ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಡಿರುವ ಲಾಕ್‍ಡೌನ್‍ನಿಂದಾಗಿ ರೈತರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈ.ಟಿ ಹೊನ್ನತ್ತಿ ಗ್ರಾಮದ ರೈತ ಗುಡ್ಡಪ್ಪ ಕುಲಕರ್ಣಿ ಮೂರು ಎಕ್ರೆ ಜಮೀನಿನಲ್ಲಿ ಪಪ್ಪಾಯಿ ಗಿಡಗಳನ್ನ ಬೆಳೆಸಿದ್ದರು. ಒಳ್ಳೆಯ ಪಪ್ಪಾಯಿ ಹಣ್ಣುಗಳು ಕೂಡ ಚೆನ್ನಾಗಿ ಬೆಳೆದಿದ್ದವು. ಆದರೆ ಲಾಕ್‍ಡೌನ್ ಹಿನ್ನೆಲೆ ಪಪ್ಪಾಯಿ ಹಣ್ಣುಗಳನ್ನು ಮಾರಾಟ ಮಾಡಲಾಗದೆ, ಅವುಗಳು ಗಿಡದಲ್ಲೇ ಕೊಳೆಯುತ್ತಿರುವುದನ್ನು ಕಂಡು ಗುಡ್ಡಪ್ಪ ಅವರು ಕಂಗಾಲಾಗಿದ್ದರು.
Advertisement
Advertisement
ಈ ನಷ್ಟದಿಂದ ಬೇಸತ್ತ ರೈತ ಗುಡ್ಡಪ್ಪ ಅವರು ಐದಾರು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಪಪ್ಪಾಯಿ ಗಿಡಗಳನ್ನ ತಾವೇ ನಾಶ ಮಾಡಿದ್ದಾರೆ. ಕೊಡಲಿಯಿಂದ ಪಪ್ಪಾಯಿ ಗಿಡಗಳನ್ನು ಕಡಿದು ಹಾಕ್ತಿದ್ದಾರೆ.