹಿಂದೇಟು ಹಾಕಿದ್ದರು. ವಿಷಯ ತಿಳಿಯುತ್ತಿದ್ದಂತೆ ಪಕ್ಷದಿಂದ ಅನೇಕ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಅವರಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಪ್ರಮುಖರು. ಇವರ ಜೊತೆ ಡಾ. ಮಹೇಶ ನಾಲವಾಡ, ಶಶಿಧರ ನಾಗರಾಜಪ್ಪ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಇರ‍್ಯಾರಿಗೂ ಮಣೆ ಹಾಕದೇ ಹೈಕಮಾಂಡ್ ಮಾಜಿ ಸಿಎಂ ಹಾಗೂ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಟಿಕೆಟ್ ನೀಡಿದೆ. ತಂದೆ ಎಸ್.ಆರ್.ಬೊಮ್ಮಾಯಿಯಂತೆಯೇ ಪುತ್ರ ಬಸವರಾಜ ಬೊಮ್ಮಾಯಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರುವ ನಿಟ್ಟಿನಲ್ಲಿ ಹೈಕಮಾಂಡ್ ಕೆಲಸ ಮಾಡಿದೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದ್ದೇವರ ಮಠ ಟಿಕೆಟ್ ಗಿಟ್ಟಿಸಿದ್ದಾರೆ. ಆನಂದಸ್ವಾಮಿ ಮತ್ತು ಬೊಮ್ಮಾಯಿ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದರಿಂದ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿದೆ. ಇದನ್ನೂ ಓದಿ: Dharwad Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾ ‘ಕೈ’?
Advertisement
Advertisement
ಕ್ಷೇತ್ರ ಪರಿಚಯ
ಗದಗ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿಕೊಂಡು ಹಾವೇರಿ-ಗದಗ ಲೋಕಸಭಾ ಕ್ಷೇತ್ರ ರಚನೆಯಾಗಿದೆ. 2008 ರಲ್ಲಿ ಗದಗ ಜಿಲ್ಲೆಯ ಮೂರು ಮತ್ತು ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಸೇರಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ರಚನೆಗೊಂಡಿದೆ. 2009 ರಲ್ಲಿ ಕ್ಷೇತ್ರವು ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಯಿತು. ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಕುಮಾರ್ ಉದಾಸಿ ಜಯಗಳಿಸಿದ್ದರು. ಅಲ್ಲಿಂದೀಚೆಗೆ ಸತತ ಮೂರು ಬಾರಿ (2009, 2014, 2019) ಬಿಜೆಪಿ ಗೆಲುವು ಸಾಧಿಸಿ ಭದ್ರಕೋಟೆಯಾಗಿಸಿಕೊಂಡಿದೆ.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹಾವೇರಿ ಜಿಲ್ಲೆಯ 5 ತಾಲ್ಲೂಕು ಹಾಗೂ ಗದಗ ಜಿಲ್ಲೆಯ ಮೂರು ತಾಲ್ಲೂಕುಗಳು ಬರುತ್ತಿವೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು-ರಟ್ಟಿಹಳ್ಳಿ, ರಾಣೇಬೆನ್ನೂರು, ಗದಗ, ರೋಣ, ಶಿರಹಟ್ಟಿ. ಇದನ್ನೂ ಓದಿ: Hassan Lok Sabha 2024: ದೊಡ್ಡಗೌಡ್ರ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಕಸರತ್ತು!
ಮತದಾರರು ಎಷ್ಟು?
ಹಾವೇರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 17,58,021 ಇದೆ. ಮಹಿಳೆಯರು- 8,68,510 ಮತದಾರರು, ಪುರುಷರು- 8,89,421 ಹಾಗೂ ತೃತೀಯಲಿಂಗಿಗಳು- 90 ಮತದಾರರಿದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವಕುಮಾರ ಉದಾಸಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಉದಾಸಿ ಅವರು 6,83,660 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ವಿರುದ್ಧ 1,40,882 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೊಸ ಅಭ್ಯರ್ಥಿಯನ್ನ ಹಾಕಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದರು. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?
ಕ್ಷೇತ್ರದಲ್ಲಿ ಪಾರುಪತ್ಯ
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಮೂರು ಬಾರಿ ಗೆಲವು ಸಾಧಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಲಿಂಗಾಯತ ಮತಗಳು ಹೆಚ್ಚು ಇರೋ ಕಾರಣಕ್ಕಾಗಿ ಬಿಜೆಪಿ ಆಭ್ಯರ್ಥಿ ಶಿವಕುಮಾರ ಉದಾಸಿ 3 ಭಾರಿ ಗೆಲವು ಸಾಧಿಸಿದ್ದರು. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಗೆದ್ದಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಕ್ಷೇತ್ರಗಳು ಹೆಚ್ಚಾಗಿದ್ದರಿಂದ ಎರಡು ಪಕ್ಷಗಳು ತಮ್ಮದೆಯಾದ ಲೆಕ್ಕಚಾರವನ್ನ ಮಾಡುತ್ತಿವೆ.
ಬಿಜೆಪಿ ಪ್ಲಸ್: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರು ಭಾರಿ ಗೆದ್ದು ಬಿಜೆಪಿ ಭದ್ರಕೋಟೆ ಮಾಡಿಕೊಂಡಿರುವುದು, ಜಿಲ್ಲೆಯಲ್ಲಿ ಮೋದಿಗಿರುವ ಬಹುದೊಡ್ಡ ವರ್ಚಸ್ಸು, ಹಿಂದುತ್ವದ ಪರ ಸಂಘಟನೆ ಹಾಗೂ ದೊಡ್ಡ ಸಮುದಾಯದ ಒಗ್ಗಟ್ಟು, ಹಾವೇರಿ-ಗದಗ ಜಿಲ್ಲೆಯಲ್ಲೆ ಯಶಸ್ವಿ ರೈಲ್ವೆ ಕಾಮಗಾರಿ ಹಾಗೂ ಹೆದ್ದಾರಿ ಕಾಮಗಾರಿ ಕೆಲಸಗಳಾಗಿವೆ.
ಬಿಜೆಪಿ ಮೈನಸ್: ರಾಜ್ಯ ಬಿಜೆಪಿ ಸರ್ಕಾರವಿದ್ದಾಗ ಉತ್ತಮ ಕೆಲಸ ಮಾಡದಿರುವುದು, ಸಿಎಂ ಹಾಗೂ ಕೃಷಿ ಸಚಿವರಿದ್ದರೂ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ, ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಬಿಜೆಪಿಯ ಹೀನಾಯ ಸೋಲು, ಪಕ್ಷದಲ್ಲಿ ಟಿಕೆಟ್ ಸಂಬಂಧ ಅಸಮಾಧಾನ, ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಪಾರುಪತ್ಯ ಸಾಧಿಸುತ್ತಿರುವುದು.
ಕಾಂಗ್ರೆಸ್ ಪ್ಲಸ್: ಕಾಂಗ್ರೆಸ್ ಪಕ್ಷ ಕೆಳಮಟ್ಟದಿಂದ ಜಿಲ್ಲೆಯಲ್ಲಿ ಪಾರುಪತ್ಯ ಸಾಧಿಸುತ್ತಿರುವುದು, ವಿಧಾನಸಭೆಯ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು, ಬಿಜೆಪಿಯ ದುರಾಡಳಿತವನ್ನು ಜನರಿಗೆ ತಲುಪಿಸಲು ಸಲೀಸಾದ ಮಾರ್ಗಗಳಿರುವುದು, ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ.
ಕಾಂಗ್ರೆಸ್ ಮೈನಸ್: ಮೂರು ಭಾರಿ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಸೋಲು, ಸೂಕ್ತವಾದ ಅಭ್ಯರ್ಥಿ ಕಾಂಗ್ರೆಸ್‌ಗೆ ಸಿಗದೆ ಇರುವುದು, ಜನರ ವೋಟನ್ನು ಮತಗಳನ್ನಾಗಿ ಮಾಡುವ ಪ್ರಭಾವಿ ನಾಯಕರು ಇಲ್ಲದಿರುವುದು, ಕಾಂಗ್ರೆಸ್ ಶಾಸಕರಿಗೆ ಸೂಕ್ತ ಸ್ಥಾನ ಸಿಗದ ಹಿನ್ನಲೆ ಅಸಮಾಧಾನ. ಇದನ್ನೂ ಓದಿ: Chikkodi Lok Sabha 2024: ‘ಕೈ’ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯುತ್ತಾ? – ಮತ್ತೊಂದು ಗೆಲುವಿಗೆ ಬಿಜೆಪಿ ತಂತ್ರವೇನು?
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
2009- ಶಿವಕುಮಾರ ಉದಾಸಿ (ಬಿಜೆಪಿ)- 87,920 ಮತಗಳ ಅಂತರ
2013- ಶಿವಕುಮಾರ ಉದಾಸಿ (ಬಿಜೆಪಿ)- 87,571
2019- ಶಿವಕುಮಾರ ಉದಾಸಿ (ಬಿಜೆಪಿ)- 1,40,882
ಜಾತಿವಾರು ಲೆಕ್ಕಾಚಾರ
ಲಿಂಗಾಯತ – 6,80,000
ಕುರುಬ – 2,70,000
ಪರಿಶಿಷ್ಟ ಜಾತಿ – 2,00,000
ಪಂಗಡ – 1,25,000
ಮುಸ್ಲಿಂ – 2,95,000
ಗಂಗಾಮತ – 50,000
ಬ್ರಾಹ್ಮಣ – 45,000
ಮರಾಠ – 45,000
ಇತರೆ – 1,50,000